ಮೌನ....
ಮಾತಾಡಬೇಕಿದ್ದ
ಸಾವಿರ ವಿಷಯಗಳು
ಪದಸ್ಪರ್ಶದಿಂದ
ಅರ್ಥಕಳೆದುಕೊಳ್ಳುವುದೇನೊ
ಎಂಬ ಭೀತಿಯಲ್ಲಿನ ಸ್ಥಿತಿ...
ಅವಳ ಕೈಬೆರಳನು
ನನ್ನ ಅಂಗೈಯೊಳಗೆ
ಹುದುಗಿಸಿಕೊಂಡು ಗಂಟೆಗಟ್ಟಲೆ
ತುಟಿಯಲ್ಲಾಡಿಸದಿದ್ದರೂ
ಎಲ್ಲಾ ಹೇಳುವಂತಹ
ಸಂತೃಪ್ತ ಘಳಿಗೆಗಳು...
ತುಟಿಗೆ ಬೀಗ
ಜಡಿದಿರುವಾಗ
ಕಣ್ಣಿನ ನಾಲಿಗೆ
ಚರ್ಮದ ಬಾಯಿಗೆ
ತುಡಿತವೆಲ್ಲವ
ತೋಡಿಕೊಳ್ಳುವ
ಅವಕಾಶ ಸಿಗುವ
ಅಮೃತ ಸಮಯ..
ಇವತ್ತು ಎಲ್ಲಾ
ಹೇಳಿ ಬಿಡುವೆ
ಎಂದು ಧೈರ್ಯ
ತೋರಿದ ಎದೆಗೆ,
ಅವಳೆದುರಾದ ಕೂಡಲೇ
ಮೆದುಳಿಗೂ, ಬಾಯಿಗೂ
ಲಿಂಕ್ ತಪ್ಪಿ ಹೋಗಿ
ಉಂಟಾದ ಭರ್ಜರಿ
ಸೋಲಿನ ಹೊತ್ತು...
Rating
Comments
ಉ: ಮೌನ....
In reply to ಉ: ಮೌನ.... by Chamaraj
ಉ: ಮೌನ....