ಬ್ರಾಹ್ಮಣನಾಗಲು
ಅವರಿವರು ಅಂದರು
ನಾನು ಬ್ರಾಹ್ಮಣನೆಂದು|
ನನಗರಿವಿತ್ತು ಅಲ್ಲವೆಂದು|
ನಿತ್ಯವೂ ಅದೇ ತುಡಿತ
ನಾನು ಬ್ರಾಹ್ಮಣನೇ?
ಅದೇ ಕೊಳಕು ಮಾತುಕತೆ
ಅದೇ ಕಾಡುಹರಟೆ
ಅದೇ ದುಶ್ಷ್ಚಿಂತೆ
ಅದೇ ದುಡಿತ
ಅದೇ ಭೋಗ
ಅದೇ ಜೀವನ ಜಂಜಾಟ
ಕೋಪ-ತಾಪ
ಮುನಿಸು-ಹೊಲಸು
ಹೊಡೆದಾಟ-ಬಡಿದಾಟ
ಎಲ್ಲವೂ ಶೂದ್ರಾತಿಶೂದ್ರ
ಯಾವುದರಲ್ಲೂ ಬ್ರಾಹ್ಮಣನಲ್ಲ|
ಅಹುದು ಆಸೆಇದೆ...
ನಾನು ಬ್ರಾಹ್ಮಣನಾಗಬೇಕೆಂದು
ಸುಜ್ಞಾನವ ಪಡೆದು
ಸಚ್ಚಿಂತನೆಯ ಮಾಡುತ್ತಾ
ಅಬಲರ,ದೀನದಲಿತರ
ನೆಲಕಚ್ಚಿದವರ ಆತ್ಮಗಳಲಿ
ಪರಮಾತ್ಮನನು ಕಾಣುತ್ತಾ
ನನ್ನೊಳಗಿರುವ ಪರಮಾತ್ಮನನು ಹುಡುಕುತ್ತಾ
ಕಾಮ,ಕ್ರೋಧ,ಲೋಭ,ಮೋಹ,ಮದ,
ಮತ್ಸರವೆಂಬ ಅರಿಷಡ್ವರ್ಗಗಳಿಂದ
ದೂರ ಮಾಡೆಂದು
ಅವನ ಪಾದಗಳಲಿ ಕಣ್ಣೀರಿಡುತ್ತಾ,
ಧರ್ಮ,ಅರ್ಥ,ಕಾಮ, ಮೋಕ್ಷ
ಪುರುಷಾರ್ಥಗಳ ಅರ್ಥ ತಿಳಿಯುತ್ತಾ
ಧರ್ಮ-ಮೋಕ್ಷಗಳ ಚೌಕಟ್ಟಿನಲಿ
ಅರ್ಥಕಾಮಗಳ ಅನುಭವಿಸುವ ಬುದ್ಧಿಕೊಡೆಂದು
ಅವನಲ್ಲಿ ಬೇಡುತ್ತಾ
ನಾನಾಗಬಯಸುವೆ ಬ್ರಾಹ್ಮಣ,
ನರೇಂದ್ರ ವಿವೇಕಾನಂದ ನಾದಂತೆ
ಪುಟ್ಟಪ್ಪ ವಿಶ್ವ ಮಾನವ ನಾದಂತೆ||
Comments
ಉ: ಬ್ರಾಹ್ಮಣನಾಗಲು
In reply to ಉ: ಬ್ರಾಹ್ಮಣನಾಗಲು by anantshayan
ಉ: ಬ್ರಾಹ್ಮಣನಾಗಲು
ಉ: ಬ್ರಾಹ್ಮಣನಾಗಲು
ಉ: ಬ್ರಾಹ್ಮಣನಾಗಲು
ಉ: ಬ್ರಾಹ್ಮಣನಾಗಲು
In reply to ಉ: ಬ್ರಾಹ್ಮಣನಾಗಲು by gnanadev
ಉ: ಬ್ರಾಹ್ಮಣನಾಗಲು
ಉ: ಬ್ರಾಹ್ಮಣನಾಗಲು
ಉ: ಬ್ರಾಹ್ಮಣನಾಗಲು
In reply to ಉ: ಬ್ರಾಹ್ಮಣನಾಗಲು by savithru
ಉ: ಬ್ರಾಹ್ಮಣನಾಗಲು