ಹಾಯ್ ದಾದಾ
ಹಾಯ್ ದಾದಾ
ಅಭಿಮಾನಿಗಳ ನೆಚ್ಚಿನ ದಾದ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೂರಾರು ಆಟಗಾರರು ಬರುತ್ತಾರೆ ಹೋಗ್ತಾರೆ. ಆದರೆ, ಪ್ರೇಕ್ಷಕರ ಮನಸಿನ್ನಲುಳಿಯುವವರು ಕೆಲವೇ ಮಂದಿ. ಅವರಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದವರು ನಮ್ಮ ದಾದಾ ಎಂದರೆ ತಪ್ಪಾಗಲಾರದು. ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬ. ನಾನು ಕ್ರಿಕೆಟ್ ನೋಡಲು ಪ್ರಾರಂಭಿಸಿದಾಗಿನಿಂದ ಇಲ್ಲಿವರೆಗೆ ಸುಮಾರು ಜನ ಕ್ರಿಕೆಟಿಗರು ನಿವೃತ್ತಿಯಾದರು. ಆವಾಗೆಲ್ಲ ಇದೆಲ್ಲಾ ಸಾಮಾನ್ಯ ಅನಿಸಿತು. ಆದರೆ, ನಮ್ಮ ದಾದಾ ನಿವೃತ್ತಿಯಾದಾಗ ನನಗೆ ಇದು ಸಾಮಾನ್ಯ ಅನಿಸಲಿಲ್ಲ. ನನ್ನ ಮನಸು ಘಾಸಿಯಾಯಿತು. ನಾಗ್‌ಪುರ ಟೆಸ್ಟ್‌ನ ಕೊನೆಯ ದಿನ ದಾದಾನನ್ನು ಭಜ್ಜಿ ಮತ್ತು ಲಕ್ಷ್ಮಣ್ ಹೆಗಲ ಮೇಲೆ ಹೊತ್ತು ಬೀಳ್ಕೊಡುತ್ತಿದ್ದಾಗ ನನ್ನ ಕಣ್ಣಂಚು ತೇವವಾಯಿತು.
ನಮ್ಮ ದೇಶದ ಮಣ್ಣಿನ ವೈಶಿಷ್ಠ್ಯತೆ ಬಗ್ಗೆ ಅನೇಕ ಪುರಾಣ, ಇತಿಹಾಸ ಗ್ರಂಥಗಳಲ್ಲಿ ಬಣ್ಣಿಸಿದ್ದಾರೆ. ಆ ಮಣ್ಣಿನ ಗುಣವನ್ನೂ ತನ್ನಲ್ಲಿ ಮೈಗೂಡಿಸಿಕೊಂಡಿದ್ದವರು ದಾದಾ. ಬಂಗಾಳಿ ಟೈಗರ್, ಕೊಲ್ಕತ್ತಾ ಮಹಾರಾಜ ಎಂದೆಲ್ಲ ತಮ್ಮ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಸೌರವ್ ಅಂಗಳದಲ್ಲೂ ಟೈಗರ್, ಮಹಾರಾಜನಂತೆ ವರ್ತಿಸುತ್ತಿದ್ದರು. ಅವರಲ್ಲಿದ್ದ ಅಗ್ರೆಸ್‌ವ್‌ನೆಸ್, ಛಲಗಾರಿಕೆ, ಹೋರಾಟದ ಮನೋಭಾವ ಪ್ರತಿಯೊಬ್ಬ ಅಭಿಮಾನಿಯೂ ಇಷ್ಟ ಪಡುತ್ತಿದ್ದ ಗುಣಗಳು.
ಹೋರಾಟದ ಮನೋಭಾವ ಅಂದಾಗ ಪಾಕಿಸ್ತಾನ ವಿರುದ್ಧ ಡಾಕಾದಲ್ಲಿ ನಡೆದ ಬಾಂಗ್ಲಾ ಇಂಡಿಪೆಂಡೆನ್ಸ್ ಕಪ್ ಫೈನಲ್ ಪಂದ್ಯ ನೆನಪಿಗೆ ಬರುತ್ತದೆ. ನಮ್ಮ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡ ಮೊದಲು ಬ್ಯಾಟಿಂಗ್ ಮಾಡಿ ೩೧೪ ರನ್ ಗುರಿ ಒಡ್ಡಿತ್ತು. ಭಾರತ ತಂಡ ಇನ್ನೇನು ಗೆಲುವಿಗೆ ಸಮೀಪ ಬರುತ್ತಿದ್ದಂತೆ ಪಾಕ್ ಆಟಗಾರರು ಮಂದಬೆಳಕಿನ ನೆಪವೊಡ್ಡಿ ಮೈದಾನದಿಂದ ಪೆವಿಲಿಯನ್‌ಗೆ ತೆರಳಿದ್ದರು. ಆದರೆ, ನಮ್ಮ ದಾದಾ ಮಂದ ಬೆಳಕು ನಮಗೆ ಅಡ್ಡಿಯಾಗುವುದಿಲ್ಲ. ಗೆದ್ದೇ ತೀರುವೆವು ಎಂಬ ಮನೋಭಾವದಿಂದ ಪಿಚ್ ಬಿಟ್ಟು ಕದಲಲಿಲ್ಲ. ಆ ಪಂದ್ಯದಲ್ಲಿ ದಾದಾ ಗಳಿಸಿದ್ದ ಬರೋಬರಿ ೧೨೪ ರನ್. ಆ ಪಂದ್ಯದಲ್ಲಿ ೩೧೬ ರನ್ ಛೇಸ್ ಮಾಡಿ ಭಾರತ ದಾಖಲೆ ವಿಜಯ ಸಾಧಿಸಿತು.
ಆ ಗೆಲುವಿನಲ್ಲಿ ದಾದಾನ ಪಾಲು ಅಮೂಲ್ಯವಾದುದು. ಇಂತಹ ನಿರ್ಣಾಯಕ ಪಂದ್ಯದಲ್ಲಿ ದಾದಾನ ಕೊಡುಗೆ ಅಪಾರ. ಅದರಲ್ಲೂ ನಮ್ಮ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಕೆಚ್ಚೆದೆಯಿಂದ ಪಂದ್ಯ ಗೆಲ್ಲಿಸಿಕೊಟ್ಟಿದ್ದರಿಂದ ಅಭಿಮಾನಿಗಳು ದಾದಾನನ್ನು ದೇಶಾದ್ಯಂತ ಆರಾಧಿಸತೊಡಗಿದರು.
ಇಷ್ಟೆ ಅಲ್ಲ. ನಮ್ಮ ಕರ್ನಾಟಕದ ಆಟಗಾರರೆಂದರೆ ದಾದಾನಿಗೆ ಹೆಚ್ಚು ಕಾನ್ಫಿಡೆನ್ಸ್. ಜಾವಗಲ್ ಶ್ರೀನಾಥ್, ಕುಂಬ್ಳೆ ಬೌಲಿಂಗ್ ಎಂದರೆ ಪಂದ್ಯ ಗೆದ್ದೇ ಬಿಟ್ಟೆವು ಎಂಬ ವಿಶ್ವಾಸ. ನಾಯಕನಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ಹೆಚ್ಚು ಆಟಗಾರರಿಗೆ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಕಲ್ಪಿಸಿದವರೂ ದಾದಾನೇ.
ಯುವ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದ ರೀತಿ ಅವರ ನಾಯಕತ್ವಕ್ಕೆ ಮತ್ತೊಂದು ಗರಿಯೇ ಸರಿ. ಅವರ ಅಗ್ರೆಸಿವ್‌ನೆಸ್‌ಗೆ ಅನೇಕ ಉದಾಹರಣೆಗಳಿವೆ. ನ್ಯಾಟ್‌ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದಾಗ ತನ್ನ ಟಿ-ಶರ್ಟ್ ಬಿಚ್ಚಿ ಕುಣಿದಿದ್ದು ತಟ್ಟನೆ ನೆನಪಿಗೆ ಬರುತ್ತದೆ. ಅಷ್ಟೆ ಅಲ್ಲ ಅವರು ಸಿಕ್ಸರ್ ಬಾರಿಸುತ್ತಿದ್ದ ಶೈಲಿ ಉಳಿದೆಲ್ಲ ಆಟಗಾರರಿಗಿಂತ ಭಿನ್ನ. ಕ್ರೀಸ್‌ನಿಂದ ಮೂರು ಹೆಜ್ಜೆ ಮುಂದೆ ಬಂದು ಬ್ಯಾಟ್ ಬೀಸಿದರೆ ಪ್ರೇಕ್ಷಕರ ಗ್ಯಾಲರಿಯಲ್ಲೇ ಚೆಂಡು ಸಿಗುತ್ತಿದ್ದು. ಆದರೆ, ಒಬ್ಬ ಪರದೇಶಿಯನೊಬ್ಬನ ಮಾತು ಕೇಳಿ ನಮ್ಮ ಬಿಸಿಸಿಐ ಕೊನೆಯ ದಿನಗಳಲ್ಲಿ ದಾದಾನನ್ನು ನಡೆಸಿಕೊಂಡಿದ್ದು ಮಾತ್ರ ಅವರ ಅಭಿಮಾನಿಗಳಲ್ಲಿ ಬೇಸರ ತರಿಸದೆ ಇರದು.
ಗುಡ್ ಬೈ ದಾದಾ. ಗುಡ್ ಬೈ. ಆಲ್ ದಿ ಬೆಸ್ಟ್ ಯುವರ್ ಫ್ಯೂಚರ್ ಲೈಫ್.
ಲೋಕೇಶ್‌ಗೌಡ.....
Comments
ಉ: ಹಾಯ್ ದಾದಾ