ಕಲಿಕೆಗೆಲ್ಲಿದೆ ಕೊನೆ...
ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ?
ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು
ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ?
ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು
ಕಲಿಯಬೇಕೆಂಬ ಹಂಬಲ ಕಾಡುತಿರಲು
ಕಲಿಕೆಗೆಲ್ಲಿದೆ ಕೊನೆ?
ನಿನ್ನೆ ಕಲಿತಿದು ಇಂದಿಗೆ ಹಳಸಲು
ಹೊಸತಿಗೆ ತಲೆಬಾಗು ಇಂದು
ಹೀಗೆ ದಿನ ದಿನವೂ ಹೊಸತಿರಲು ಕಲಿಕೆಗೆಲ್ಲಿದೆ ಕೊನೆ?
ಹೊಸನೀರು ಬರಲು, ಹಳೆನೀರು ತಳ ಸೇರಲು
ಹಳೇ ನೆನಪೇ ಹೊಸ ಹುರುಪಿಗೆ ಕಾರಣ
ಪುರಾತನವ ಮರೆಯದೆ, ಹೊಸತನವ ಕಲಿತು
ನಡೆಯೋಣ ಜಗದೊಳಿತಿನೆಡೆಗೆ.
Rating
Comments
ಉ: ಕಲಿಕೆಗೆಲ್ಲಿದೆ ಕೊನೆ...
In reply to ಉ: ಕಲಿಕೆಗೆಲ್ಲಿದೆ ಕೊನೆ... by savithasr
ಉ: ಕಲಿಕೆಗೆಲ್ಲಿದೆ ಕೊನೆ...
In reply to ಉ: ಕಲಿಕೆಗೆಲ್ಲಿದೆ ಕೊನೆ... by kannadakanda
ಉ: ಕಲಿಕೆಗೆಲ್ಲಿದೆ ಕೊನೆ...
In reply to ಉ: ಕಲಿಕೆಗೆಲ್ಲಿದೆ ಕೊನೆ... by kannadakanda
ಉ: ಕಲಿಕೆಗೆಲ್ಲಿದೆ ಕೊನೆ...
In reply to ಉ: ಕಲಿಕೆಗೆಲ್ಲಿದೆ ಕೊನೆ... by savithasr
ಉ: ಕಲಿಕೆಗೆಲ್ಲಿದೆ ಕೊನೆ...
ಉ: ಕಲಿಕೆಗೆಲ್ಲಿದೆ ಕೊನೆ...