ಭಯೋತ್ಪಾದಕರಿಗೆ ಜೈ

ಭಯೋತ್ಪಾದಕರಿಗೆ ಜೈ

ತಡೀರಿ, ತಡೀರೀ.. ನೀವು ಕೈಗೆ ಸಿಕ್ಕಿದ್ದನ್ನು ಈ ಲೇಖನದ ಮೇಲೆ ಎಸೆದರೆ ಹಾಳಾಗುವುದು ನಿಮ್ಮದೇ ಕಂಪ್ಯೂಟರ್. ನಾನು ರಾಜಕಾರಣಿಗಳ ತರಹ ನಿಮ್ಮಿಂದ ಸೇಫ್ ದೂರದಲ್ಲಿದ್ದೇನೆ. :)

ನಿಮ್ಮೆಲ್ಲರ ಕಣ್ಣು ಇತ್ಲಾಗೆ ತಿರುಗಬೇಕು. ಕೆಲವರ ಕಣ್ಣು ಕೆಂಪಾಗಬೇಕು. ಅಂತಹ ಸೆನ್ಸೇಶನಲ್ ಹೆಡ್ಡಿಂಗ್ ಬೇಕಿತ್ತು ನನಗೆ. ಅದಕ್ಕೇ..

ಮುಂಬೈ ಗಲಾಟೆಯಲ್ಲಿ ಮೆಷಿನ್‌ಗನ್, ಸ್ಫೋಟಕಗಳನ್ನು ಹಿಡಿದ ೩ ಉಗ್ರರ ನಡುವೆ ಸಿಕ್ಕಿ ಬಿದ್ದಿದ್ದೆ. ರಕ್ತ ಕೊತಕೊತ ಕುದಿಯಿತು. ‘ಕನ್ನಡ ತಾಯಿಗೆ ಜಯವಾಗಲಿ’ ಎಂದು, ಕೈಗೆ ಸಿಕ್ಕಿದ ‘ಲಾಂಗ’ನ್ನು ತೆಗೆದುಕೊಂಡು ಸುತ್ತಲೂ ಬೀಸಿದೆ. ನಾಲ್ಕು ಉಗ್ರರು ಸತ್ತು ಬಿದ್ದರು!!

೨-೩ ದಿನ ಬಿಡದೇ ತಾಜ್ ಮೇಲೆ ಉಗ್ರರ ದಾಳಿ ಟಿ.ವಿ.ಯಲ್ಲಿ ನೋಡಿದ್ದು + ಕಳೆದ ವಾರದಲ್ಲಿ ನೋಡಿದ ಕನ್ನಡ ಸಿನೆಮಾಗಳು ಒಂದಕ್ಕೊಂದು ಓವರ್‌ಲಾಪ್ ಆಗಿ ಈ ಕನಸು ಬಿದ್ದಿರಬೇಕು.
ತಮಾಷೆ ಬಿಟ್ಟು ಈಗ ಸೀರಿಯಸ್ ವಿಷಯ-

ಉಗ್ರರ ಮುಂದಿನ ಗುರಿ ಬೆಂಗಳೂರಂತೆ. ಅವರನ್ನು ಎದುರಿಸಲು ಸಜ್ಜಾಗಿರಲು ಹೇಳಿದ್ದಾರೆ. ಹೇಗೆ?
ರಾಜಕಾರಣಿಗಳಿಗೆ ಪೋಲೀಸರ ರಕ್ಷಣೆಯಿದೆ.
ಪೋಲೀಸರಿಗೆ ತೋರಿಸಲಿಕ್ಕಾದರೂ ಕೈಯಲ್ಲಿ ಗನ್ ಇದೆ.
ಜನಸಾಮಾನ್ಯರಾದ ನಮಗೆ?
ಬರಿಗೈಯಲ್ಲಿ ಹೋರಾಡುವ ಪ್ರಶ್ನೆಯೇ ಇಲ್ಲ. ನಾವು ಸಜ್ಜಾಗಿರುವುದು ಎಂದರೆ-
ಒಂದೆರಡು ದಿನ ಕೂಡಿಹಾಕಿದರೆ (ಒತ್ತೆಯಾಳಾಗಿ ಅಥವಾ ಅವರ ಕಣ್ಣುತಪ್ಪಿಸಿ ಅಡಗಿದ್ದರೆ)
ಜೀವ ಉಳಿಸಿಕೊಳ್ಳಲು ಕೊನೇ ಪಕ್ಷ ಸ್ವಲ್ಪ ಒಣಹಣ್ಣುಗಳನ್ನು, ಕುಡಿಯಲು ಒಂದು ಬಾಟಲ್ ನೀರು ನಮ್ಮ ಆಫೀಸ್ ಬ್ಯಾಗ್‌ನಲ್ಲಿ ಇಟ್ಟುಕೊಂಡಿರುವುದು.

ಈ ಡ್ರೈಫ್ರುಟ್ಸ್‌ಗಳನ್ನು ಇಟ್ಟುಕೊಳ್ಳಬೇಕೆಂಬ ಐಡಿಯಾ ಬಂದುದು ಭಯೋತ್ಪಾದಕರಿಂದ.
ಒಳ್ಳೇ ವಿಷಯ ವೈರಿಯಿಂದ ತಿಳಿದರೂ ಮೆಚ್ಚಬೇಕಲ್ಲವಾ? ಅದಕ್ಕೆ ‘ಭಯೋತ್ಪಾದಕರಿಗೆ ಜೈ’ ಅಂದೆ ಅಷ್ಟೆ.

ಏನೆಲ್ಲಾ ಇಟ್ಟುಕೊಳ್ಳ ಬಹುದೆಂದು ನೆಟ್‌ನಲ್ಲಿ ಹುಡುಕಿ ಕೆಲವನ್ನು ಸಂಗ್ರಹಿಸಿ ಬ್ಯಾಗ್‌ನಲ್ಲಿ ಇಟ್ಟುಕೊಂಡೆ. ನಿಮಗೂ ಗೊತ್ತಿರಲಿ ಅಲ್ವಾ-
ಗೋಡಂಬಿ, ಬಾದಾಮು, ಒಣಖರ್ಜೂರ, ಒಣದ್ರಾಕ್ಷಿ.
ಹೀಗೆ ಜಾಗ್ರತೆ ಮಾಡಿ, ಆಫೀಸಿನಲ್ಲಿ ನನ್ನ ಜತೆ ಕೆಲಸ ಮಾಡುವವರಿಗೂ ಈ ಐಡಿಯಾ ಕೊಟ್ಟೆ. ಸಂಜೆ ವೇಳೆಗೆ...
ಇದೇ ಸಹೋದ್ಯೋಗಿಗಳು ನನ್ನ ಮೇಲೆ ದಾಳಿ ಮಾಡಿ ಬ್ಯಾಗ್‌ನಲ್ಲಿದ್ದ ಬಾದಾಮು, ಗೋಡಂಬಿ ಎಲ್ಲಾ ಖಾಲಿ ಮಾಡಿ ‘ಭಯೋತ್ಪಾದಕರಿಗೆ ಜೈ’ ಅನ್ನೋದೆ. :(

-ಗಣೇಶ.

Rating
No votes yet

Comments