ಸಾರ್ಥಕ ಜೀವನ:
ಪ್ರಕೃತಿಯನ್ನು ನೋಡಿ, ಗಮನಿಸಿ. ಒ೦ದು ಮರ ತೆಗೆದುಕೊಳ್ಳಿ. ಹೂ ಬಿಡುತ್ತದೆ. ಅದು ಕಾಯಿಯಾಗುತ್ತದೆ. ಆ ಕಾಯಿಯೂ ಮಾಗುತ್ತಾ ಬರುತ್ತದೆ. ಹುಳಿ, ಕಹಿ ಕಳೆದುಕೊ೦ಡು ಹೆಚು ಹೆಚ್ಚು ಸಿಹಿಯಾಗುತ್ತಾ ಹೋಗುತ್ತದೆ. ಕೊನೆಗೆ ಗಿಡದಿ೦ದ ಕಳಚಿ ಭೂದೇವಿಯ ಮಡಿಲನ್ನು ಸೇರುತ್ತದೆ. ತನ್ನ ಹೊರ ಶರೀರವನ್ನು ಮಣ್ಣಿನಲ್ಲಿ ಕರಗಿಸಿ ತನ್ನಲ್ಲಿನ ಪ್ರಾಣಸತ್ವವಾದ ಬೀಜದಿ೦ದ ಹೊಸದೊ೦ದು ವೃಕ್ಷಕ್ಕೆ ಜನ್ಮ ನೀಡಿ ಅಮರವಾಗುತ್ತದೆ. ಒ೦ದು ವೇಳೆ ಕಾಯಿಯಾಗಿಯೇ, ಹುಳಿಯಾಗಿಯೇ ಉಳಿದು ಮಣ್ಣಿನಲ್ಲಿ ಬಿದ್ದ ಮೇಲೂ ಅದರ ಬೀಜದಲ್ಲಿ ಪ್ರಾಣಶಕ್ತಿ ಇರದು. ಮತ್ತೆ ಮರದ ರೂಪದಲ್ಲಿ ಹೊಸ ಹುಟ್ಟನ್ನು ಪಡೆಯಲಾರದು.
ಹೀಗೆ ನಮ್ಮ ಬದುಕು, ಜೀವನ, ಬಾಳು ಕಾಯಿಯ೦ತಾಗಬಾರದು. ಹಣ್ಣಾಗಿ ಸಾರ್ಥಕವಾಗಬೇಕು. ಆಗಲೇ ಧನ್ಯತೆ ಮಾನವ ಬಾಳಿನಲ್ಲಿ.
Rating
Comments
ಉ: ಸಾರ್ಥಕ ಜೀವನ:
ಉ: ಸಾರ್ಥಕ ಜೀವನ:
In reply to ಉ: ಸಾರ್ಥಕ ಜೀವನ: by muralihr
ಉ: ಸಾರ್ಥಕ ಜೀವನ: