ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)
(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.
ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)
ಓ ಭಯೋತ್ಪಾದಕನೇ..
ನಿಲ್ಲು ನಿಲ್ಲು ನನ್ನ ಕಂಡು
ಏಕೆ ನೀ ಕಂಗೆಟ್ಟು ಓಡುತ್ತಿರುವೇ? ನಿಲ್ಲು
ಓ ಭಯೋತ್ಪಾದಕ ನಾನಲ್ಲ ನಿನ್ನ ಪಾಲಿನ ಅಂತಕ
ನಾ ಭಾರತ ಮಾತೆಯ ಮಡಿಲ ಎಳೆಯ ಬಾಲಕ
ಅವಳ ಸೇವೆಯೇ ನನ್ನ ಪಾಲಿಗೆ ಒಲಿದಿರುವ ಕಾಯಕ
ನಾ ನಿನ್ನಲಿಗೆ ಬಂದಿರುವೆ ಕೇಳಲೆಂದು ನಿನಗೆ ಹಲವು ಪ್ರಶ್ನೆ
ಮಾಡದೆ ನನಗೆ ಹಿಂಸೆ ಬಗೆ ಹರಿಸುವೆಯಾ ನನ್ನಯ ಪ್ರಶ್ನೆ?
ಓ ಭಯೋತ್ಪಾದಕನೇ..
ಜಗದಲಿ ಅಮಾಯಕ ಜನರ ನೀ ಏಕೆ ಕೊಲ್ಲುವೇ?
ಇದಕ್ಕೆಲ್ಲ ನಿನಗೆ ಯಾರು ಅಂತಹ ಪ್ರೇರಣೆ?
ಪ್ರೇರಣೆ ಯಾರಾದರೇನು? ಜಗದಲಿ ನೆಡೆವ
ವಿದ್ವಂಸಕ ಕೃತ್ಯಗಳಿಗೆಲ್ಲ ನೀನ್ ತಾನೆ ನೇರ ಹೊಣೆ?
ಓ ಭಯೋತ್ಪಾದಕನೇ..
ಬುದ್ದಿ ಮಾತೊಂದು ನಾ ಹೇಳುವೆ ನೀ ಕೇಳು ಸುಮ್ಮನೆ
ಮನುಜನೇ ನೀ ಆದರೆ ