ಸಂಸ್ಕೃತ ಅವ್ವ ಕನ್ನಡ ಮಗಳು ಅನ್ನೋ ದೊಡ್ಡ ಸುಳ್ಳು !!
ಕನ್ನಡಿಗರಲ್ಲಿ ಸಂಸ್ಕೃತಮಯವಾಗಿರುವ ಮಾತು "ಒಳ್ಳೆಯ-ಕನ್ನಡ"ವೆಂದು ಬರೆಯದ
ಕಟ್ಟಳೆಯೊಂದು ಚಾಲ್ತಿಯಲ್ಲಿದೆ. ಒಳ್ಳೆಯ ಕನ್ನಡದ ಬರಹವೆಂದರೆ ಅದು ಬಹಳ ಸಂಸ್ಕೃತದ
ಪದಗಳಿರುವ ಬರಹವೇ ಎಂದು ಕೂಡ ಏರ್ಪಟ್ಟಿದೆ. ಹೆಚ್ಚು ಸಂಸ್ಕೃತದ ಪದಗಳಿರದ ಹಾಗೂ
ಸಂಸ್ಕೃತದಲ್ಲಿ ಉಲಿಯುವಂತೆ ಉಲಿಯದವರಿಗೆ ಕನ್ನಡವೇ ಸರಿಯಾಗಿ ಬರುವುದಿಲ್ಲವೆಂದು
ಬೈಯಲಾಗುತ್ತದೆ, ಅವರ "ಭಾಷೆ ಅಭಿವೃದ್ಧಿಹೊಂದಬೇಕು" ಎಂದೂ ಹೇಳಲಾಗುತ್ತದೆ. ಆದರೆ
ನಿಜಕ್ಕೂ ನೋಡಿದರೆ ಸಂಸ್ಕೃತದಿಂದ ಬಹಳ ಕಡಿಮೆ ಪ್ರಭಾವಿತವಾಗಿರುವ ಒಂದು ನುಡಿಯನ್ನೇ
ಹೆಚ್ಚಾಗಿ ಕನ್ನಡಿಗರು ಆಡುವುದು. ಅದೇ ನಿಜವಾದ ಕನ್ನಡ. ಅದರಲ್ಲಿ ಒಳ್ಳೆತನದ ಎಳ್ಳಷ್ಟೂ
ಕೊರತೆಯಿಲ್ಲ. ಅದು ಯಾವುದೇ ರೀತಿಯ ಅಭಿವೃದ್ಧಿಯನ್ನು ಕೂಡ ಹೊಂದಬೇಕಿಲ್ಲ....
ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ
ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ
ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ
ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ
ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ
ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಮ್ಮ
ಮುಂದಿಡುತ್ತಿದೆ.
ಇವತ್ತಿನಿಂದ ಆ ಸರಣಿ ಬರಹ ಶುರು ಆಗ್ತಿದೆ:
http://enguru.blogspot.com/2008/12/olleya-kannadavendare.html
ನೀವು ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಅನ್ನೊ ಏನ್ ಗುರು ಸಂಪಾದಕರ ಮಾತಿನಂತೆ , ಸಂಪದದ ಗೆಳೆಯರೊಡನೆ ಹಂಚಿಕೊಳ್ಳಲು ಇಲ್ಲಿ ಹಾಕಿದೆ.
Comments
ಉ: ಸಂಸ್ಕೃತ ಅವ್ವ ಕನ್ನಡ ಮಗಳು ಅನ್ನೋ ದೊಡ್ಡ ಸುಳ್ಳು !!