ಕಲ್ಯಾಣಂ ತುಳಸಿ ಕಲ್ಯಾಣಂ ಕೀರ್ತನೆ
ಕೊನೆಗೂ ಈ ಹಾಡು ಸಿಕ್ಕಿತು.
ಈ ಕೀರ್ತನೆಯನ್ನುಶ್ರೀ ವಿದ್ಯಾಭೂಷಣರು "ಆರಭಿ" ರಾಗದಲ್ಲಿ ತುಂಬಾ ಸೊಗಸಾಗಿ ಹಾಡಿದ್ದಾರೆ.
ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ||
ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..||
ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ
ಶೃಂಗಾರ ಮಾಡಿ ಶೀಘ್ರದಿಂದ|
ಕಂಗಳ ಪಾಪವ ಪರಿಹರಿಸುವ ಮುದ್ದು
ರಂಗ ಬಂದಲ್ಲಿ ನೆಲೆಸಿದನು||ಕಲ್ಯಾಣಂ..||
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆ ಪುಷ್ಪದಿಂದ|
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು||ಕಲ್ಯಾಣಂ..||
ಉತ್ತಾನ ದ್ವಾದಶಿ ದಿವಸದಿ ಕೃಷ್ಣಗೆ
ಉತ್ತಮ ತುಳಸಿಗೆ ವಿವಾಹವ|
ಚಿತ್ತ ನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿಯೀವ ಪುರಂದರ ವಿಠಲ||ಕಲ್ಯಾಣಂ..||
Rating
Comments
ಉ: ಕಲ್ಯಾಣಂ ತುಳಸಿ ಕಲ್ಯಾಣಂ ಕೀರ್ತನೆ