ವಿರಹದಲ್ಲಿ ಪ್ರೇಮಿ
ಸಾಲು ಸಾಲು ಸಾವಿರ ಕವಿತೆಗಳ ಸಾಲುಗಳಲಿ
ಮಿನುಗುವ ಚಲುವೆ ನೀನು
ಆ ನಿನ್ನ ಕಣ್ಣಂಚಲಿ ಒಲವಿನ ಓಲೆಯ
ಬರೆಯುವ ಕವಿಯು ನಾನು.....
ಈ ಹುಡುಗನ ಮಾನವ ಕದ್ದಕಳ್ಳಿ ನೀ
ಅದರೊಳಗೆ ತುಂಬಿದೆ ಒಂದಿಷ್ಟು ಪ್ರೀತಿಯ ಮಿಂಚು
ಆ ಮಿಂಚಿನ ಸಂಚರದಿ ನಾನಾದೆ ಮೌನಿ
ಈ ಮೌನದ ಹೃದಯವ ಸ್ಪರ್ಶಿಸಿದ ಮಳ್ಳಿ ನೀ
ಆ ಮದುರ ಸ್ಪರ್ಶಕೆ ನಾನಾದೆ ವಿರಹಿ
ಹುಡುಗಿ ನಿನ್ನ ನೆನಪಿನ ವಿರಹದಲಿ ಬೆಂದ ನಾ
ನೀರಿಲ್ಲದೆ ಒದ್ದಾಡುವ ಮೀನು....................
ರಾತ್ರಿಯ ನೀರವ ಮೌನದಲಿ ಕಾಡುವ
ನಿನ್ನ ನೆನಪುಗಳ ಸಂತೆ
ಕನಸುಗಳಿಗೆ ಕೊಳ್ಳಿಯಿಟ್ಟು ಈ ಹೃದಯವ ತೂರಿಸಿದರೂ
ನನಗೆ ನಿನ್ನದೇ ಚಿಂತೆ
ಹುಡುಗಿ ನಿನ್ನ ಕಣ್ಣಂಚಿಗೆ ಅದರ ಸುಳಿಮಿಂಚಿಗೆ
ಬಲಿಯಾದವನು ನಾನು .............................
ನಿನ್ನವ ........
ಯತೀಶ್
Rating
Comments
ಉ: ವಿರಹದಲ್ಲಿ ಪ್ರೇಮಿ
ಉ: ವಿರಹದಲ್ಲಿ ಪ್ರೇಮಿ
ಉ: ವಿರಹದಲ್ಲಿ ಪ್ರೇಮಿ
In reply to ಉ: ವಿರಹದಲ್ಲಿ ಪ್ರೇಮಿ by makrumanju
ಉ: ವಿರಹದಲ್ಲಿ ಪ್ರೇಮಿ