ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು!
ನನ್ನ ಮೆಚ್ಚಿನ ದಾಸ ಸಾಹಿತ್ಯ - ಪುರಂದರ ದಾಸರ ಅಪರೂಪದ ಪದ!!!
ದೈನಂದಿನ ಕೆಲಸಗಳ ಮಧ್ಯೆ ದೇವರ ವಂದನೆ, ಪ್ರಾರ್ಥನೆ ಮಾಡಲಾಗದ ವರ್ಗಕ್ಕೆ ಸೇರಿದ ನನ್ನ ವೃತ್ತಿಗೆ ಹೇಳಿ ಮಾಡಿಸಿದ ಪದವಿದು. ಕಾಯಕವೇ ಕೈಲಾಸ ವೆಂದು ವಿವೇಕಾನಂದರು ಎರಡು ಪದಗಳಲ್ಲಿ ಜನ ಸಾಮಾನ್ಯರಿಗೆ ಉಪದೇಶಿಸಿದ ತತ್ವವೂ ಹೌದು. ನಮ್ಮಂತಹವರು ದಿನಾ ದಿನಾ ಹೆಚ್ಚುತ್ತಿದ್ದಾರೆ. ಕರ್ತವ್ಯನಿಷ್ಟೆಯಲ್ಲಿದ್ದರೆ, ದೇವರಿಗೆ ಅದೇ ಒಂದು ಪೂಜೆ ಎಂದು ನಂಬುವುದು ಯಾರಿಗೂ ಕಷ್ಟವಾಗಬಾರದು. ಹಾಗಂದ ಮಾತ್ರಕ್ಕೆ ದೇವರ ಬಳಿ ಹೋಗಲೇ ಬೇಡಿ ಅಂತ ನಾನು ಹೇಳುತ್ತಿಲ್ಲ. ಆದಾಗ ಹೋಗಿ ಪೂಜೆ ಮಾಡುವುದು, ಆಗದಿದ್ದಾಗ ದೇವರನ್ನೇ ನಾವು ಕೆಲಸಮಾಡುವ ಜಾಗಕ್ಕೆ ತರುವುದು (ಮನಸ್ಸಿಗೆ, ನಮ್ಮ ಕೆಲಸದಲ್ಲಿ ತರುವುದು) ದೇವರು ಖಂಡಿತಾ ಒಪ್ಪುತ್ತಾನೆ ಎಂದು ನನ್ನ ಅಭಿಪ್ರಾಯ. ಇದನ್ನು ಪುರಂದರದಾಸರು ಅವರ ಕಾಲದಲ್ಲೇ ಅರಿತು, ಅನುಭವಿಸಿ, ಹರಿಭಕ್ತಿಯ ಇನ್ನೊಂದು ರೂಪವನ್ನು ನಮ್ಮ ಮುಂದಿಟ್ಟಿದ್ದಾರೆ. ಆ ಪದ ಹೀಗಿದೆ.......................
ಸುಲಭ ಪೂಜೆಯ ಮಾಡಿ ಬಲವಿಲ್ಲದವರು
ನಳಿನನಾಭನ ಪಾದ ನಿರತ ಸೇವಕರು...................ಪ..........................
ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು
ಮರೆಮಾಡುವಾ ವಸ್ತ್ರ ಪರಮ ಮಡಿಯು
ತಿರುಗಾಡಿ ದಣಿವುದೇ ಹರಿಗೇ ಪ್ರದಕ್ಷಿಣೆಯು
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು...................೧.......ಸುಲಭ........
ನುಡಿವ ಮಾತುಗಳೆಲ್ಲ ಕಡಲ ಶಯನನ ಜಪವು
ಮಡದಿಮಕ್ಕಳು ಮತ್ತು ಒಡನೆ ಪರಿವಾರ
ನಡುಮನೆಯು ಅಂಗಳವು, ಉಡುಪಿ ವೈಕುಂಠಗಳು
ಎಡಬಲದ ಮನೆಯವರು ಕಡುಭಾಗವತರು...................೨........ಸುಲಭ........
ಹೀಗೆ ಅನುದಿನ ಕಳೆದು, ಹಿಗ್ಗುವಾ ಜನರ
ಭವ ರೋಗ ಪರಿಹರವು ಮೂಜಗದಿ ಸುಖವು
ಹೋಗುತಿದೆ ಈ ಆಯು ಬೇಗದಿಂದಲಿ ನಮ್ಮ
ಯೋಗೀಶ ಪುರಂದರ ವಿಠಲನನು ನೆನೆನೆನೆದು................೩........ಸುಲಭ.......
ಈ ಕೃತಿಯನ್ನು ಹರಿಕಾಂಭೋಧಿ ಮತ್ತು ಕಲ್ಯಾಣಿ ರಾಗಗಳಲ್ಲಿ ಹೇಳಬಹುದು. ಯಾರಿಗಾದರೂ ಹಾಡಿರುವ ಕ್ಲಿಪ್ ಸಿಕ್ಕರೆ ದಯವಿಟ್ಟು ಹಂಚಿಕೊಳ್ಳಿ. ನನಗೆ ಗೊತ್ತಿರುವ ಹಾಗೆ ಉನ್ನಿ ಕೃಷ್ಣನ್ ಮತ್ತು ಕಲ್ಯಾಣ ರಾಮನ್ ಈ ಕೃತಿಯನ್ನು ಹಾಡಿದ್ದಾರಂತೆ.
~ಮೀನಾ ಸುಬ್ಬರಾವ್.
Comments
ಉ: ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು!
In reply to ಉ: ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು! by savithru
ಉ: ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು!
In reply to ಉ: ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು! by rasikathe
ಉ: ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು!
In reply to ಉ: ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು! by kpbolumbu
ಉ: ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು!