ಕನಕದಾಸರ ಕೀರ್ತನೆಗಳು -೨ ಧಾನ ಧರ್ಮವಮಾಡಿ ಸುಖಿಯಾಗು ಮನವೆ
ಧಾನ ಧರ್ಮವ ಮಾಡಿ ಸುಖಿಯಾಗು ಮನವೆ
--------------------------------------
ಕೇದಾರ ಗೌಳ ರಾಗ, ಅಟ್ಟ ತಾಳ
ಧಾನ ಧರ್ಮವ ಮಾಡಿ ಸುಖಿಯಾಗು ಮನವೆ
ಹೀನ ವೃತ್ತಿಯಲಿ ನೀಕೆಡಬೇಡ ಮನವೆ
ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿಯ ಚೌಡಿಯ
ಅಕ್ಕರಿಂದಲಿ ಪೂಜೆ ಮಾಡಲೇಕೆ
ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ
ಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ
ಸಂಭ್ರಮದಲೊಂಧೊತ್ತು ನೇಮದಲಿದ್ದು
ತಂಬಿಟ್ಟಿನಾ ದೀಪ ಹೊರಲೇತಕೆ
ಕೊಂಬು ಹೋತ ಕುರಿ ಕೋಣನಾ ಬಲಿಗೊಂಬ
ದೊಂಬಿ ದೈವಗಳ ಭಜಿಸದಿರು ಮನವೆ
ಚಿಗುರೆಲೆ ಬೇವಿನ ಸೊಪ್ಪು ನಾರಸೀರೆ ಬಗೆಬಗೆಯಿಂದ ಶೃಂಗಾರ ಮಾಡಿ
ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು
ಮಿಗಿಲಾದ ಮುಕುತಿಯುಂಟೇ ಹುಚ್ಚು ಮನವೆ
ಧಾನಧರ್ಮ ಪರೋಪಕಾರವ ಮಾಡು
ದೀನನಾಗಿ ನೀ ಕೆಡಬೇಡವೊ
ಜ್ಞಾನವಿಲ್ಲದೆ ಹೀನ ದೈವವ ಭಜಿಸಲು
ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ
ನರಲೋಕದಿ ಯಮನ ಭಾಧೆಯ ಕಳೇಯಲು
ವರಪ್ಉಣ್ಯ ಕಥೆಗಳ ಕೇಳುತಲಿ
ಸಿರಿಯಾದಿ ಕೇಶವರಾಯನ ನೆರೆ ನಂಬಿ
ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ.
Rating
Comments
ಉ: ಕನಕದಾಸರ ಕೀರ್ತನೆಗಳು -೨ ಧಾನ ಧರ್ಮವಮಾಡಿ ಸುಖಿಯಾಗು ಮನವೆ