ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ - ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ, ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ್ನೆಟ್ ಇವೆಲ್ಲ ಕಂಡದ್ದು. ಆಗಿನ್ನೂ ನ್ಯೂಸ್ ಗ್ರೂಪ್ ಗಳ ಕಾಲ. ನಮ್ಮಲ್ಲಿ ನ್ಯೂಸ್ ಗ್ರೂಪ್ ಗಳಿಗೂ ಪೋಸ್ಟ್ ಮಾಡೋಕಾಗ್ತಿರಲಿಲ್ಲ. ಆ ಕಾಲದಲ್ಲಿ ನಾನು ಬರೆದಿದ್ದ ಒಂದು ಇ-ಮೆಯ್ಲ್ ಎಲ್ಲೆಲ್ಲೋ ಸುತ್ತಿ ಕೊನೆಗೆ ನ್ಯೂಸ್ ಗ್ರೂಪ್ ನಲ್ಲೂ ಪೋಸ್ಟ್ ಆಗಿದ್ದನ್ನ ಕೆಲವು ವರ್ಷಗಳ ನಂತರ ಕಂಡಿದ್ದೆ. ಇದೆಲ್ಲ ನೆನಪಾಗಿ, ಸಪ್ತಾಕ್ಷರೀ ಮಂತ್ರವನ್ನು ಜಪಿಸಲು ಸಿಕ್ಕೇಬಿಡಬೇಕೇ? ಸುಮ್ಮನೆ ಇರಲಿ ಎಂದು ಇಲ್ಲಿ ಈಗ ಹಾಕುತ್ತಿರುವೆ.
ಹರಿ ಅವರೆ,ಇದು ಇಲ್ಲಿಗೆ ತಕ್ಕುದಲ್ಲವೆನ್ನಿಸಿದರೆ ತೆಗೆದು ಹಾಕಿರಿ.
ಇದು ನಾನು ಬರೆದದ್ದು ಸುಮಾರು ೧೯೯೩-೧೯೯೪ ರಲ್ಲಿ ಇರಬೇಕು -ಬರಹ-ಯುನಿಕೋಡ್ ಮೊದಲಾದ್ದೆಲ್ಲ ಬರೋದಕ್ಕೆ ಮುಂಚೆ - ನನ್ನ ನಂತರದ ಇಂಟರ್ನೆಟ್ ಅವತಾರಗಳನ್ನು ತಾಳುವ ಮೊದಲು ಬರೆದಿರುವುದಿದು ;-)
ಯಾವುದೇ ಬದಲಾವಣೆಗಳಿಲ್ಲದೆ ಹಾಕುತ್ತಿರುವುದರಿಂದ out of times ಎನ್ನಿಸಬಹುದೇನೋ!
-----------------------------------------------------------------------------------------------------------------------------------------------------
ಹೇಗಿದ್ದೀರಾ ಸ್ವಾಮಿ ,
ಸ್ವಲ್ಪ ಮುಂಚೆ Banglish ಬಗ್ಗೆ ಒಂದು ಮೈಲ್ ಬಂತು. Banglish ಅಂದ್ರೆ ಗೊತ್ತಲ್ಲ, ಬೆಂಗಳೂರಿನಲ್ಲಿ
ಮಾತಾಡೋ English. ನನಗನ್ನಿಸ್ತು, ನಾನ್ಯಾಕೆ Kanglish ಬಗ್ಗೆ ಬರೀಬಾರ್ದು ಅಂತ. ಏನಂತೀರಾ ?
Kanglish ಇದರ definition ಏನಪ್ಪಾ ಅಂದ್ರೆ (ನೋಡಿದ್ರಾ, ಏನು ಅಂತ
ಹೇಳೋದಕ್ಕೆ ಮುಂಚೇನೇ Kanglish ನಲ್ಲೇ start ಮಾಡ್ಬಿಟ್ಟೆ!. ಮುಖ್ಯವಾಗಿ ಬೆಂಗ್ಳೂರಿನಲ್ಲಿ
ಮಾತಾಡೋ (ಈಗೀಗ ಉಳಿದ ಕಡೆಗೂ ವ್ಯಾಪಿಸ್ತಾ
ಇರೋ ) ಕನ್ನಡ.
Kanglish ಕಲಿತ್ಕೊಳ್ಳೋದು ಬಹಳ easy ಬಿದಿ. ಮಾತಲ್ಲಿ ಆದಷ್ಟು English ಪದ ಸೇರಿಸ್ತಾ ಹೋದ್ರೆ ಆಯಿತು.
ಈಗ ನೋಡಿ ಒಂದು exampleಉ. ಯಾರೋ ಒಬ್ರು ಬಂದು ಒಂದು ಅಡ್ರೆಸ್
ತೋರ್ಸಿ ಕೇಳ್ತಾರೆ ಅಂತಿಟ್ಕೊಳ್ಳಿ:
"ಈ ಅಡ್ರೆಸ್ ಎಲ್ಲಿ ಬರತ್ತೆ, ಸಾರ್ ?"
Typical Kaglish ಉತ್ತರ will be like this :
Just ಇದೇ road ನಲ್ಲಿ about ten minutes walk ಮಾಡಿದ್ರೆ, ನಿಮ್ಮ left side ಗೆ ಒಂದು school ಬರತ್ತೆ - Kemp-Kemp English School. ಅಲ್ಲಿ opposite side ನಲ್ಲಿ ಒಂದು road ಹೋಗತ್ತೆ. ಆ roadಅಲ್ಲಿ, three crosses ಬಿಟ್ಟು 4th crossನಲ್ಲಿ turn ತೊಗೊಂಡ್ರೆ right sideನಲ್ಲಿ second house .
