ರಾಜಕೀಯ ಹಾಗೂ ಇನ್ನಿತರ ವಿಷಯ ಸಂಬಂದಿ ವಿಷಯಗಳಿಗೆ ಮಾಡುವ ಮುಷ್ಕರ/ಸಮಾರಂಭಗಳಿಗೆ ಬೆಂಗಳೂರಿನ ಜನ ಪರಿತಪಿಸಬೇಕೆ? ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆ?
ಸ್ನೇಹಿತರೆ ,
ನಿಮಗೆ ಗೊತ್ತಿರುವ ಹಾಗೇ ಮೊನ್ನೆ ಹೋದ ಸೋಮವಾರ ಬೆಂಗಳೂರಿನಲ್ಲಿ ತಡ ರಾತ್ರಿವರೆಗೆ ಟ್ರಾಫಿಕ್ ಜಾಮ್ ಆಗಿದ್ದು ಯಾರು ಇನ್ನು ಮುಂದೆ ಅಸ್ತು ಸುಲಭವಾಗಿ ಮರೆಯಲು ಸಾದ್ಯವಿಲ್ಲ.
ಕುಮಾರಸ್ವಾಮಿ ಅದ್ಯಕ್ಷರಗಿದ್ದಕ್ಕೆ ಒಂದು ಸಮಾರಂಭ ಇಟ್ಟುಕೊಂಡು ಅದಕ್ಕಾಗಿ ಅರಮನೆ ಮೈದಾನ ಉಪಯೋಗಿಸಿಕೊಂಡು , ಅಡ್ಡ ದಿಡ್ಡಿ ಗಡಿಗಳನ್ನು ನಿಲ್ಲಿಸಿ ರಸ್ತೆ ಸಂಚಾರ ಅಸ್ತ ವ್ಯಸ್ತ ಮಾಡಿ ,೩೦ ಕೋಟಿ ಖರ್ಚು ಮಾಡಿ/ಮಾಡಿಸಿ ಕುಮಾರಸ್ವಾಮಿ ಗಳಿಸಿದ್ದೇನು?
ಅದಂತೂ ನಮಗೆ ಗೊತ್ತಿಲ್ಲ , ಆದರೆ ನಮಗೆ ಎಷ್ಟು ತೊಂದರೆ ಆಗಿದೆ ಅಂತ ಹೇಳಿಕೊಂದದ್ದಕ್ಕೆ/ ಪೇಪರ್ ನಲ್ಲಿ ಅನಿಸಿಕೆ/ಟಿವಿಗೆ ಅನಿಸಿಕೆ ತಿಳಿಸಿದ್ದೆ ತಡ ಕುಮಾರ ಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ/ ಹಾಗೂ ಹಳ್ಳಿಗರ ಪರ ವಕಾಲತ್ತು ವಹಿಸುವಂತೆ ಮಾತಾಡಿ ಪಟ್ಟಣದವರನ್ನ ಅದರಲ್ಲೋ
ಬೆಂಗಳೂರಿನ ಜನ ಅದರಲ್ಲೋ ಮುಖ್ಯವಾಗಿ ಐ ಟಿ , ಹಾಗೂ ವಿದ್ಯಾವಂತ ಪೋಷಕರ ಹಾಗೂ ಅವರ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿ ,ಇನ್ನು ಕೋಪ ಬರಲು ಕಾರಣವಾಗಿದ್ದಾರೆ.
ಈಗ ನೀವು ಹೇಳಿ ಅವರು ಮಾಡಿದ್ದೂ ಸರಿಯ?
ತಪ್ಪ?
ಇಲ್ಲ ನಾವು ನಮ್ಮ ಮಕ್ಕಳ ಬಗ್ಗೆ ಅವರು ಸ್ಕೂಲ್ ನಿಂದ ವಾಪಸ್ಸು ಮನೆಗೆ ಬರದಿದ್ದ ಬಗ್ಗೆ ಯೋಚಿಸಿದ್ದೆ ತಪ್ಪ?
ಈ dombaratakke ಕೊನೆ ಎಂದು?
Comments
ಉ: ರಾಜಕೀಯ ಹಾಗೂ ಇನ್ನಿತರ ವಿಷಯ ಸಂಬಂದಿ ವಿಷಯಗಳಿಗೆ ಮಾಡುವ ಮುಷ್ಕರ/ಸಮಾರಂಭಗಳಿಗೆ ಬೆಂಗಳೂರಿನ ಜನ ಪರಿತಪಿಸಬೇಕೆ? ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆ?