ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಇವ್ರಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ? ಬೆಂಗಳೂರೇ ಬೇಕಾ? ಅದರಲ್ಲೂ ನಗರದ ನಟ್ಟ ನಡುವೆ ಈ ರೀತಿಯ ಒಂದು ಸಮಾರಂಭ ಬೇಕಾ? ಇವತ್ತು ನನಗೆ ಇಂಟರ್ವ್ಯೂ ಇದೆ ಸರ್, ಮಿಸ್ ಆಗ್ಬಿಟ್ರೆ , ನಿಮಗೆ ಗೊತ್ತಲ್ಲ ಸರ್ ಮಾರ್ಕೆಟ್ ಬೇರೆ ಕುಸಿದಿದೆ, ಇಂಟರ್ವ್ಯೂ ಕಾಲ್ ಬರೋದೇ ಕಷ್ಟ, ಅಂತದ್ದರಲ್ಲಿ ಬಂದಿರುವ ಅವಕಾಶ ಇವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿಕ್ಕಿ ಹಾಳಗುತ್ತಾ??

ಹೀಗೆ ಹೀಗೆ ಒಂದೇ ಸಮನೆ ತನ್ನ ದಿಗಿಲನ್ನು, ಹೇಳುತ್ತಿದ್ದವ , ಬಸ್ಸಿನಲ್ಲಿ ನನ್ನ ಮುಂದೆ ಕುಳಿತಿದ್ದ ಯುವಕ. ಹೌದು, ರೀ ನಿನ್ನೆ ನಾನು ನನ್ನಂತಹ, ಎಷ್ಟೋ ಜನರು ಪಡಬಾರದ ಪಾಡು ಪಟ್ಟು ಮನೆ ತಲುಪಿದ್ದಾರೆ, ಕೈಲಾದವರು ಆಟೋದಲ್ಲಿ ಒಂದಕ್ಕೆ ಎರಡರಷ್ಟು ಕೊಟ್ಟು ಹೋದರೆ, ಇನ್ನು ಕೆಲವರು ಬಸ್ಸಿನಲ್ಲೇ ಹೋದರು, ಇನ್ನು ಕೆಲವರಿಗೆ ಹೋಗಲು ಬಸ್ಸೇ ಇಲ್ಲ, ನಟರಾಜ ಸರ್ವಿಸ್ ಅವರದು ಪಾಪ :(

ಟ್ರಾಫಿಕ್ನ ನಡುವೆ ಅನಾಥವಾಗಿ ಕೂಗುತಿದ್ದ ಅಂಬುಲೆನ್ಸ್ಗಳನ್ನೂ ಕೇಳುವವರೇ ಇಲ್ಲ, ಅದರಲ್ಲಿದ್ದವ್ರ ಕತೆ ಏನಾಗಿರಬೇಡ? ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಬೇಕು, ಬಸ್ಸ್ ನಿಲ್ದಾಣದಲ್ಲಿ ಕಾದು ಕಾದು ಬಸವಳಿದಿದ್ದ , ಆ ಮುಖಗಳು, ವಯೋವ್ರುದ್ದರು ಅಬ್ಬಾ!!

ಇವೆಲ್ಲ ನಮ್ಮ ರಾಜಕಾರಣಿಗಳ ಬುದ್ದಿಗೆ ಹೊಳೆಯುವುದಿಲ್ಲವೇ? (ಅವರಿಗೆ ಬುದ್ದಿ ಇರುತ್ತಾ ?), ಇದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಲಯ , ಇಂತಹ ಸಭೆ ಸಮಾರಂಭಗಳನ್ನೂ ಊರ ಹೊರಗೆ ಮಾಡಿ ಎಂದು, ಆದರೆ ನಮ್ಮ ರಾಜಕಾರಣಿಗಳಿಗೆ ಅದು ಕೇಳುವುದೇ ಇಲ್ಲ.

ನಿನ್ನೆಯಂತು ಜೆ.ಡಿ.ಎಸ್ ನವರಿಗೆ ಅದೆಷ್ಟು ಮಂದಿ ಶಾಪ ಹಾಕಿದ್ದರೋ ಗೊತ್ತಿಲ್ಲ!!!!!

Rating
No votes yet

Comments