ಒಬ್ಬರನ್ನೊಬ್ಬರು ನೋಡದ ಪ್ರೀತಿ ಎಷ್ಟು ಸರಿ ?

ಒಬ್ಬರನ್ನೊಬ್ಬರು ನೋಡದ ಪ್ರೀತಿ ಎಷ್ಟು ಸರಿ ?

ನಮಸ್ಕಾರ ಗೆಳೆಯರೆ,

ನಾನಿಲ್ಲಿ ಹೇಳ ಹೊರಟಿರುವುದು, ಒಬ್ಬರನ್ನೊಬ್ಬರು ನೋಡಿ ಅವರವರ, ನಡೆ, ನುಡಿ, ಹಾವ, ಭಾವ ಎಲ್ಲವೂ ಒಕೆ ಅಂತಾದ ಮೇಲೆ ಮೂಡುವ ಕ್ರಶ್ ಅಂತ ಹೇಳುತ್ತಾರೆಲ್ಲ, ಅದರ ಬಗ್ಗೆ ಅಲ್ಲ, ಅಥವಾ ಮಾತನಾಡಲಿಕ್ಕೆ ಒಂದು ಹೆಣ್ಣು/ಗಂಡು ಹುಡುಗ ಇರಲಿ ಎಂದು ಫ಼್ಲರ್ಟ್ ರೀತಿಯದ್ದಲ್ಲ, ಅದೆಲ್ಲವೂ ಮೀರಿ ನಿಂತದ್ದು, ಒಬ್ಬರನ್ನೊಬ್ಬರು ನೋಡದೆ ಬರೇ ಪೋನಿನಲ್ಲೆ ಕಲ್ಪನೆಯ ಲೋಕಕ್ಕೆ ಭಾವ ಪ್ರಪಂಚಕ್ಕೆ ಕರೆದುಕೊಳ್ಳುವುದರ ಬಗ್ಗೆ, ಈ ವಿಚಾರದಲ್ಲಿ ತಮ್ಮಗಳ ಅಭಿಪ್ರಾಯ ತಿಳಿಸಿ.

ಅವಳಿರುವುದು ಉಡುಪಿ ಅವನು ಬೆಂಗಳೂರು, ಒಮ್ಮೆಯೂ ನೋಡಿಲ್ಲ ಒಬ್ಬೊರನ್ನೊಬ್ಬರ, ಅವಳು ಬೆಂಗಳೂರು ನೋಡಿಲ್ಲ, ಅವನು ಉಡುಪಿಗೆ ಹೋಗಿಲ್ಲ, ಎಲ್ಲೋ ಹೇಗೆ ಪರಿಚಯ ಎಂದು ತಿಳಿದಿಲ್ಲ, ಆದರೆ ದಿನಕ್ಕೆ ನಿಮಿಷದ ಲೆಕ್ಕದಲ್ಲೇ ಹೇಳುವುದಾದರೆ ಕನಿಷ್ಠ ೩೦೦ ನಿಮಿಷದ ಮಾತು, ಅರ್ಥವಾಗುತ್ತಿಲ್ಲ ಹೇಗೆ ಎಂದು ತಿಳಿಸುವಿರಾ

Rating
No votes yet

Comments