ಸಂಪದದಿಂದ ಸಂಪಾದಿಸೋಣ
ನಾನಂತೂ ಕನ್ನಡ ಸಾಹಿತ್ಯ ವಿದ್ಯಾರ್ಥಿ. ನನಗೂ ತಂತ್ರಜ್ಞಾನಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಅದರೂ ಅಸಕ್ತಿಯಿಂದ ಗಣಕದ ಬಳಕೆಯ ಕುರಿತು ಕಲಿತು ಕನ್ನಡ ಸಾಹಿತ್ಯದ ಸಂಸ್ಕೃತಿಯ ಕುರಿತು ನಮ್ಮ ಬೇರೆ ಬೇರೆ ಅಧ್ಯಯನ ಶಿಸ್ತುಗಳ ಪ್ರಿಯ ಯುವಜನತೆ ತಮ್ಮ ಅನಿಸಿಕೆಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲ ನನ್ನದು. ಅದಕ್ಕಾಗಿ ಈ ಸಂಪದದ ಸಂಪರ್ಕಕ್ಕೆ ಬಂದೆ. ಇಂದು ನಿಮಗೆಲ್ಲ ತಿಳಿದಿರುವಂತೆ ತೀರ ವಿವರಿಸಿಕೊಳ್ಳಲು ಕಷ್ಟಕರವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಜಾಗತಿಕರಣ, ಭಯೋತ್ಪಾದನೆ, ಅಯೋಗ್ಯ ರಾಜಕಾರಣ, ಕುಸಿಯುತ್ತಿರುವ ಮಾನವ ಪರ ಮೌಲ್ಯಗಳು ಇಂತಹ ಅನೇಕಾನೇಕ ಸಂದಿಗ್ಧಗಳು ನಮ್ಮ ಮುಂದಿವೆ. ನನಗನಿಸಿದಂತೆ ಕಂಪ್ಯೂಟರ್ ಲೋಕಕ್ಕೆ ಅನಕ್ಷರಸ್ಥರಾದ ನಾವು ನಿಮ್ಮೊಂದಿಗೆ ಗಣಕದ ಅ ಆ ಇ ಈ ಕಲಿಯಲು ಕುಳಿತಿದ್ದೇನೆ. ನಮ್ಮಲ್ಲಿ ಸಮಾಜ ವಿಜ್ಞಾನ ಕಲಿಯುವವರಿಗೆ ಮತ್ತು ವಿಜ್ಞಾನ ಕಲಿಯುವವರ ನಡುವೆ ಅಗಾಧವಾದ ಅಂತರವಿದೆ, ಯೋಚನೆಯ ಸ್ಥರಗಳಲ್ಲಿ ಕೂಡ. ಈ ವ್ಯತ್ಯಾಸವೇ ನಮ್ಮಲ್ಲಿ ಎರಡು ರೀತಿಯ ಜಗತ್ತನ್ನು ನಿರ್ಮಿಸಿದೆ. ರಾಶಿ ರಾಶಿ ಪದವಿಗಳ ಜೊತೆಗೆ ಅತ್ಯಲ್ಪ ಸಂಬಳ ಪಡೆಯುವ ಸಾಮಾನ್ಯ ಪದವಿಗಳ ಜನರಿಗೂ ಇದೀಗಷ್ಟೇ ಅಮೇರಿಕದ ಆರ್ಥಿಕ ಸೂಚ್ಯಾಂಕದ ಇಳಿತದಿಂದ ಕೆಲಸ ಕಳೆದು ಕೊಂಡ ಜನರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದು ಒಂದು ಉದಾಹರಣೆ ಮಾತ್ರ. ಸಾಹಿತ್ಯ ಕೃತಿಯೊಂದು ಬಿಡುಗಡೆಗೊಂಡಾಗ ಅದರ ಚರ್ಚೆಯಲ್ಲಿ ಭಾಗವಹಿಸುವ ಈ ಎರಡು ಸ್ಥರದ ಜನವರ್ಗ ಪ್ರತಿಕ್ರಿಯಿಸುವ ರೀತಿಗೂ ಭಿನ್ನತೆ ಇರುತ್ತದೆ. ಇದನ್ನು ಸಾಹಿತ್ಯವನ್ನು ತುಂಬಾ ವಿಮರ್ಶಾ ಗುಣವಿರುವ ವ್ಯಕ್ತಿಗೆ ಅನ್ವಯಿಸುತ್ತಿಲ್ಲ. ಹೀಗೆ ವ್ಯತ್ಯಾಸಗಳನ್ನು ಕಡಿಮೆಗೊಳಿಸಿಕೊಳ್ಳಲು ಏಕ ರೀತಿಯ ಯೋಚನೆಯನ್ನು ಎಲ್ಲ ಯುವ ಜನರ ನಡುವೆ ತರಲು ಸಾಧ್ಯವೇ? ಸಾಧ್ಯವಿರುವುದಾದರೆ ನಾವು ಕೊಳುಕೊಡುವಿಕೆಗೆ ಸಿದ್ಧರಾಗಬೇಕಿದೆ. ಸಂಪದದ ಸಹಾಯದಿಂದ ಸಂಪಾದಿಸೋಣ. ಸಂಪದದಿಂದ ಸಂಪಾದಿಸೋಣ
Comments
ಉ: ಸಂಪದದಿಂದ ಸಂಪಾದಿಸೋಣ