ಎದೆಯೊಳಗೆ ಶೂನ್ಯ ಹೊಕ್ಕಾಗ...
ನೆನಪುಗಳಷ್ಟೇ ಕಾಡುತ್ತೇವೆಂದುಕೊಂಡಿದ್ದೆ
ಕನಸುಗಳೂ ಕಾಡುತ್ತವೆ
ಸೋತ ಕನಸಿನ ವಿಷಾದ ಕೂಡ
ಮರೆತೆ ಅಂದುಕೊಂಡಿದ್ದು
ಊರಾಚೆ ಬಿಟ್ಟು ಬಂದ ಬೆಕ್ಕಿನಂತೆ
ವಾಪಸ್ ಬರುತ್ತದೆ
ಹಾಸಿಗೆಯಂಚಿನಲ್ಲಿ ಕೂತು ಒರಲುತ್ತದೆ
ಅಪರಿಚಿತ ಊರಿನ ಪೇಟೆಬೀದಿಯಲ್ಲಿ
ಆಕೆ ಗಕ್ಕನೇ ಎದುರಾಗುತ್ತಾಳೆ
ಸುಮ್ಮನೇ ನಿಂತವಳ ಮುಖದಲ್ಲೇನಿತ್ತು?
ಗೊಂದಲ? ವಿಷಾದ?
ಹಳೆ ಆಲ್ಬಮ್ಮಿನ ಫೊಟೊ ಕಿತ್ತು ಹಾಕಿದ್ದೇನೆ
ಪತ್ರಗಳುರಿದು ಕಾಯ್ದ ನೀರಿನಲ್ಲಿ ಮಿಂದಿದ್ದೇನೆ
ಅಪರಿಚಿತ ಪೇಟೆಗಳಲ್ಲಿ ಸುತ್ತಬಾರದೆಂದು
ಒಬ್ಬನೇ ಬಾಗಿಲು ಮುಚ್ಚಿ ಕೂತು
ಎಲ್ಲಾ ನೆನಪುಗಳನ್ನು ಗುಂಡಿ ತೋಡಿ ಹೂತು
ನೆಟ್ಟಿದ್ದ ಗುಲಾಬಿ ಗಿಡ ಹೂ ಬಿಟ್ಟಾಗ-
ಅವಳ ಮುಖವೇ ಕಾಣಬೇಕೆ !
- ಚಾಮರಾಜ ಸವಡಿ
Rating
Comments
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...
In reply to ಉ: ಎದೆಯೊಳಗೆ ಶೂನ್ಯ ಹೊಕ್ಕಾಗ... by kalpana
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...
In reply to ಉ: ಎದೆಯೊಳಗೆ ಶೂನ್ಯ ಹೊಕ್ಕಾಗ... by Chamaraj
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...
In reply to ಉ: ಎದೆಯೊಳಗೆ ಶೂನ್ಯ ಹೊಕ್ಕಾಗ... by ASHOKKUMAR
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...
In reply to ಉ: ಎದೆಯೊಳಗೆ ಶೂನ್ಯ ಹೊಕ್ಕಾಗ... by harshab
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...
In reply to ಉ: ಎದೆಯೊಳಗೆ ಶೂನ್ಯ ಹೊಕ್ಕಾಗ... by Jayalaxmi.Patil
ಉ: ಎದೆಯೊಳಗೆ ಶೂನ್ಯ ಹೊಕ್ಕಾಗ...