ಧಾರವಾಡ ಸಹವಾಸ ಬೇಡವೇ ಬೇಡ
ನಾನು ಮೊನ್ನೆ ಅಂದರೆ 2 ನೇ ತಾರೀಕಿನಂದು ಕೆಲಸದ ನಿಮಿತ್ತ ಧಾರವಾಡಗೆ ಹೋಗಲು ತಯಾರಾದೆ. ಅದಕ್ಕೂ ಮುಂಚೆ ಧಾರವಾಡದ ಬಗ್ಗೆ ಸಂಪದ ಬಳಗದವರಿಂದ ಸ್ವಲ್ಪ ಮಾಹಿತಿ ಪಡೆಯಬೇಕೆಂದುಕೊಂಡೆ ಆದರೆ, ಸಮಯ ಅಭಾವದ ಕಾರಣ ಹಾಗೆ ಹೊರಟೆ. ಧಾರವಾಡಕ್ಕೆ ಇದು ನನ್ನ ಮೊದಲನೆಯ ಬೇಟಿ. ಅಂತು ನಾನು ಐರಾವತ ಏರಿ ಧಾರವಾಡ ಕಡೆ ಹೊರಟೆ. ಬಸ್ಸಲ್ಲಿ ಹಿಂದಿ ಭಾಷೆಯಲ್ಲಿ ಭಾಷಾಂತರಿಸಿದ ಜಾಕಿಚಾನ್ ಚಲನಚಿತ್ರ ನೋಡುತ್ತಾ ನಿದ್ದೆಯಲ್ಲಿ ಜಾರಿದೆ. ಸುಮಾರು 2:30 ರ ಸುಮಾರಿಗೆ ದಾವಣಗೆರೆಗೆ ಬಸ್ಸು ತಲುಪಿತು ಅಲ್ಲಿ ಸ್ವಲ್ಪ ಎಚ್ಚರ ಬಂತು ನಂತರ ನಿದ್ದೆಯ ಮಂಕಿನಲ್ಲಿ ಜಾರಿದೆ ಬೆಳಿಗ್ಗೆ ಸುಮಾರು 5:30 ಅಥವಾ 6:00 ಘಂಟೆ ಆಗಿರಬೇಕು ಹುಬ್ಬಳ್ಳಿ ತಲುಪಿದೆವು. ಅಲ್ಲಿಂದ ನನ್ನ ಗ್ರಹಚಾರ ಶುರುವಾಯಿತು ಅನಿಸತ್ತೆ, ಎಚ್ಚರವಾಯಿತು. ಧಾರವಾಡ ತಲುಪಿದ್ದು ಸುಮಾರು 7:00 ಗಂಟೆ ಇರಬೇಕು ಬಸ್ಸು ಇಳಿಯಲು ಬ್ಯಾಗಿಗೆ ಕೈ ಹಾಕುತ್ತೇನೆ ನನ್ನ ಬ್ಯಾಗ್ ನಾಪತ್ತೆಯಾಗಿತ್ತು. ನನ್ನ ಜೊತೆಗಿದ್ದ ಸ್ನೇಹಿತೆಯರು ಡ್ರೈವರ್ ಹತ್ತಿರ ಕಂಪ್ಲೆಂಟ್ ಹೇಳುತ್ತಿದ್ದರು ಡ್ರೈವರ್ ಏನೆಲ್ಲ ಇತ್ತು ಬ್ಯಾಗ್ನಲ್ಲಿ ಎಂದು ನನ್ನನ್ನು ಕೇಳಿದರು ನನ್ನ ಪರ್ಸ್ ಮತ್ತು ಡೆಬಿಟ್ ಕಾರ್ಡ್, ಬಟ್ಟೆ, ವಿಸಿಟಿಂಗ್ ಕಾರ್ಡ್ಸ್ ಮತ್ತು ಡೈರಿ ಇತ್ಯಾದಿಗಳು ಇದೆ ಎಂದು ತಿಳಿಸಿದೆ. ನಂತರ ಅಲ್ಲಿದ್ದಂತಹ ಬ್ಯಾಗ್ ಗಳನ್ನು ಯಾರದು ಎಂದು ಪ್ರತಿಯೊಬ್ಬರನ್ನು ವಿಚಾರಿಸುತ್ತಾ ಹೊರಟರು ಎಲ್ಲರು ನಂದು ನಿಂದು ಎಂದರು ಕಡೆಗೆ ಒಂದು ಬ್ಯಾಗ್ ಬಾಕಿ ಇತ್ತು ಅದನ್ನು ತೆಗೆದು ಒಳಗೆ ಏನಾದ್ರೂ ಮಾಹಿತಿ ಸಿಗತ್ತಾ ಎಂದು ನೋಡುತ್ತಿರಬೇಕಾದ್ರೆ, ನನ್ನ ಮೊಬೈಲ್ ರಿಂಗಾಯಿತು ನನ್ನ ಕಷ್ಟದಲ್ಲಿ ನಾನಿದ್ದರೆ ಯಾರಪ್ಪ ಇದು ಎಂದು ರಿಸೀವ್ ಮಾಡಿದೆ ಆಕಡೆಯಿಂದ ದಿಸ್ ಇಸ್ ನಾಗರಾಜ್, ಎಂದರು. ಎಸ್ ಎಂದೆ ಆಗ ಅವರು ನಿಮ್ಮ ಬ್ಯಾಗನ್ನು ನನ್ನ ಬ್ಯಾಗ್ ಎಂದು ತಿಳಿದು ತೆಗೆದುಕೊಂಡು ಹುಬ್ಬಳ್ಳಿಯಲ್ಲಿ ಇಳಿದಿದ್ದೇನೆ ದಯವಿಟ್ಟು ಕ್ಷಮಿಸಿ ಎಂದರು. ನಂತರ ಬ್ಯಾಗನ್ನು ಓಪನ್ ಮಾಡಿ ಎಂದರು ಓಪನ್ ಮಾಡಿದೆ ಅದರಲ್ಲಿ ಕ್ರೆಡಿಟ್ ಕಾರ್ಡ್ಸ್, ಡೆಬಿಟ್ ಕಾರ್ಡ್ಸ್, ಪಾಸ್ ಪೋರ್ಟ್ ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಇತ್ತು ನಂತರ ಅವರು ಡೈರಿ ಓದು ಇದೆ ಅದನ್ನ ತೆಗೆಯಿರಿ ಅದರಲ್ಲಿ ನನ್ನ ವಿಸಿಟಿಂಗ್ ಕಾರ್ಡ್ಸ್ ಇದೆ ಎಂದರು ಅದರಂತೆ ತೆಗೆದೆ ಕಾರ್ಡ್ ತೆಗೆದು ನೋಡಿದೆ ಅವರು ಗೋದ್ರೆಜ್ ಕಂಪನಿಯಲ್ಲಿ ಕೆಲಸಗಾರರಾಗಿದ್ದ. ನಂತರ ಅವರು ಎಲ್ಲಿ ಇದ್ದೀರಾ ಎಂದು ಕೇಳಿದರು ನಾನು ಧಾರವಾಡದಲ್ಲಿ ಇದ್ದೇನೆ ನನ್ನ ಬ್ಯಾಗ್ ತನ್ನಿ ನಿಮ್ಮ ಬ್ಯಾಗ್ ತೆಗೆದುಕೊಂಡು ಹೋಗಿ ಎಂದೆ ಅದರಂತ ಅವರು ಬರುವುದಾಗಿ ತಿಳಿಸಿದರು. ಅವರನ್ನು ಹಳೆ ಬಸ್ ನಿಲ್ದಾಣಕ್ಕೆ ಬರಲು ತಿಳಿಸಿ ಒಂದು ಅಟೋ ಹಿಡಿದು ನನ್ನ ಸ್ನೇಹಿತರೊಟ್ಟಿಗೆ ಹೋಟಲ್ (ಲಾಡ್ಜ್) ಹುಡುಕಲು ಹೊರೆಟೆವು ಅಲ್ಲಿ ಇಡಿ ಧಾರವಾಡ ಹುಡಿಕಿದರು ಸಹ ರೂಮ್ಸ್ ಸಿಗಲಿಲ್ಲ. ಅದೇ ಸಮಯಕ್ಕೆ ನನ್ನ ಬ್ಯಾಗ್ ಧಾರವಾಡ ತಲುಪಿತ್ತು ನನಗೆ ಹಳೆ ಬಸ್ ನಿಲ್ದಾನಕ್ಕೆ ಬರಲು ಪೋನ್ ಮಾಡಿ ತಿಳಿಸಿದರು ಅದರಂತೆ ಅಟೋ ಹಳೆಬಸ್ ನಿಲ್ದಾಣಕ್ಕೆ ತಿರುಗಿಸಿದೆವು. ಅಲ್ಲಿ ನನ್ನ ಬ್ಯಾಗ್ ಪಡೆದು ಅವರ ಬ್ಯಾಗ್ ನೀಡಿ ಅಲ್ಲಿಂದ ಮತ್ತೆ ಹೋಟಲ್ ಹುಡುಕಲು ಮುಂದಾದೆವು ಕಡೆಗೆ ಅಪೋಲೋ ಹೋಟಲ್ನಲ್ಲಿ ಕೇವಲ ಒಂದು ರೂಮ್ ಇತ್ತು ನಾವಿರುವುದು 3 ಜನ, ಇಬ್ಬರು ಹುಡುಗಿಯರು ಮತ್ತೆ ನಾನು. ಏನು ಮಾಡುವುದು ಎಂದು ರೂಮ್ ಪಡೆದೆವು. ನಂತರ ಅವರಿಗೆ ನಾನು ಮೊದಲು ಸ್ನಾನ ಮಾಡಿ ನಮ್ಮ ಸಂದರ್ಶನಕ್ಕೆ ಬೇಕಾದ ವ್ಯಕ್ತಿಗಳ ಸಂಪರ್ಕಕ್ಕೆ ಮುಂದಾಗುತ್ತೇನೆ ನಂತರ ಸ್ನಾನ ಮಾಡಿ ಬನ್ನಿ ಹೊರಗೆ ಇರುತ್ತೇನೆ ಎಂದು ಸ್ನಾನಕ್ಕೆ ಹೊರಟೆ ಅಲ್ಲಿ ನೋಡಿದರೆ ಬಿಸಿ ನೀರಿಲ್ಲ ತನ್ನಿರಿನಲ್ಲಿ ಸ್ನಾನ ಮಾಡಿ ಅನುಭವವಿಲ್ಲ ಏನು ಮಾಡುವುದು ನನ್ನ ಗ್ರಹಚಾರ ಎಂದು ತಿಳಿದು ಸ್ನಾನ ಮಾಡಿ ಹೊರ ಬಂದೆ. ಆಗ ನನಗೆ ಈ ಧಾರವಾಡ ಸಹವಾಸವೇ ಬೇಡ ಅನಿಸಿತು :)
Comments
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by hpn
ಉ: ಧಾರವಾಡ ಸಹವಾಸ ಬೇಡವೇ ಬೇಡ
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by kannadakanda
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by Nagaraj.G
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by ಶ್ರೀನಿವಾಸ ವೀ. ಬ೦ಗೋಡಿ
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by Nagaraj.G
ಉ: ಧಾರವಾಡ ಸಹವಾಸ ಬೇಡವೇ ಬೇಡ
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by anil.ramesh
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by Nagaraj.G
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by anil.ramesh
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by Nagaraj.G
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by anil.ramesh
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by Nagaraj.G
ಉ: ಧಾರವಾಡ ಸಹವಾಸ ಬೇಡವೇ ಬೇಡ
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by vinayak.mdesai
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by Nagaraj.G
ಉ: ಧಾರವಾಡ ಸಹವಾಸ ಬೇಡವೇ ಬೇಡ
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by shilpaam
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by Nagaraj.G
ಉ: ಧಾರವಾಡ ಸಹವಾಸ ಬೇಡವೇ ಬೇಡ
ಉ: ಧಾರವಾಡ ಸಹವಾಸ ಬೇಡವೇ ಬೇಡ
ಉ: ಧಾರವಾಡ ಸಹವಾಸ ಬೇಡವೇ ಬೇಡ
In reply to ಉ: ಧಾರವಾಡ ಸಹವಾಸ ಬೇಡವೇ ಬೇಡ by muralihr
ಉ: ಧಾರವಾಡ ಸಹವಾಸ ಬೇಡವೇ ಬೇಡ