ನನ್ನ ಮತ

ನನ್ನ ಮತ

ಅಮೇರಿಕ ರಾಷ್ಟ್ರದ ಅತಿ ಹಿಸ್ಟೋರಿಕ್ ಚುನಾವಣೆ ಇಂದು ನಡೆಯುತ್ತಿದೆಯೆಂದರೆ ತಪ್ಪಾಗಲಾರದೇನೋ. ಈವತ್ತಿನ ಚುನಾವಣೆಯ ಫಲಿತಾಂಶ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ. ಯಾಕಂದ್ರೆ, ಇತ್ತಿಚಿನ ಲೆಹಮ್ಯಾನ್ ಬ್ರದರ್ಸ್ ಗೋತಾ ಹೊಡೆದಾಗ ಸಾಬೀತಾದಂತೆ, ಅಮೇರಿಕದ ಕಷ್ಟ-ಸುಖದ ಮೇಲೆ ಬಹಳಷ್ಟು ದೇಶಗಳ ಭವಿಷ್ಯ ಅವಲಂಬಿತವಾಗಿದೆ. ಈ ಚುನಾವಣೆಯಲ್ಲಿ ನಾನೂ ಸಹ ನನ್ನ ಮತವನ್ನು ಚಲಾಯಿಸಿ ಬಂದೆ. ಆಶ್ಚರ್ಯವೆಂದರೆ "ಐ ವೋಟೆಡ್" ಎನ್ನುವ ಸ್ಟಿಕರ್ ತೊಟ್ಟು ಈಚೆ ಬಂದಾಗ ಮನದಲ್ಲಿ ಮೂಡಿದ ಹೆಮ್ಮೆ, ಇಲ್ಲಿ ಗ್ರೀನ್ ಕಾರ್ಡ್ ಸಿಕ್ಕಿದಾಗ ಆಗಲಿಲ್ಲ, ಸಿಟಿಜನ್ ಆದಾಗ ಆಗಲಿಲ್ಲ. ಬದಲಿಗೆ ಆಗೆಲ್ಲ ಒಂಥರ ತಾಯ್ನಾಡಿಗೆ ದ್ರೋಹ ಬಗೆದ ತಪ್ಪಿತಸ್ಥ ಅನುಭವ. ಬಹುಶಃ ಕಾಲಕ್ರಮೇಣ ನಾನು ಒಂದು ದೇಶದ ಪ್ರಜೆಯೆನ್ನುವುದಕ್ಕಿಂತ ಒಂದು "ಗ್ಲೋಬಲ್ ಕಮೋಡಿಟಿ" ಎನ್ನುವ ಭಾವನೆ ನನ್ನಲ್ಲೇ ಸೃಷ್ಟಿಯಾಗಿದೆ ಅನ್ನಿಸುತ್ತೆ. ನಾನು ಮಾಡುವ ಕೆಲಸ, ನಾನು ಬದುಕುವ ಬದುಕು, ಇಲ್ಲಿಗಷ್ಟೆ ಸೀಮಿತವಲ್ಲ. ನನ್ನ ಕಾರ್ಯ ಮುಟ್ಟುವ ವಲಯ "ಲಿಮಿಟ್ ಲೆಸ್" ಅನ್ನಿಸತೊಡಗಿದೆ. ಅರೆ, ಇದನ್ನೆ ಅಲ್ಲವೆ ಬೇರೆ ದೇಶದ ಜನರು ಅಮೇರಿಕದ "ಬಿಗ್ ಬ್ರದರ್" ಅಥವ "ಬಿಗ್ ರೋಗ್" ಆಟಿಟ್ಯುಡ್ ಅಂತ ಅಲ್ಲಗೆಳೆಯುವುದು! ಇದೀಗ ನಾನು ಅಮೇರಿಕದ ಒಂದು ಸಾಮಾನ್ಯ ಪ್ರಜೆ ಆಗ್ಬಿಟ್ಟಿದ್ದೀನಿ ಅನ್ನುವುದರಲ್ಲಿ ಸಂಶಯವೇ ಇಲ್ಲ :-)

Rating
No votes yet

Comments