ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು

ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು

ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ ಸರಿ ಪಕ್ಕದ ಮನೆಗೆ ಹೋಗಿ ಮಾಲ್ಗುಡಿ ಡೇಸ್ ಧಾರವಾಹಿಯನ್ನು ನೋಡಿಬರ್ತಿದ್ವಿ.

ಆ ಧಾರವಾಹಿ ನಿರ್ಮಿಸಿದ ನಮ್ಮ ಮೆಚ್ಚಿನ ನಟ ಶಂಕರ್ ನಾಗ್ ನಮ್ಮನ್ನಗಲಿದ ದಿನ ಇಂದು. ನಾಟಕ,ರಂಗಭೂಮಿ,ದೂರದರ್ಶನ,ಚಲನ ಚಿತ್ರರಂಗವನ್ನ ಶ್ರೀಮಂತಗೊಳಿಸಿದ ಅವರ ಸಾಧನೆಗೆ, ನೆನಪಿಗೆ ನನ್ನ ನಮನ.

ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.ಸೆಪ್ಟೆಂಬರ್ ೩೦, ೧೯೯೦ ರಂದು ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ನಿಗೂಡ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.

ಶಂಕರ್‍ನಾಗ್ ಅಭಿನಯಿಸಿರುವ ಚಿತ್ರಗಳು:
ಸಿ.ಬಿ.ಐ.ಶಂಕರ್
ಆಟೋ ರಾಜ
ಮೂಗನ ಸೇಡು
ಸೀತಾ ರಾಮು
ಗೆದ್ದ ಮಗ
ಅಪೂರ್ವ ಸಂಗಮ
ಐ ಲವ್ ಯೂ
ನ್ಯಾಯ ಗೆದ್ದಿತು
ಹೊಸ ಜೀವನ
ಬೆಂಕಿ ಚೆಂಡು
ಸಾಂಗ್ಲಿಯಾನ
ಎಸ್.ಪಿ. ಸಾಂಗ್ಲಿಯಾನ-೨
ಇಂದಿನ ಭಾರತ
ರಕ್ತ ತಿಲಕ
ಕೆರಳಿದ ಹೆಣ್ಣು
ತಾಳಿಯಭಾಗ್ಯ
ತಾಯಿಯ ಕನಸು
ಹೊಸ ತೀರ್ಪು
ಮಾನವ ದಾನವ
ಮಕ್ಕಳಿರಲವ್ವ ಮನೆತುಂಬ
ನ್ಯಾಯ ಎಲ್ಲಿದೆ?
ಹಣಬಲವೋ ಜನಬಲವೋ
ಆರದ ಗಾಯ
ನೋಡಿ ಸ್ವಾಮಿ ನಾವಿರೋದು ಹೀಗೆ
ಜೀವಕ್ಕೆ ಜೀವ
ಸಂಸಾರದ ಗುಟ್ಟು
ರಸ್ತೆ ರಾಜ
ಕರಿನಾಗ
ಈ ಬಂಧ ಅನುಬಂಧ
ಲಾರಿ ಡ್ರೈವರ್
ಮುನಿಯನ ಮಾದರಿ
ಕಾರ್ಮಿಕ ಕಳ್ಳನಲ್ಲ
ಭಲೇ ಚತುರ
ಸುಂದರಕಾಂಡ
ನಗಬೇಕಮ್ಮ ನಗಬೇಕು
ತರ್ಕ
ಭರ್ಜರಿ ಬೇಟೆ
ಬೆದರುಬೊಂಬೆ
ಮಧುಚಂದ್ರ
ರುಸ್ತುಂ ಜೋಡಿ
ಆಟ ಬೊಂಬಾಟ
ಪ್ರೀತಿ ಮಾಡು ತಮಾಷೆ ನೋಡು.

Rating
No votes yet

Comments