ವಚನ - ಜಾಲ!

ವಚನ - ಜಾಲ!

ಹೊನ್ನು ಮಣ್ಣು ಹೆಣ್ಣಿಗೆ ಸಂಬಂದ ಪಟ್ಟಂತೆ ಅಲ್ಲಮ ಪ್ರಭುಗಳ ಒಂದು ವಚನ ಹೀಗಿದೆ.

ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಇದೆ ವಿಷಯಕ್ಕೆ ಸಂಬಂಧಿಸಿದಂತೆ ಸವಿತಾ ಅವ್ರು ಈ ಕೆಳಗಿನ ಎರಡು ವಚನಗಳನ್ನು ಹುಡುಕಿ ಪ್ರತಿಕ್ರಿಯಿಸಿದ್ದರು.

ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ತನುವೆನ್ನದು ಮನವೆನ್ನದು ಧನವೆನ್ನದು
ಎಂದು ಭಿನ್ನ ಭಕ್ತಿಯ ಮಾಡಿ ಬಡ್ಡಿಕಾರರಂತೆ ಒಂದು ಕೊಟ್ಟು ಎರಡು ಪಡೆವ
ಜಡ ಜೀವಿಗಳ ಭಕ್ತರೆನಬಹುದೇನಯ್ಯಾ ಅಖಂಡೇಶ್ವರಾ? ||

ಮತ್ತೊಂದು

ಹೊನ್ನ ಬಿಟ್ಟೆ, ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ ಎಂದು ಜಗದ ಕಣ್ಣ ಕಟ್ಟಿ, ಮೆರೆವ ಕಣ್ಣಬೇನೆಯ ಅಣ್ಣಗಳು ನೀವು ಕೇಳಿ ಭೋ,
ಮಾತಿನಲಿ ಬಿಟ್ಟಿರೋ, ಮನದಲಿ ಬಿಟ್ಟಿರೋ? ಈ ನೀತಿಯ ಹೇಳಿರಿ ಎನಗೊಮ್ಮೆ.
ತನು ಮನದ ಮಧ್ಯದಲಿ ಇವರ ನೆನಹು ಕೆಟ್ಟು, ಲಿಂಗದ ನೆನಹಿನ ಆಯತವೆ ಸ್ವಾಯತವಾಗಿ ಇರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ.
ಮಾತಿನಲಿ ಬಿಟ್ಟು ಮನದಲ್ಲಿ ಉಳ್ಳರೆ, ಭವದಲ್ಲಿ ತಂದು ಇವ ಕಟ್ಟಿಸಿದಲ್ಲದೆ, ಮಾಣವು ಕಾಣಿರಯ್ಯಾ.
ಹಿಡಿದು ಸಂಸಾರಿಗಳಲ್ಲ, ಬಿಟ್ಟು ನಿಸ್ಸಂಸಾರಿಗಳಲ್ಲ. ಎರಡೂ ಅಲ್ಲದ ಎಟುವರನು ಎನೆಂಬೆನಯ್ಯ
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ ||

extra::

ಆದರೆ ಈ ಮೇಲಿನ ಎರಡು ವಚನಗಳು ಯಾರವು ಅಂತ ಹುಡ್ಕೋಕೆ ಹೊರಟರೆ ನೆಟ್ ನಲ್ಲಿ ಯಾವುದೇ ವಿಷಯ ಲಭ್ಯವಿಲ್ಲ. ಛೆ ಬೇಜಾರಾಯ್ತು....

ಕಡೆ ಪಕ್ಷ ಕರ್ನಾಟಕ ಸರ್ಕಾರ ದ www.vachanasahitya.org ಯೂ ಕೆಲಸ ಮಾಡ್ತಾ ಇಲ್ಲ್ಲ. ಯಾಕೆ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾಕೆ ಇಷ್ಟು ಬೆಜವಬ್ಧಾರಿ ಯಾಗಿ ಕೆಲಸ ಮಾಡ್ತಾ ಇದೆ ಅಂತ ಗೊತ್ತಾಗ್ತಾ ಇಲ್ಲ.

ಏನಾರೆ ಮಾಡ್ಬೇಕ್ರಪ್ಪೋ! :)

Rating
No votes yet

Comments