ಸೀರೆಯುಟ್ಟ ನೀರೆ

ಸೀರೆಯುಟ್ಟ ನೀರೆ

ಗೆಳೆಯರೊಡನೆ ವಿಹರಿಸುತ್ತಾ ಬರುವಾಗ
ಸೀರೆಯುಟ್ಟ ನೀರೆಯರು ಎದುರಲ್ಲಿ ಬರುತಿದ್ದರೆ,
ಜೋಗ ಜಲಪಾತದ ಧಾರೆ ನೋಡಿದಷ್ಟು ಸಂತಸ
ಹೂ ತೋಟವೇ ಬೆಂಗಳೂರಿನ ಡಾಂಬರು
ರಸ್ತೆ ಮೇಲೆ ನಡೆದು ಬಂದಂತ ಅನುಭವ

ಹೂಗಳ ಲೋಕದಲ್ಲಿ ಯಾವ ಹೂ ಚಂದ
ಎಂದರೆ ಏನು ಹೇಳಲಿ, ಎಲ್ಲವು ಚಂದವೇ ಅಲ್ಲವೇ,
ಆ ಹೂಗಳ ತೋಟದಲ್ಲಿ ನನ್ನ
ಚಂದದ ಹೂ ನೋಡಿಯೇಬಿಟ್ಟೆನಲ್ಲಾ

ಕಡು ಕಪ್ಪು ಸೀರೆ, ದಿವ್ಯ ಹೊಳಪಿನ ಕಂಗಳು
ಬೆಳದಿಂಗಳ ರಾತ್ರಿಯ ಚುಕ್ಕಿ ಚಂದ್ರಮನಂತೆ
ಬಾನಂಗಳದಿ ಮಿನುಗುವ ಕೋಟಿ ಕೋಟಿ ತಾರೆಗಳ
ನಡುವೆ ಹೊಳೆವ 'ಧ್ರುವ ತಾರೆ' ಯಂತೆ
ಗೊಧೋಳಿಯ ಹೊಂಬಣ್ಣದ ಸೂರ್ಯನಂತೆ
ಮುಂಜಾನೆಯೇ ಚುಮು ಚುಮು ಮಂಜಿನಂತೆ

ಪ್ರೇಮದ ಪಲ್ಲಕ್ಕಿಯಲ್ಲಿ ಪಯಣಿಸೋಣವೇ
ಎಂದು ಅವಳಲ್ಲಿ ನನ್ನ ಪ್ರೇಮ ನಿವೇದನೆ
ಮಾಡಲು ನಿಶ್ಚಯಿಸಿ , ಎದುರು ನಿಂತರೆ
ನನ್ನ ಕಣ್ಣಲ್ಲಿ ಕಣ್ಣಿಟ್ಟು ಅವಳು ಹೇಳಿದಳು
"ಅಣ್ಣಾ!, ಸ್ವಲ್ಪ ಜಾಗ ಬಿಡ್ತೀರಾ, ಪ್ಲೀಸ್"!!

- ರಾಕೇಶ್ ಶೆಟ್ಟಿ :D

Rating
No votes yet

Comments