ಬಸುರಿಯ ಮಗು ಮಾಯ... !

ಬಸುರಿಯ ಮಗು ಮಾಯ... !

ಎಂದಿನಂತೆ ನಾನು ಅತ್ಯುತ್ಸಾಹದಿಂದ ಆಫೀಸ್ ಗೆ ಬಂದೆ. ಯಾಕೆಂದರೆ ನಾನು ಮಾಡುವ ಕೆಲಸದ ಬಗ್ಗೆ ಅದಮ್ಯ ಪ್ರೀತಿ. ಅಂದು ಶುಕ್ರವಾರ. ನನಗೊಂದು ಅಚ್ಚರಿಯ ಸುದ್ದಿ ಕಾದಿತ್ತು. ಬುಲಿಟೆನ್ ಪ್ರೋಡುಸರ್‍ ಅಂತಾ ನನ್ನ ಕೂರಿಸಿದ ಮೇಲೆ ಹೆಚ್ಚಿಗೆ ಸ್ಕೀಪ್ಟ್ ಗಳನ್ನು ಬರೆಯಲಿಕ್ಕೆ ಅದರಲ್ಲೂ ವಿಶೇಷ ವರದಿಗಳನ್ನು ಬರೆಯಲಿಕ್ಕೆ ನನಗೆ ಅವಕಾಶ ಸಿಕ್ಕಿದ್ದು ಕಡಿಮೆ. ನನಗೆ ಅವುಗಳನ್ನು ಬರೆಯಲು ಇಷ್ಟ. ಅವತ್ತು ಸಿಕ್ಕದ್ದು ನನ್ನ ಪಾಲಿಗೆ ಭರ್ಜರಿ ಬೇಟೆಯೇ ( ಸುದ್ದಿ )..! ವಿಷಯ ಏನಪ್ಪಾ ಅಂದ್ರೆ, ಆಕೆ ಹೆರಿಗೆಗಾಗಿ ತವರಿಗೆ ಬಂದಿದ್ದಳು.
ಆದರೆ ಇನ್ನೇನು ೨ - ೩ ದಿನಗಳಲ್ಲಿ ಹೆರಿಗೆಯಾಗಿ ಮಗು ಪಡೆಯಬೇಕು ಅನ್ನೋ ಹೊತ್ತಿಗೆ ತಾಯಿಯ ಹೊಟ್ಟೆಯಲ್ಲಿದ್ದ ಮಗುನೇ ಮಾಯಾವಾಗಬೇಕೆ... ? ಹೌದು, ಇಂತಹದೊಂದು ವಿಸ್ಮಯಕಾರಿ ಘಟನೆ ನಡೆದಿರುವುದು ಗುಲ್ಬರ್ಗಾ ಜಿಲ್ಲೆ ಆಫಜಲಪುರ ತಾಲೂಕಿನ ಬಿದನೂರಿನಲ್ಲಿ.
ನನಗೆ ರಿಪೋರ್ಟರ್‍ ಕಳುಹಿಸಿದ್ದ ಸುದ್ದಿ ಓದಿ ಹೊಟ್ಟೆ ಚುರುಕ್ ಅಂತು. ಪಾಪ ಆಕೆ ೯ ತಿಂಗಳು ಕಷ್ಟಪಟ್ಟು ಮಗು ಹೊತ್ತವಳು, ಇದು ಎಂತಾ ದುರಂತ ಅನ್ನಿಸಿತು. ೬ ವರ್ಷಗಳ ಕಾಲ ಮಕ್ಕಳಿಲ್ಲದೇ ಆಕೆ ಸಮಾಜದ ಚುಚ್ಚುಮಾತುಗಳನ್ನು ಕೇಳಿ ಬಸವಳಿದಿದ್ದಳು. ಇದೀಗ ಆಕೆಯ ಕುಟುಂಬದಲ್ಲಿ ನಗುವಿನ ಅಲೆ ಬೀಸಬೇಕಾದ ಸಂದರ್ಭದಲ್ಲಿ ಇದೊಂದು ಸುನಾಮಿ ಹೊಡೆತ. ಇಷ್ಟಕ್ಕೂ ತಾಯಿಯ ಹೊಟ್ಟೆಯಲ್ಲಿದ್ದ ಮಗು ಮಾಯವಾಗಿದ್ದದರೂ ಹೇಗೆ ಅಂದರೆ ,ಅದು ಇನ್ನೂ ಕೂತೂಹಲಕಾರಿ ಸಂಗತಿ. ಆಕೆಗೆ ಕನಸಲ್ಲಿ ಒಬ್ಬ ಸನ್ಯಾಸಿ ಬಂದಿದ್ದನಂತೆ, ಆಮೇಲೆ ಅದೇ ಸನ್ಯಾಸಿ ಬಹಿರ್ದೆಸೆಗೆ ಹೋದಾಗ ಪ್ರತ್ಯಕ್ಷನಾಗಿ ಮನೆವರೆಗೆ ಬೆನ್ನಟ್ಟಿ ಬಂದು ಭಿಕ್ಷೆ ಕೇಳಿದನಂತೆ. ಪಾಪ ಅಂತ ಭಿಕ್ಷೆ ಹಾಕಿದರೆ, ಆ ಸನ್ಯಾಸಿ ಮಗುನೂ ಮಾಯ ಮಾಡಿ ಹೋಗಬೇಕೆ... ? ಇದರಿಂದ ತಾಯಿ ವಿಜಯಲಕ್ಷ್ಮಿ ಬೆಚ್ಚಿಬಿದ್ದು ತಾಯಿಗೆ ಸುದ್ದಿ ಮುಟ್ಟಿಸಿದಳು. ಕೊನೆಗೆ ಡಾಕ್ಟರ್‍ ಪರೀಕ್ಷೆ ನಡೆಯಿತು. ಮಗು ಇಲ್ಲ, ಮಂತ್ರವಾದಿಗಳ ಮೊರೆ ಹೊದ್ರೆ ಅವರು ಮಗು ಸನ್ಯಾಸಿಯ ಜೋಳಿಗೆಯಲ್ಲಿದೆ ಎಂದ್ರು. ಗ್ರಾಮದಲ್ಲಿ ಆತಂಕ. ಒಬ್ಬರು ಇದು ಪವಾಡ ಅಂದ್ರೆ, ಇನ್ನು ಕೆಲವರು ಇದು ಭಾನಾಮತಿ ಅಂದ್ರು. ಆದ್ರೆ ನನಗೆ ಮಾತ್ರ ಒಂದು ಪ್ರಶ್ನೆ ಕಾಡತಾನೆ ಇದೇ ಅದೆನೆಂದರೆ ೨೧ ನೇ ಶತಮಾನದಲ್ಲಿ ಹೀಗೂ ಉಂಟೇ....?

Rating
No votes yet

Comments