ಕೌಪೀನ ಬ್ರಹ್ಮಚಾರಿ

ಕೌಪೀನ ಬ್ರಹ್ಮಚಾರಿ

Comments

ಬರಹ

ಒಂದೂರಲ್ಲಿ ಒಬ್ಬ ಸರಳ ಬ್ರಹ್ಮಚಾರಿಯಿದ್ದ. ಅವನ ಧರಿಸುತ್ತಿದ್ದುದು ಒಂದು ಕೌಪೀನ ಮಾತ್ರ. ಅವನ ಬೞಿಯಿದ್ದುದು ಎರಡು ಕೌಪೀನಗಳು ಮಾತ್ರ. ಒಂದು ಒಗೆದು ಹರವುವುದು. ಇನ್ನೊಂದು ಧರಿಸಿಕೊಳ್ಳುವುದು. ಒಟ್ಟು ಎರಡೇ. ಒಂದು ದಿನ ಬ್ರಹ್ಮಚಾರಿ ನೋಡುತ್ತಾನೆ ತಾನು ಒಗೆದು ಹರವಿದ ಕೌಪೀನವನ್ನು ಇಲಿಯೊಂದು ಕತ್ತರಿಸಿ ಹಾಕಿದೆ. ಬ್ರಹ್ಮಚಾರಿಗೆ ತಳಮಳವಾಯ್ತು. ಇಲಿ ಕೌಪೀನ ಹರಿಯದಂತೆ ಕಾಪಾಡುವುದು ಹೇಗೆ? ಯಾರೋ ಹೇೞಿದರು ಬೆಕ್ಕು ಸಾಕು ಎಂದು. ಬೆಕ್ಕು ಸಾಕಿದ. ಬೆಕ್ಕಿಗೆ ಹಾಲು ಹಾಕಬೇಕಲ್ಲ? ಅದೂ ಸಮಯದಿಂದ ಸಮಯಕ್ಕೆ. ಯಾರೋ ಹೇೞಿದರು ಬೆಕ್ಕು ನೋಡಿಕೊಳ್ಳಲು ಒಂದು ಮದುವೆಯಾಗು. ಮದುವೆಯಾದರೆ ಬೆಕ್ಕು ಮತ್ತು ನಿನ್ನನ್ನು ನೋಡಿಕೊಳ್ಳಲು ಒಬ್ಬಳು ಹೆಂಡತಿಯಂತ ಇರುತ್ತಾಳೆ ಅಂತ. ಸರಿ ಬ್ರಹ್ಮಚಾರಿ ಮದುವೆಯಾದ. ಅವಳಿಂದ ಅವನಿಗೆ ಮಕ್ಕಳಾದರು. ಸಂಸಾರದ ತಾಪತ್ರಯದ ಅಱಿವು ಬ್ರಹ್ಮಚಾರಿಗಾಯ್ತು. ಇದಱಿಂದ ತಳಮಳಿಸಿ ದೇವರಲ್ಲಿ ಮೊಱೆಯಿಟ್ಟ. ಆಗ ದೇವರು ಹೇೞಿದ, "ಏ ಹುಚ್ಚಪ್ಪಾ, ಇದೆಲ್ಲ ಆದದ್ದು ನಿನ್ನ ಹಱಿದ ಕೌಪೀನದ ವ್ಯಾಮೋಹದಿಂದ. ಆ ಹಱಿದ ಕೌಪೀನ ಬಿಸುಟು ಬೇಱೆ ಯಾರಿಂದಲೋ ಒಂದು ತುಂಡು ಬಟ್ಟೆ ಕೌಪೀನಕ್ಕೆ ಕೇಳಿದ್ದರಾಗಿತ್ತಲ್ಲವೇ" ಎಂದ. ಆಗಱಿವಾಯ್ತು ಆ ಸರಳ ಮನುಷ್ಯನಿಗೆ ವ್ಯಾಮೋಹ ಮನುಷ್ಯನನ್ನು ಯಾವ ಸ್ಥಿತಿಗೆ ತಂದಿಡುತ್ತದೆ ಅಂತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet