ಪ್ರಜಾವಾಣಿಯಲ್ಲಿ ನಾ ಕಸ್ತೂರಿಯವರ ಬಗ್ಗೆ ಲೇಖನ

ಪ್ರಜಾವಾಣಿಯಲ್ಲಿ ನಾ ಕಸ್ತೂರಿಯವರ ಬಗ್ಗೆ ಲೇಖನ

Comments

Submitted by gvmt Mon, 09/12/2005 - 06:31

ಬರಹ

ಪ್ರಜಾವಾಣಿಯಲ್ಲಿಂದು [kn:ನಾ ಕಸ್ತೂರಿ|ನಾ. ಕಸ್ತೂರಿ]ಯವರ ಬಗ್ಗೆ ಸ್ವಾರಸ್ಯಕರವಾದ ಲೇಖನ ಪ್ರಕಟವಾಗಿದೆ, [http://www.prajavani.net/sep112005/2789220050911.php|ಓದಿ].

ಲೇಖನದ ಕೆಲವು ತುಣುಕುಗಳು:

ಸರ್ಕಾರದ ಸ್ಕಾಲರ್ಶಿಪ್ ಐದು ರೂಪಾಯಿ ಮೂರು ವರ್ಷ ಲಭಿಸಿದ್ದು, ಹೆಚ್ಚಿನ ಅಂಕಗಳನ್ನು ಗಳಿಸಿದ್ದಕ್ಕಾಗಿ ಮೂರು ತಿಂಗಳಿಗೊಮ್ಮೆ ಒಂದು 'ರಾಣಿ ವಿಕ್ಟೋರಿಯ' ಇರುವ ನಾಣ್ಯವನ್ನು ಹೆಡ್ಮಾಸ್ತರರಿಂದ ತಪ್ಪದೆ ಪಡೆದ ಹೆಗ್ಗಳಿಕೆ ಕಸ್ತೂರಿಯವರದು.

ಕುಳಿತಲ್ಲಿ ನಿಂತಲ್ಲಿ ಹೊಸ ಪದಗಳನ್ನು ಸೃಷ್ಟಿಮಾಡುವ ಚಮತ್ಕಾರ ಅವರಲ್ಲಿತ್ತು. ಅದಕ್ಕೆ ಅವರು ಶಬ್ಧಬ್ರಹ್ಮರೆನಿಸಿಕೊಂಡಿದ್ದು, ಕೆಟ್ಟ ವಾತಾವರಣಕ್ಕೆ 'ನಾಥಾವರಣ' ಎನ್ನುತ್ತಿದ್ದರು. ಬರಗಾಲದಲ್ಲಿನ ಹಸುವನ್ನು 'ಕ್ಷಾಮಧೇನು' ಎನ್ನುತ್ತಿದ್ದರು. ದೇವಸ್ಥಾನದಲ್ಲಿ ಕೊಂಚೆವೇ ಸಿಗುವ ಪಂಚಾಮೃತವನ್ನು 'ಕೊಂಚಾಮೃತ ಕೊಡಿ' ಎಂದು ಕೇಳಿ ಎಲ್ಲರನ್ನೂ‌ನಗಿಸುತ್ತಿದ್ದರಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet