ಹೊಗೇನಕಲ್, ಹೊಸೂರು ಯಾಕೆ ತಮಿೞ್ನಾಡಿನದಲ್ಲ

ಹೊಗೇನಕಲ್, ಹೊಸೂರು ಯಾಕೆ ತಮಿೞ್ನಾಡಿನದಲ್ಲ

Comments

ಬರಹ

ಹೊಸೂರು (ಈಗ ತಮಿೞ್ನಾಡಿನಲ್ಲಿದ್ದರೂ) ಹಾಗೂ ಹೊಗೇನಕಲ್ ತಮಿೞ್ನಾಡಿಗೆ ಸೇರಲು ಸಾಧ್ಯವೇ ಇಲ್ಲ. ತಮಿೞ್, ತೆಲುಗು ಮತ್ತು ಮಲಯಾಳಂಗಳಲ್ಲಿ ಹಕಾರದಿಂದ ಪ್ರಾರಂಭವಾಗುವ ತೆನ್ನುಡಿ ಶಬ್ದಗಳಿಲ್ಲ. ಆದರೆ ಸ್ಥಿತ್ಯಂತರದಿಂದ ಕನ್ನಡದಲ್ಲಿ ವ್ಯಾಪಕವಾಗಿ ಪಕಾರ ಹಕಾರವಾಗಿದೆ. ಹಾಗಾಗಿ ಹೊಸೂರು ಶುದ್ಧ ಕನ್ನಡ ಶಬ್ದ. ತಮಿೞಿನಲ್ಲಿ ಸಕಾರವೂ ಇಲ್ಲ. ಹೊಸ ಎನ್ನುವುದಕ್ಕೆ ತಮಿೞಿನಲ್ಲಿ ಪುದು ಎನ್ನುತ್ತಾರೆ. ಹಾಗಾಗಿ ಹೊಸೂರು ಕರ್ನಾಟಕಕ್ಕೆ (ಕರ್ಣಾಟಕ) ಸೇರಿದ್ದು. ಅದೇ ರೀತಿ ಹೊಗೇನಕಲ್ ಕೂಡ ಹೊಗೆಗೆ ತಮಿೞಿನಲ್ಲಿ ಪುಗೈ ಎನ್ನುತ್ತಾರೆ. ಅಲ್ಲದೇ ಹಕಾರವಿಲ್ಲದ ತಮಿೞರು ಹೊಸೂರ್ ಎನ್ನುವುದನ್ನು ಒಚೂರ್ ಎಂತಲೂ ಹೊಗೇನಕ್ಕಲ್ ಎನ್ನುವುದನ್ನು ಪೊಗೇನಕ್ಕಲ್ ಎಂದು ಬರೆಯುತ್ತಾರೆ. ಸದಾ ಜಗಳ ಹುಟ್ಟು ಹಾಕುವ ಕರುಣಾನಿಧಿಗೆ ಈ ವಿಚಾರ ತಿಳಿಸುವವರಾರು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet