ಇದೇ ನಾಡು ಇದೇ ಭಾಷೆ - ತಿರುಗುಬಾಣ
"ತಿರುಗುಬಾಣ" ಚಲನಚಿತ್ರ ಎಂದಾಕ್ಷಣ ನಮಗೆ ನೆನಪಿಗೆ ಬರುವುದು "ಇದೇ ನಾಡು ಇದೇ ಭಾಷೆ" ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಕೇಳಿರ್ತೀರಾ, ನೋಡಿರ್ತೀರಾ.
ಈ ಹಾಡಿನ ಸಂಗೀತ ನಿರ್ದೇಶಕರು ದಿ||ಸತ್ಯಂ ಅವರು. ಇಂದು "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಈ ಹಾಡಿನ ಸಂಗೀತ ನಿರ್ದೇಶಕರು ಯಾರು? ಎಂಬ ಪ್ರಶ್ನೆಗೆ ಈ ಹಾಡನ್ನು ತೋರಿಸಲಾಯಿತು. ಆಗ ನನಗೆ ತುಂಬಾ ಸಂತೋಷವಾಯಿತು, ಯಾಕಂದ್ರೆ, ಈ ಹಾಡನ್ನ ಕೇಳಿ ಬಹಳ ದಿನಗಳಾಗಿದ್ದವು.
ಎಂದಿನಂತೆ ಅಂತರ್ಜಾಲ ತಾಣವಾದ ಯೂಟ್ಯೂಬ್.ಕಾಂ ಸಹಾಯದಿಂದ ಈ ಹಾಡನ್ನು ಹುಡುಕಿ ಇಲ್ಲಿ ಹಾಕಬೇಕೆಂದು ಅನ್ನಿಸಿತು. ಅದರಂತೆ ಯೂಟ್ಯೂಬ್.ಕಾಂ ನಲ್ಲಿ ಹುಡುಕಿ ಈ ಹಾಡನ್ನು ಇಲ್ಲಿ ಹಾಕಿದ್ದೇನೆ.
ಈ ಹಾಡಿನಲ್ಲಿ ಎಸ್. ಪಿ. ಬಾಲಸುಬ್ರಮಣ್ಯಂ ಅವರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಡುತ್ತಿರುತ್ತಾರೆ. ಈ ಹಾಡಿನಲ್ಲಿ ಸಂಗೀತ ನಿರ್ದೇಶಕ ಸತ್ಯಂ ಅವರನ್ನೂ ಕಾಣಬಹುದು. ನನಗಂತೂ ಈ ಹಾಡು ತುಂಬಾನೇ ಇಷ್ಟ...
ನಿಮಗೂ ಇಷ್ಟವಾಗಬಹುದು ಅಂತ ಭಾವಿಸಿ, ಈ ಹಾಡನ್ನ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಈಗ ಈ ಹಾಡನ್ನು ನೋಡಿ. ನಿಮಗೂ ಖಂಡಿತ ಇಷ್ಟವಾಗುತ್ತೆ.
ಏನು? ಇಷ್ಟ ಆಯ್ತಾಲ್ವಾ ಈ ಹಾಡು?
ಅಂದ ಹಾಗೆ, ಈ ಹಾಡಿನ ಸಂಗೀತ ನಿರ್ದೇಶಕರು ಯಾರು? ಎಂಬ ಪ್ರಶ್ನೆಗೆ ಮೂವರಲ್ಲಿ ಒಬ್ಬರೂ ಸರಿಯಾದ ಉತ್ತರ ಕೊಡಲಿಲ್ಲ... :(
Comments
ಉ: ಇದೇ ನಾಡು ಇದೇ ಭಾಷೆ - ತಿರುಗುಬಾಣ