ಯಾರು ಬಡವ?
ಮೊನ್ನೆ ನನ್ನ ಹಳ್ಳಿಗೆ ಹಬ್ಬ ಆಚರಿಸಲು ಹೋಗಿದ್ದೆ. ಅಲ್ಲಿ ನಮಗೆ ಒಂದು ಎಕರೆ ತೋಟ,ಒಂದು ಹಿತ್ತಲು[ಕೈತೋಟ],ಅಲ್ಲೊಂದು ಚಿಕ್ಕ ಮನೆ, ಮುಖ್ಯ ಬೀದಿಯಲ್ಲಿ ವಾಸಕ್ಕೊಂದು ಮನೆ ಇದೆ. ನಾವು ಮೂರು ಜನ ಸೋದರರು.ಅಪ್ಪ ಅಮ್ಮ ಸ್ವರ್ಗಸ್ತರಾಗಿ ೮-೧೦ ವರ್ಷಗಳಾಯ್ತು.ಅಣ್ಣ ಬೆಂಗಳೂರಿನಲ್ಲಿ, ನಾನು ಹಾಸನದಲ್ಲಿ ಸರ್ಕಾರಿ ಕೆಲಸದಲ್ಲಿದ್ದೀವಿ.ಹಳ್ಳಿಯ ತೋಟ,ಮನೆ ನೋಡಿಕೊಂಡು ನನ್ನ ತಮ್ಮ ಇದ್ದಾನೆ.ಅವನಿಗೆ ಒಬ್ಬಮಗ,ಒಬ್ಬ ಮಗಳು.ಮಗನನ್ನು ನಾನೇ ಓದಿಸ್ತಾ ಇದ್ದೀನಿ. ಮಗಳು ಹಳ್ಳಿಯಲ್ಲಿಯೇ ಪಿಯುಸಿ ಒದುತ್ತಿದ್ದಾಳೆ.ಇಷ್ಟೆಲ್ಲಾ ನಮ್ಮನೆ ಪುರಾಣ ಏಕೆ ಬರೆದೆ ಎಂದರೆ, ನಾನು ಹಳ್ಳಿಗೆ ಹೋಗಿದ್ದೆ ಅಂದೆನಲ್ಲಾ,ಅಂದು ಏನಾಯ್ತೆಂದರೆ ನನ್ನ ತಮ್ಮ ಊರಮುಂದೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ತರಕಾರಿ ಕೊಂಡು ತಂದ.ಅಲ್ಲೂ ಕೂಡ ಕಾಲು ಕೇಜಿ ಬೀನ್ಸ್ ಗೆ ೧೦ ರೂಪಾಯಿ,ಕಾಲು ಕೇಜಿ ಕ್ಯಾರೆಟ್ ಗೆ ೧೦ ರೂಪಾಯಿ.ಸರಿ ಐವತ್ತು ರೂಪಾಯಿಗಳ ತರಕಾರಿಯನ್ನು ಜೇಬಿಗೆ ತುಂಬಿಕೊಂಡು ಬಂದ. ಅದನ್ನು ನೋಡಿದಕೂಡಲೇ ನನಗೆ ಅತೀವ ದು:ಖ, ಅವನಮೇಲೆ ಬೇಸರ ಒಟ್ಟಿಗೆ ಆಯ್ತು. ಕಾರಣ ಏನು ಗೊತ್ತಾ? ಊರಿನಲ್ಲೆಲ್ಲಾ ನಲ್ಲಿ ನೀರು ಸಮೃದ್ಧ ವಾಗಿದೆ. ಕೆರೆ ಕೆಳಗಿನ ತೋಟ.ತೋಟದಲ್ಲಿ ಹಳೆಯ ತೆಂಗು,ಅಡಿಕೆ ಮರಗಳನ್ನು ಹೊರತು ಪಡಿಸಿ ಎಲ್ಲಾ ಪಾಳು ಬಿದ್ದಿದೆ.ಹಿತ್ತಲಲ್ಲಿ ಪಾರ್ತೇನಿಯಮ್ ಸಮೃದ್ಧವಾಗಿ ಬೆಳೆದು ನಿಂತಿದೆ.ಅಲ್ಲಿ ತರಕಾರಿ ಬೆಳೆದರೆ ತಾನು ತಿಂದು ಉಳಿದ ತರಕಾರಿ ಮಾರಿದರೂ ಸಾಕಷ್ಟು ಕಾಸು ಮಾಡ ಬಹುದು. ಅದು ಬಿಟ್ಟು ೫೦ ರೂಪಾಯಿ ತೆತ್ತು ಹಿಡಿಯಷ್ಟು ತರಕಾರಿ ಕೊಂಡು ತರಲು ನಾಚಿಕೆ ಯಾದರೂ ಆಗಬೇಡವೇ?