ಕನ್ನಡ ಮತ್ತು ಕರ್ನಾಟಕ ಮತ್ತು ರಾಜ್ಯೋತ್ಸವ; ನೀವು ಏನು ಮಾಡುತ್ತಿದ್ದೀರಿ?

ಕನ್ನಡ ಮತ್ತು ಕರ್ನಾಟಕ ಮತ್ತು ರಾಜ್ಯೋತ್ಸವ; ನೀವು ಏನು ಮಾಡುತ್ತಿದ್ದೀರಿ?

೧. ಮೊದಲು ಈ ವಾರದ ಸುಧಾ ಕೊಂಡುಕೊಳ್ಳಿ ಇಲ್ಲವೆ ಅಂತರ್ಜಾಲದಲ್ಲಿ ಓದಿ (www.sudhaezine.com) . ರಾಜ್ಯೋತ್ಸವ ನಿಮಿತ್ತ ಒಳ್ಳೆಯ ಲೇಖನಗಳಿವೆ. ( ಅದೇಕೋ ಕನ್ನಡ ಕರ್ನಾಟಕ ಕುರಿತಾದ ಲೇಖನಗಳು ತರಂಗ ದಲ್ಲಿಲ್ಲ . ಕರ್ಮವೀರ ಸಿಗಲಿಲ್ಲ . ಕಸ್ತೂರಿಯಲ್ಲೂ ಇಲ್ಲ .)
ಸಾಮಾನ್ಯವಾಗಿ ಈ ಬಗೆಯ ಲೇಖನಗಳು ಆಗಾಗ ಸುಧಾ/ಮಯೂರ/ಪ್ರಜಾವಾಣಿಗಳಲ್ಲಿ ಮಾತ್ರ.
ಸುಧಾದಲ್ಲಿ ಭುವನೇಶ್ವರಿಯ ತೈಲಚಿತ್ರದ ಪ್ರತಿ ಇದೆ .

ನನಗೆ ಗೊತ್ತಿರಲಿಲ್ಲ , ಹಿಂದಿಯಂತೆ ಇಂಗ್ಲೀಷಿಗೂ ತನ್ನದೇ ಆದ ಲಿಪಿ ಇಲ್ಲ ! ಅದುಅ ಬಳಸುತ್ತಿರುವದು ಲ್ಯಾಟಿನ್ ಲಿಪಿ?

೨. ಕನ್ನಡದ ಏಳಿಗೆ ಕನ್ನ್ಡ ಜನರಿಂದ ಮಾತ್ರ ಸಾಧ್ಯ - ಸರಕಾರ / ಸಾಹಿತಿ/ಕಲಾವಿದರಿಂದಲ್ಲ. ಕನ್ನಡಮ್ಮನ ರಥಕ್ಕೆ ಕನ್ನಡಿಗರೇ ಸಾರಥಿಗಳು . ಎಂಬ ಲೇಖನ ಪ್ರಜಾವಾಣಿಯಲ್ಲಿದೆ. (೨೮-೧೦-೨೦೦೬). ಪ್ರತಿಯೊಬ್ಬ ಕನ್ನಡಿಗನೂ ಕನ್ನಡವನ್ನು ಬದುಕಿನ ಪ್ರತಿಹಂತದಲ್ಲೂ ಬಳಸಬೇಕು.

೩. ಶಿಕ್ಷಣರಂಗದಲ್ಲಿ ಕನ್ನಡವನ್ನು ಉಳಿಸಿದರೆ ಮಾತ್ರ ಕನ್ನಡ ಉಳಿಯುವುದು - ಬರಗೂರರ ಅಭಿಪ್ರಾಯ

೪. ತಂತ್ರಜ್ಞಾನಕ್ಕೆ ಕನ್ನಡ ತರುವದು ಇಂದಿನ ಅಗತ್ಯ. ( ಐ.ಟಿ. ಮೇಳದಿಂದ) .
ಇದನ್ನು ನಾನು ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ. ಲೈನಕ್ಸಿನ ಕನ್ನಡೀಕರಣದಲ್ಲಿ ತೊಡಗಿದ್ದೇನೆ. ಮತ್ತು ಕಂಪ್ಯೂಟರ್ ಕಲಿಕೆ ಸರಣಿಯನ್ನು ಸಂಪದದಲ್ಲಿ ಅರಂಭಿಸಿದ್ದೇನೆ.

ನೀವು ಏನು ಮಾಡುತ್ತಿದ್ದೀರಿ?

ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು .

ಕನ್ನಡವನ್ನು ಬಳಸಿ , ಕನ್ನಡವನ್ನು ಉಳಿಸಿ.

Rating
No votes yet

Comments