ಕಲ್ಪನೆಯು ಕನ್ಯೆ…
ಕಾದಿರುವುದೀ ಮನ ನಿನ್ನ ಬರುವಿಕೆಗಾಗಿ
ಕಾಯುತಿದೆ ಈ ಹೃದಯ ನಿನ್ನೊಲುಮೆಗಾಗಿ..
ನಿನ್ನ ಕಲ್ಪನೆಯದೊಂದು ಚಿತ್ರವನು ಹೃದಯದಿ ಹೊಂದಿರುವೆನು
ನಿನ್ನಂದವನು ನಾ ಕಂಡಿಲ್ಲ, ನಿನ್ನಯ ಚೆಲುವನ್ನು ಸೃಷ್ಟಿಕರ್ತನೇಬಲ್ಲನು…
ನನ್ನ ಕಲ್ಪನೆಯ ಬೆಡಗಿ ನೀ ಹೀಗಿರಬಹುದೆಂದು
ಚಿತ್ರಿಸಿರುವೆ ನಿನ್ನದೇ ರೂಪವನೊಂದು…
ಮುದ್ದಾದ ಸವಿಮಾತು ನನ್ನ ಕಿವಿಗೆ ಸಾಕು
ಮನಬಿಚ್ಚಿ ಮಾತಾಡೆ ಬೇರೇನು ಬೇಕು…
ಒಮ್ಮೊಮ್ಮೆ ಮೌನದಲಿ ಮಾತಾಡೆ
ಮತ್ತೊಮ್ಮೆ ಮಾತಿನಲಿ ಮೌನವ ಕಾಣೆ…
ಸೂರ್ಯ ರಶ್ಮಿಯ ತೇಜ ನಿನ್ನ ಕಣ್ಣು
ಮನದ ಮಾತನು ಅರಿವ ಮುಗ್ದ ಮನಸಿನ ಹೆಣ್ಣು…
ಉದ್ದವಾದ ದಟ್ಟ ಕಪ್ಪು ಕೂದಲು ನೀ ಹೊಂದಿರೆ
ಮುಖದ ಮೇಲಿನ ಮುಂಗುರುಳು ಮೋಡಿಯ ಮಾಡಿರೆ…
ನೀನಿರಬೇಕು ಎನ್ನಬಾಳಿನ ಸಂಗಾತಿಯಾಗಿ
ನಿನ್ನ ನಾ ಕಾಯುವೆ ಜೀವದ ಉಸಿರಾಗಿ…
ತೇಲಿಬಿಡು ನಿನ್ನ ನಗು ಸಮುದ್ರದ ಅಲೆಯಂತೆ
ನಗುನಗುತಾ ಬಾಳಿರೆ ಜೀವನದಿ ನಿಶ್ಚಿಂತೆ…
ಮಲ್ಲಿಗೆಯ ಕಂಪನು ಸೂಸು ನಮ್ಮಯ ಗೂಡಿನೊಳಗೆ
ನಲ್ಮೆಯ ಬಾಳನು ನಡೆಸುವ ಈ ಲೋಕದೊಳಗೆ…
ಮಾತೆ ತೋರುವ ಮಮತೆ ನಿನ್ನೊಳು ಇರಲಿ
ನಿನ್ನ ಹೃದಯದ ತುಂಬಾ ಕರುಣೆ ನೆಲೆಸಿರಲಿ…
ಎಲ್ಲರಲಿ ಬೆರೆನೀನು, ಮಾಡು ಮಾತಿನ ಮೋಡಿ
ನಿನ್ನ ಎಲ್ಲ ಗುಣವನು ಸಂತಸ ಪಡಬೇಕು ನೋಡಿ…
ನಾನಿಲ್ಲಿ ಬಣ್ಣಿಸುವ ಗುಣವೆಲ್ಲಾ ಒಬ್ಬಳಲಿ ಸಿಗುವುದು ಕಷ್ಟ :(
ಅವಳ ಬಳಿ ಇಲ್ಲದಿರೆ ಈ ಗುಣಗಳು, ಅದ ತುಂಬಲು ನನಗಿಷ್ಟ… :)
Comments
ಉ: ಕಲ್ಪನೆಯು ಕನ್ಯೆ…
ಉ: ಕಲ್ಪನೆಯು ಕನ್ಯೆ…
ಉ: ಕಲ್ಪನೆಯು ಕನ್ಯೆ…
ಉ: ಕಲ್ಪನೆಯು ಕನ್ಯೆ…