ಬಸವಣ್ಣನವರ ವಚನ ಸುಧೆ
ದೇವನೊಬ್ಬ ನಾಮ ಹಲವು
ಪರಮಪತಿವ್ರತೆಗೆ ಗಂಡನೊಬ್ಬ
ಮತ್ತೊಂದಕ್ಕೆರಗಿಡದೆ ಕಿವಿ-ಮೂಗು ಕೊಯ್ವನು
ಹಲವು ದೈವದ ಎಂಜಲ
ತಿಂಬವರ ನೇನೆಂಬೆ!
ಕೂಡಲಸಂಗಮದೇವಾ
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲ ವಿಸ್ತಾರದ ರೂಹು ನೀನೇ ದೇವಾ,( ರೂಹು=ರೂಪ )
'ವಿಶ್ವತಶ್ಚಕ್ಷು' ನೀನೇ ದೇವಾ,
'ವಿಶ್ವತೊಬಾಹು' ನೀನೇ ದೇವಾ,
'ವಿಶ್ವಪಾದ' ನೀನೇ ದೇವಾ
ಕೂಡಲಸಂಗಮದೇವಾ
ದೇವಾಲೋಕ ಮರ್ತ್ಯು ಲೋಕವೆಂಬುದು
ಬೇರಿಲ್ಲ ಕಾಣಿರೋ!
ಸತ್ಯವನ್ನು ನುಡಿಯುವುದೇ ದೇವಲೋಕ
ಮಿಥ್ಯವನ್ನು ನುಡಿಯುವುದೇ ಮರ್ತ್ಯಲೊಕ,(ಮಿಥ್ಯ=ಸುಳ್ಳು, ಮರ್ತ್ಯಲೊಕ=ಇಹಲೋಕ)
ಆಚಾರವೇ ಸ್ವರ್ಗ, ಅನಾಚಾರವೇ ನರಕ,
ಕೂಡಲಸಂಗಮದೇವಾ,ನೀವೆ ಪ್ರಮಾಣು (ಪ್ರಮಾಣು =ಸಾಕ್ಷಿ)
ಇನ್ನಷ್ಟು ಮುಂದಿನ ಬ್ಲಾಗ್ನಲ್ಲಿ ಬರಲಿದೆ.
Rating
Comments
ಉ: ಬಸವಣ್ಣನವರ ವಚನ ಸುಧೆ
In reply to ಉ: ಬಸವಣ್ಣನವರ ವಚನ ಸುಧೆ by kannadakanda
ಉ: ಬಸವಣ್ಣನವರ ವಚನ ಸುಧೆ
In reply to ಉ: ಬಸವಣ್ಣನವರ ವಚನ ಸುಧೆ by Nagaraj.G
ಉ: ಬಸವಣ್ಣನವರ ವಚನ ಸುಧೆ
In reply to ಉ: ಬಸವಣ್ಣನವರ ವಚನ ಸುಧೆ by savithasr
ಉ: ಬಸವಣ್ಣನವರ ವಚನ ಸುಧೆ
In reply to ಉ: ಬಸವಣ್ಣನವರ ವಚನ ಸುಧೆ by Nagaraj.G
ಉ: ಬಸವಣ್ಣನವರ ವಚನ ಸುಧೆ
In reply to ಉ: ಬಸವಣ್ಣನವರ ವಚನ ಸುಧೆ by Nagaraj.G
ಉ: ಬಸವಣ್ಣನವರ ವಚನ ಸುಧೆ