Kanglish ಬಗ್ಗೆ ಹೆಚ್ಚು ಪ್ರೀತಿ ಇರುವ ಬೆಂಗಳೂರಿಗರಿಗಾಗಿ ಈ rulesಅನ್ನು English ನಲ್ಲೇ ಕೊಟ್ಟಿದೆ!
First Golden Rule Of Kanglish
As far as possible "Relational Operators" are in English.
Exampleಗೆ ಹೇಳೋದಾದರೆ ನಮ್ಮ ತಾಯಿ, ನನ್ನ ತಂಗಿ, ನನ್ನ ಮಾವ ಇತ್ಯಾದಿ ಕಂಗ್ಲಿಶ್ ನಲ್ಲಿ prohibittedಉ. ಇವುಗಳು ನಮ್ಮ motherಉ, ನನ್ನ sisterಉ, ನನ್ನ father-in-law hIge transform ಆಗುತ್ತವೆ!
Second Golden Rule Of Kanglish
As far as possible, all 'directional operators' are in English
So, ಎದುರುಗಡೆ, ಹೊರಗಡೆ, ಒಳಗಡೆ, ಮೇಲ್ಗಡೆ
etc wordsಉ , ಕಂಗ್ಲಿಶ್ ನಲ್ಲಿ use ಮಾಡಲೇ ಬಾರದು. ಇವನ್ನೇ opposite sideಉ, outsideಅಲ್ಲಿ, ಅಲ್ಲಿ, topನಲ್ಲಿ ಅಂತ ಅಂದ್ರೇನೇ ಕಂಗ್ಲೀಶಿನ beauty !
Third Golden Rule Of Kanglish
As for as possible , keep adjectives in English
ಕಂಗ್ಲಿಶ್ ನಲ್ಲಿ ಉದ್ದ, ಎತ್ತರ, ಚೆನ್ನ, ಬೇಜಾರು, ಬುದ್ಧಿವಂತ, ಚುರುಕು, ಬಿಸಿ,ತಣ್ಣನೆ ಹೀಗೆ ಯಾವ ಕನ್ನಡ ವಿಶೇಷಣಗಳನ್ನೂ ಉಪಯೋಗಿಸಲೇಬಾರದು.
Example ಬೇಕು ಅಂದ್ರೆ ,
ನಮ್ಮ ಉಷಾ second daughterಉ very intelligentಉ! Poems ಎಲ್ಲಾ ಎಶ್ಟು fine ಆಗಿ recite ಮಾಡ್ತಾಳೆ ಅಂತೀರ !!
Coffee (ಕಾಫಿ - ಕನ್ನಡಿಗರ ಉಚ್ಚಾರದಲ್ಲಿ) cold ಆಗಿಬಿಡ್ತೋ ಏನೋ !
Three months ಇಂದ ಯಾವುದೂ cinema ನೋಡದೇ ತುಂಬಾ boreಉ.
History lecturerಉ ಎಶ್ಟು handsome, ನೋಡೇ !
Fourth Golden Rule of Kanglish
Anything related with money or status should be in English
Exampleಗೆ
ರಾಣಿ ಮನೇಲಿ, ಅವಳ್ಗೆ fifteen ತೊಲ gold ಹಾಕಿದ್ದಾರಂತೆ ಕಣ್ರೀ !
ನಮ್ಮ daughterಉ ಹೊಸ washing machine purchase ಮಾದಿದ್ದಾಳೆ. Thirty thousand Rupeesಉ !
ನಮ್ಮ ಶಾಲಿನಿ schoolಅಲ್ಲಿ feesಉ, three fifty rupees per monthಉ.
* Corollary : The more educated people often drop the extra ’ಉ’ at the end of Kanglish words.
Final Golden Rule Of Kanglish
If you want to be a Kanglish expert follow this rule:
If you can insert an English word at any place,just use it.
exampleಗೆ ಹೇಳೋದಾದ್ರೆ
Never say ಉಪಯೋಗಿಸು when you can say use ಮಾಡು
Never say ಸಹಾಯ ಬೇಕಿತ್ತು when you can say help ಬೇಕಿತ್ತು
Never say ನಾನು ತುಂಬಾ ಕಾದೆ when you can say ನಾನು long time wait ಮಾಡಿದೆ
Don't say ಜೊತೇಲಿ ಹೋಗು instead say accompany ಮಾಡು
Don't say ಬೆಲೆ ಜಾಸ್ತಿ ; use costly
Don't say ಕೆಲಸ ಮಾಡ್ತಾರೆ; use work ಮಾಡ್ತಾರೆ
Don't say ತಡ ಆಯ್ತು; Say late ಆಯ್ತು
Don't say ಯೋಚನೆ ಮಾಡ್ಬೇಡಿ ; Say worry ಮಾಡ್ಕೋಬೇಡಿ
Never say ಹೊಂದಿಕೊಂಡು ಹೋಗು for adjus ಮಾಡ್ಕೋ
Say no to ಮತ್ತೆ ನೋಡೋಣ ; it should be 'See You' !
So ,
See you
-ಹಂಸಾನಂದಿ
Comments
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
In reply to ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ? by venkatesh
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
In reply to ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ? by ASHOKKUMAR
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
In reply to ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ? by venkatesh
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
In reply to ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ? by kannadakanda
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
In reply to ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ? by kannadakanda
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
In reply to ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ? by srivathsajoshi
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
In reply to ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ? by srivathsajoshi
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?