ಇವಳಿಗೆ ಓಟು ಕೊಡ್ಬೇಡಿ ಪ್ಲೀಸ್!

ಇವಳಿಗೆ ಓಟು ಕೊಡ್ಬೇಡಿ ಪ್ಲೀಸ್!

ಹಿಂದೊಮ್ಮೆ ನಾನು ರಿತಿಷಳ ಬಗ್ಗೆ ಇಲ್ಲಿ ಬರೆದಿದ್ದೆ - http://sampada.net/blog/kalpana/13/08/2008/10846 . ಆಗ ಕೆಲವರು ಅವಳು ಹಿಂದಿಯಲ್ಲಿ ಹಾಡುವುದರ ಬಗ್ಗೆ ಅಸಮಾಧಾನ ತೋರಿದ್ದರು. ಇನ್ನು ಕೆಲವರು ಅವಳು ಗೆದ್ದರೆ ಕನ್ನಡಕ್ಕೆ ಏನು ಪ್ರಯೋಜನ? ಅರ್ಚನ ಉಡುಪ ಸರೆಗಮಪ ಗೆದ್ದರೂ ಅವಕಾಶವಂಚಿತೆಯಾಗಿಲ್ಲವೆ? ಎಂದೆಲ್ಲ ನಿರಾಶಾವಾದವನ್ನು ಪ್ರಕಟಿಸಿದ್ದರು. ಆಗ ನಾನು, ರಿತಿಷಾಳ ಗೆಲುವು ನ್ಯಾಷನಲ್ ಲೆವೆಲ್ನಲ್ಲಿ ಕನ್ನಡದ ಮಟ್ಟ ಏರುವಲ್ಲಿ ಸಹಾಯವಾಗಬಹುದು, ಹಿನ್ನೆಲೆ ಗಾಯನದಲ್ಲಿ ಒಂದು ಹೊಸ ಬದಲಾವಣೆಗೆ ನಾಂದಿಯಾಗಬಹುದು ಎಂದು ನನ್ನನ್ನು ನಾನೆ ಸಮರ್ಥಿಸಿಕೊಂಡಿದ್ದೆ. ಈಗ ನನ್ನ ಮಾತನ್ನು ನಾನೆ ಹೀಗೆಳೆಯುವ ಪರಿಸ್ಥಿತಿ ಬಂದಿದೆಯೆನ್ನಲು ವಿಷಾದಿಸುತ್ತೇನೆ.

ಎರಡು ವಾರದ ಹಿಂದೆ ರಿತಿಷ ಸ್ಪರ್ಧೆಯಲ್ಲುಳಿದ ಕೊನೆಯ ಮೂವರಲ್ಲಿ ಒಬ್ಬಳಾಗಿದ್ದಳು. ಅವಳೇ ವಾಯ್ಸ್ ಆಫ್ ಇಂಡಿಯ ಆಗುವ ಅವಕಾಶ ಉತ್ತಮವಾಗಿತ್ತು. ಇದು ಬಹುಶಃ ಅಲ್ಲಿ ಕುಳಿತ ನಾರ್ತಿ ಜಡ್ಜ್ಗಳಿಗೆ ಸಹಿಸಲಿಲ್ಲವೆಂದೆನಿಸುತ್ತೆ. ಅವರು ಗಲಾಟೆ ಮಾಡಿ ಸ್ಪರ್ಧೆಯ ನಿಯಮಗಳನ್ನೆ ಬದಲಾಯಿಸಿಬಿಟ್ಟರು! ಈ ಹಿಂದೆ ಹೊರಗೆ ಅಟ್ಟಲ್ಪಟ್ಟ ಮೂವರನ್ನು ಮತ್ತೆ ಸ್ಪರ್ಧೆಗೆ ಸೇರಿಸಿದರಲ್ಲದೆ, ಈಗ ಜಡ್ಜ್ಗಳು ಪ್ರತಿ ಹಾಡುಗಾರರಿಗೂ ಅಂಕಗಳನ್ನು ಸಹ ದಯಪಾಲಿಸುತ್ತಾರೆ! ಸರಿ, ರಿತಿಷ ಈ ನಡುವೆ ಬಾಟಮ್ ಮೂವರಲ್ಲಿ ತಪ್ಪದೆ ಕಾಣಿಸಿಕೊಳ್ಳುತ್ತಿದ್ದಾಳೆ.

ಇದನ್ನು north-south discrimination ಅನ್ನುವುದಕ್ಕೆ ನನಗೆ ಇಷ್ಟವಾಗುತ್ತಿಲ್ಲ. ಆದರೆ, ಮತ್ಯಾವ ಕಾರಣವೂ ಸಿಗುತ್ತಿಲ್ಲ. ಅವಳ ಮಂಕಾದ ಮುಖ ನೋಡಲು ನನಗಾಗುತ್ತಿಲ್ಲ. ಅವಳು ತಾನು ಈ ಸ್ಪರ್ಧೆ ಬೇಗ ಮುಗಿಸಿ ತನ್ನ ಇಂಜಿನಿಯರಿಂಗ್ ವ್ಯಾಸಂಗವನ್ನು ಮುಂದುವರಿಸಲು ಕಾತರಳಾಗಿರುವುದಾಗಿ ಮೊನ್ನೆ ಟಿ.ವಿ.ಯಲ್ಲಿ ಹೇಳಿಕೊಂಡಳು. ಹೀಗಿರುವಾಗ,(ನಾನು ಅವಳಿಗಾಗಿ ಓಟು ಕೇಳಿದ್ದರಿಂದ ಅವಳು ಇನ್ನೂ ಸ್ಪರ್ಧೆಯಲ್ಲಿದ್ದಾಳೆ ಅಂತಲ್ಲ, ಆದ್ರೆ) ಭಾರತದಲ್ಲಿರುವವರಲ್ಲಿ ರಿತಿಷಳಿಗೆ ಓಟು ಹಾಕ್ಬೇಡಿ ಪ್ಲೀಸ್ ಎಂದು ಕೇಳಿಕೊಳ್ಳುವುದು ಉತ್ತಮ ಅನ್ನಿಸುತ್ತೆ. ಪದೇ ಪದೇ ಬಾಟಮ್ ಮೂವರಲ್ಲಿ ನಿಂತು ಓಟು ಬೇಡುವ ಅವಮಾನ ಇನ್ನು ಸಾಕು, ಪಾಪ. ಡಾ.ಶೋಭ, ಮತ್ತಿತರರು ಹೇಳಿದಂತೆ ಭಾರತದಲ್ಲಿ ಕನ್ನಡ ಗಾಯಕರಿಗೆ ಕರ್ನಾಟಕದಲ್ಲೆ ಮನ್ನಣೆ ಸಿಗುತ್ತಿಲ್ಲ. ಇನ್ನು, ಹಿಂದಿಯಲ್ಲಿ ಸಿಗುತ್ತೆ ಅಂತ ಭಾವಿಸಿದ್ದು ನನ್ನ ಹುಚ್ಚುತನ ಅಷ್ಟೆ.  

Rating
No votes yet

Comments