ನಮ್ಮ ಅವ್ವಾ...
ಗೆಳೆಯರೆ,
ನನ್ನ ಗೆಳೆಯನ ಹತ್ತಿರ ಈ ಒಂದು ಹಾಡು ಇತ್ತು..ನಾನಿದನ್ನ ಎಲ್ಲಿಂದ ತಂದೆ ಅಂತ ಕೇಳಿದೆ. ಅವ ಹೇಳಿದ, ಹಿಂಗ ಒಂದು ಮೇಲ್ ನಿಂದ ಮೇಲ್ ಗೆ ಬಂದಿದ್ದು ಅಂತ ಅಂದ. ಅದನ್ನು ಇಲ್ಲಿ ಹಾಕೀನಿ ಯಾರು ಬರೆದಿದ್ದು ಅಂತ ನಿಮಗೇನರ ಗೊತ್ತಿದ್ದರ ಹೇಳ್ರಿ.. ಅಂದಂಗ ಇದು..ತಾರೆ ಜಮೀನ್ ಪರ್ ಚಿತ್ರದ..ಮೇರಿ ಮಾ ರಿಮಿಕ್ಸ..
ಅವ್ವಾ ನೀ ಚೂಡ ಮಾಡಿಟ್ಟಿರು
ಸಂಜೀಕ ಬಂದು ತಿಂತೀನಿ ನಾ
ಈಗ ಬರೀ ಚಹಾ ಕುಡೀತೀನಿ ನಾ
ಸಕ್ಕರೀ ಬಾಳss ಕಮ್ಮಿ ಹಾಕು ನೀ..
ನಿನಗೆಲ್ಲಾ ಗೊತೈತೀ ನಮ್ಮವ್ವಾ...ನಿನಗೆಲ್ಲಾ ಗೊತ್ತೈತೀ ನಮ್ಮವ್ವಾ..
ಕಾಲೇಜ್ ಕಡೆ ತಿರುಗಲಿಕ್ಕೆ ಹೋಗತೀನಿ ನಾ
ಎಂಟು ಒಂಭತ್ತಕ್ಕ ಬರತೀನಿ ನಾ..
ದಾರ್ಯಾಗ ಮತ್ಯಾರರ ಸಿಕ್ಕರ...
ಹತ್ತು ಹನ್ನೊಂದುಕ್ಕ ಬರತೀನಿ ನಾ...
ನೀ ಲೈಟ್ ಆರಿಸಿ ಮೊಕ್ಕೊ ನಮ್ಮವ್ವಾ...
ನೀ ಬಾಗಿಲಾ ಹಾಕಿ ಮೊಕ್ಕೋ......ನಮ್ಮವ್ವಾ.
ನಿನಗೇನರss ತ್ರಾಸಾದರss
ನನಗ ಸಂಕಟsss ಆಗತೈತಿ ನೋಡು ಯವ್ವಾ
ಬೋರಾದರ ಟಿವಿ ನೋಡು
ಅಶ್ಟರಾಗ ನಾ ಬರ್ತಿನಿ ನೋಡೆವ್ವ ನೀ...
ಅವ್ವಾ ನೀ ಚಪಾತಿ ಮಾಡಿಟ್ಟಿರು..
ರಾತ್ಯ್ರಾಗ ಬಂದು ಉಂತೀನಿ ನಾ..
ನಾಳಿಗೆ ಲಘುನss ಏಳಬೇಕು ನಾ
ಅಲರಾಮು ಇಟ್ಟು ಮೊಕ್ಕೊ ಯವ್ವಾ ನಿ...
ನಿನಗೆಲ್ಲಾ ಗೊತೈತೀ ನಮ್ಮವ್ವಾ...
ನಿನಗೆಲ್ಲಾ ಗೊತೈತೀ ....... ನಮ್ಮವ್ವಾ...
ನಿಮ್ಮ,
ಗಿರೀಶ ರಾಜನಾಳ.
Comments
ಉ: ನಮ್ಮ ಅವ್ವಾ...
In reply to ಉ: ನಮ್ಮ ಅವ್ವಾ... by Rakesh Shetty
ಉ: ನಮ್ಮ ಅವ್ವಾ...