ಇಲ್ಲ! ನನ್ನ ತಮ್ಮನಿಗೆ ಏನೂ ಅನ್ನಿಸಲೇ ಇಲ್ಲ.ಬಚ್ಚಲು ಮನೆಯಲ್ಲಿ ನೀರು ಕಾಯಿಸುತ್ತಾ ಕುಳಿತಿದ್ದೆ.ತೆಂಗಿನ ಗರಿ ಸಮೃದ್ಧವಾಗಿತ್ತು.ಚಾಕುವಿನಿಂದ ಹೆರೆದು ತೆಂಗಿನಕಡ್ಡಿ ತೆಗೆದೆ. ಎರಡು ಪೊರಕೆ ಸಿದ್ಧವಾಯ್ತು. ನಗರದಲ್ಲಿ ಅದಕ್ಕೆ ಏನಿಲ್ಲ ವೆಂದರೂ ಐದು ರೂಪಾಯಿ ಕೊಡಲೇ ಬೇಕು. ಈ ರೀತಿಯ ಕಡ್ಡಿ ತೆಗೆಯದ ತೆಂಗಿಗಗರಿ ನಿತ್ಯವೂ ಸುಟ್ಟು ಬಸ್ಮ ವಾಗುತ್ತೆ. ಏನಿಲ್ಲ ವೆಂದರೂ ತಿಂಗಳಲ್ಲಿ ಅದರಿಂದ ನಿರಾಯಾಸವಾಗಿ ನೂರಿನ್ನೂರು ರೂಪಾಯಿ ಆದಾಯ ಮಾಡಿಕೊಳ್ಳಬಹುದು. ಹುಡುಕುತ್ತಾ ಹೋದರೆ ದುಡಿಯಲು ನೂರಾರು ದಾರಿ.ಈ ಭಾರಿ ಮಳೆಯೂ ಚೆನ್ನಾಗಿದೆ.ಎಲ್ಲೆಲ್ಲೂ ಹಸಿರು.ಹಸು ಒಂದನ್ನು ಸಾಕುವುದೇನೂ ಕಷ್ಟವಿಲ್ಲ. ಆದರೆ ಡೈರಿಯಿಂದ ಅರ್ಧ ಲೀಟರ್ ಹಾಲು ಕೊಂಡುತರುವಾಗ ಏನೂ ಅನ್ನಿಸುವುದೇ ಇಲ್ಲ ವಲ್ಲಾ!!
"ಯಾಕಪ್ಪಾ, ಎಲ್ಲಾ ಪಾಳು ಬಿಟ್ಟಿದ್ದೀಯಲ್ಲಾ? ಎಂದರೆ, ತಟ್ಟನೆ ಬರುವ ಉತ್ತರ" ಈಗ ಆಳು ಸಿಕ್ಕುವುದೇ ಇಲ್ಲ. ಎಲ್ಲಾ ಹಾಸನದ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗ್ತಾರೆ".ಕೂಲಿ ಜನಸಿಕ್ಕಲಿಲ್ಲ ಎಂದ್ರೆ ಬೇಸಾಯ ಮಾಡುವಂತಿಲ್ಲಾ ಎಂಬುದೇ ಹಳ್ಳಿಯಲ್ಲಿ ಜನರ ನಿಲುವು. ಅದರಿಂದಲೇ ತೋಟ ಹೊಲ ಗದ್ದೆಗಳಲ್ಲಿ ಕೃಷಿ ಮಾಡುವವರೇ ಇಲ್ಲ. ಏನಿದ್ದರೂ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಬೇಕು, ಪಂಪ್ ನೀರೆತ್ತಬೇಕು, ಇಲ್ಲದಿದ್ದರೆ ಕೃಷಿಯ ಮಾತೇ ಇಲ್ಲ....[ಇನ್ನೂ ಇದೆ]
Comments
ಉ: ಯಾರು ಬಡವ?
In reply to ಉ: ಯಾರು ಬಡವ? by ASHOKKUMAR
ಉ: ಯಾರು ಬಡವ?
ಉ: ಯಾರು ಬಡವ?
ಉ: ಯಾರು ಬಡವ?
ಉ: ಯಾರು ಬಡವ?
In reply to ಉ: ಯಾರು ಬಡವ? by savithru
ಉ: ಯಾರು ಬಡವ?