ಬರೀ ಇದೇ ಆಯ್ತು! ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋದು.

ಬರೀ ಇದೇ ಆಯ್ತು! ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋದು.

ಒಳ್ಳೇ projectಉ. ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋ ಕೆಲ್ಸ. ಸುಮ್ನೆ spec ಕೊಟ್ಟ್ರೆ ಸಾಕು, ಯಾವ್ ಪ್ರೋಗ್ರಾಮಾದ್ರೂ ಸರಿ, ಮಿಕ್ಕಿದ್ದೆಲ್ಲ ಅದೆ ಬರ್ದ್ ಮುಗ್ಸಿ ಸುರೀತಿರ್ಬೇಕು, ಅಂಥಾದ್ದು. ಹೆಸ್ರು ನೆನ್ಪಿಲ್ಲ. :) team ನಲ್ಲಿ ಒಂದೆಂಟ್ ಜನ ಇದ್ದ್ವಿ. ನೆನ್ಪಲ್ಲಿರೊ ಹಾಗೆ, mostly, ಯಾವ್ದೊ ಬೇರೆ ದೇಶ್ದಲ್ಲಿರೊ ಕಂಪ್ನಿ. ನನ್ ಬ್ಯಾಚ್ಮೇಟ್ಸೆಲ್ಲ ಮದ್ವೆ ಮಾಡ್ಕೊಂಡ್ ಆಗಿರೋರು. ಆರಾರೂವರೆಗೆಲ್ಲ ಎನಾದ್ರು ಕತೆ ಬಿಟ್ಟು ಆಪೀಸಿಂದ ರೈಠೇಳೋರೆ. ನಾನೊಬ್ನು ಗೂಬೆ ಥರ ಕೂತು ಕೆಲ್ಸ ಮಾಡ್ತಿದ್ದೆ. ಡೆಲಿವರಿ ಡೇಟು (projectಇಂದು, ಮತ್ತ್ಯಾರ್ಗು ಅಲ್ಲ) ಓಡ್ಕೊಂಡ್ ಹತ್ರ ಬರ್ತಿತ್ತು. ಹಗ್ಲೂ ರಾತ್ರಿ ಕೆಲ್ಸ್ವೋಕೆಲ್ಸ. ರಿಲೀಸ್ ಹಿಂದಿನ್ ದಿನ ದರಿದ್ರ ಕೋಡು ನೆಟ್ಗೆ ಓಡ್ತಿಲ್ಲ. ಇನ್ನೇನು, ಮಾಮೂಲಿ ನಮ್ದೇವ್ರು ಬರ್ದಿರೊ ಡೀಬಗ್ಗರ್ (ಅದೇ ನಮ್ ಜೀಡೀಬಿ :)) ಬಳ್ಸಿ fork ಆಗಿದ್ ನಾಕ್ನೆ childನ ಜಾಲಾಡ್ತಾ ಇದ್ದೆ. ಸಿಗೆ ಬಿತ್ತು ದರಿದ್ರ ಕೊಳಕ್ ಲೈನು. ಅದೇ ಹಳೆ ternary ಆಪ್ರೇಟರ್ರು. ಬರ್ದಿದ್ ಗುಬಾಲ್ ಯಾವನೋ ಅಂತ ಬಯ್ಕೊಂಡು, ಸರಿ ರುಪಾರಿ ಮುಗ್ಸಿ commit ಮಾಡಿ ಸುಟ್ಸಾಯ್ಲಿ ಅಂತ ಮನೆಗೋಡ್ದೆ. ಬೆಳ್ಗೆ ಬಂದು ಚಿಂದಿಯಾಗಿ ರಿಲೀಸ್ ಮುಗ್ಸಿ ಖುಶ್ಯಾಗಿ ಕುಣ್ದಾಡಿದ್ದೆ! ಸರಿ ಎಲ್ಲ ಮುಗೀತು, ನಮ್ teammates ಜೊತೆ ಪಾರ್ಟಿ. ಪೀಯೆಮ್ಮೊ, ಕಿಸೀತಾನೆ ಇದ್ದ. ( ಅವ್ನ್ಮಕ್ವೆ ನೆನ್ಪಿಲ್ಲ, ಆ ದೇಶ್ದೋನೆ ಅಂತ ನೆನ್ಪು)

ಮಾರ್ನೆ ದಿನ ಹೋದೆ ಆಪೀಸ್ಗೆ. ನಮ್ ಬ್ಯಾಚ್ನೋರೆಲ್ಲ fullಉ ಗುರಾಯಿಸ್ತಾ ಲುಕ್ಬಿಡ್ತಾಇದ್ರು. ಏನ್ ವಿಸ್ಯ ನೋಡಿದ್ರೆ ನಮ್ಮೆಲಾರ್ಗು ಪಿಂಕ್ಸ್ಲಿಪ್ಪು ರೆಡಿ ಮಾಡ್ಬುಟ್ಟವ್ರೆ ಕಂಪ್ನಿನೋರು ಕಳ್ಳ್ರು. ಯಾಕ್ರಯ್ಯ ಅಂತ ಕೇಳಿದ್ರೆ, ಇದ್ಯಲ್ಲಪ್ಪ ನೀನ್ ಗೀಚಿರೊ ಪ್ರೊಗ್ರಾಮು, ಅದೆ ಸುರ್ದ್ಕೊಡತ್ತೆ ಬೇಕಿರೊ ಪ್ರೊಗ್ರಾಮ್ನ, ನಿಮ್ನ್ ಕಟ್ಕೊಂಡೀಗೇನಾಗ್ಬೇಕ್ ನಮ್ಗೆ ಅಂತ ಉತ್ತರ.

ಅಷ್ಟ್ರಲ್ಲಿ ನನ್ ಕೊಲೀಗು ಫೋನ್ಮಾಡಿ ಒಂಬತ್ತಾಯ್ತು ಎದ್ದೆಳೊ ದ್ರಾಬೆ ಅಂತ ಏಳ್ಸ್ದ.

ಇದಾಗಿದ್ದು ಸ್ವಲ್ಪ ದಿನಗಳ ಹಿಂದೆ. mostly ಸೆಪ್ಟೆಂಬರ್ ಇರ್ಬೇಕು ... metaprogamming ಮೇಲೆ ಕೆಲ್ಸ ಮಾಡ್ತಿದ್ದೆ. ನಂಗೋ, ಅದು ಮೊದ್ಲೇ ತುಂಬಾ ಇಷ್ಟ, so ಸಿಕ್ಕಾಪಟ್ಟೆ ತಲೆಗ್ ಹಚ್ಕೊಂಡ್ ಕೊಂಬ್ಗೀಚ್ತಿದ್ದೆ. (code ಬರೀತಿದ್ದೆ). ರಾತ್ರಿ ಸುಮಾರು ಒಂದೂ ಮುಕ್ಕಾಲಿಗೆ ಬಿದ್ಗೊಂಡೆ. ಬಿತ್ತು ನೋಡಿ ಕನ್ಸು. ಮೇಲ್ಗೀಚಿರೋದು ಅದನ್ನೆ.

Rating
No votes yet

Comments