ಪೊೞ್ತೆಡೆಗಳಱಿಪ ಶಬ್ದಂಗಳ ಕೊನೆಯ ಹ್ರಸ್ವಸ್ವರಂಗಳ್ ದುರ್ಬಲಂಗಳ್

Submitted by kannadakanda on Wed, 12/03/2008 - 21:26

Comments

ಬರಹ

ಹೊತ್ತು ಮತ್ತು ಸ್ಥಳ (ಎಡೆ) ಸೂಚಿಸುವ ಶಬ್ದಗಳ ಕೊನೆಯ ಹ್ರಸ್ವಸ್ವರಗಳು ದುರ್ಬಲಗಳು. ಅಂದರೆ ಕಾಲ ಮತ್ತು ಸ್ಥಳಸೂಚಕ ಶಬ್ದಗಳ ಕೊನೆಯ ಹ್ರಸ್ವ ಸ್ವರಗಳು ಸಂಧಿಯಾಗುವಾಗ ಲೋಪವಾಗುತ್ತವೆ.

ಉದಾಹರಣೆಗೆ ಬೆಳಿಗ್ಗೆ, ಅತ್ತ, ಅಲ್ಲಿ, ನಡುವೆ, ಮೇಲೆ, ಒಳಗೆ ಇವು ಕಾಲಸೂಚಕ ಅಥವಾ ಸ್ಥಳ ಸೂಚಕ ಶಬ್ದಗಳು. ಬೆಳಿಗ್ಗಿನಿಂದ, ಅತ್ತಿತ್ತ, ಅಲ್ಲಲ್ಲಿ, ನಡುವಿನಿಂದ, ಮೇಲಿಂದ, ಒಳಗೊಳಗೆ ಹೀಗೆ ಪ್ರತ್ಯಯ ಸೇರುವಾಗಲೋ ಸಂಧಿಯಾಗುವಾಗಲೋ ಕೊನೆಯ ಹ್ರಸ್ವ ಸ್ವರಗಳಾದ ಅಕಾರ, ಇಕಾರ ಮತ್ತು ಎಕಾರಗಳು ಲೋಪವಾಗುವುದನ್ನು ಕಾಣಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet