ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು
ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು
ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು,
ಗರ್ವದಿ ಮೆರೆವೆ ನಾ ಕನ್ನಡಿಗನೆಂದು
ನಿನ್ನ ಶರಣು ನಾ ತಾಯಿ ಜೀವವಿರುವವರೆಗೂ
ನಿನ್ನ ನೆಲದಿ ಜನ್ಮಿಸುವೆ ಜನುಮ-ಜನುಮದವರೆಗೂ ||೧||
ನಿನ್ನ ನುಡಿಯಿದು ಅಮೃತಸುಧೆಯಂತೆ,
ಎಷ್ಟು ಸುಂದರ, ನುಡಿಮುತ್ತುಗಳು ಮುತ್ತುಹವಳಗಳಂತೆ,
ನಿನ್ನ ನಿಸರ್ಗದ ಮಡಿಲು ಹಸಿರು ಹಾಸಿಗೆಯಂತೆ,
ಎಂತ ಮನೋಹರ, ಮನಸಿಗೆ ಮುದನೀಡುವಂತೆ ||೨||
ನಡೆದಿರುವೆ ನಿನ್ನೀ ಪಾವನ ಮಡುವಿನಲಿ,
ಮರೆತಿರುವೆ, ತೊರೆದಿರುವೆ ಚಿಂತೆಗಳ ಬಾಳಿನಲಿ,
ಹೊಸ ಸೂರ್ಯನಂತೆ, ಚಿಮ್ಮಿರುವೆ ಮನದೊಳಗೆ ಬೆಳಕನ್ನು
ಹೊಸ ಚಂದ್ರನಂತೆ, ಹೊಮ್ಮಿರುವೆ ಮೊಗದೊಳಗೆ ಹೊಳಪನ್ನು ||೩||
ನಿನ್ನೀ ಪ್ರೀತಿಯ ತೊರೆದು, ಬೇರೆಡೆ ನಡೆದಿದ್ದೆ
ಆ ಅಮೃತದ ಸವಿಯ ಮರೆತಿದ್ದೆ, ಮತಿಗೆಟ್ಟು ಹೊರಟಿದ್ದೆ,
ಕೆಲಕಾಲದಲೆ ತಿಳಿದೆ, ನಿನ್ನಂತಿಲ್ಲ ಎಲ್ಲೂ ನಾಡು ಮಧುರ, ಅಜರಾಮರ,
ನಡೆಬಂದೆ ಅರಸಿ, ನಿನ್ನ ವಾತ್ಸಲ್ಯದ ಸವಿಸವಯಲು ಆಗಿ ನಾ ಪಾಮರ ||೪||
ಕಂದನಿವನು, ಕ್ಷಮಿಸುವೆಯೇನು, ಕರುಣಾಮಯಿ ಕರುನಾಡ ಕನ್ನಡತಿ,
ಕಂಗಳಲಿ ಕನ್ನಡದ ಕವಿತೆಯನು ಕರಮುಗಿದು ಕ್ಷಮಿಸೆಂದು ಕೋರಿದೆನು,
ಕರುಣಾಮಯಿಯಾಗಿ ಕಾಪಾಡಿರುವೆ ಕಂದನಿವನನ್ನು,
ಕರುಣಿಸಿರುವೆ ಕ್ಷಮೆಯನು ಕಂಗಳಲಿ ಕಣ್ಣೀರೊಂದಿಗೆ ||೫||
ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು,
ಗರ್ವದಿ ಮೆರೆವೆ ನಾ ಕನ್ನಡಿಗನೆಂದು
ಎಲ್ಲ ಕನ್ನಡದ ಕಂದಮ್ಮಗಳಿಗೆ ನಮ್ಮ ಕರುನಾಡ ರಾಜ್ಯೊತ್ಸವದ ಶುಭಾಶಯಗಳು!
Comments
ಉ: ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು
In reply to ಉ: ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು by hpn
ಉ: ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು
ಉ: ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು
In reply to ಉ: ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು by makrumanju
ಉ: ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು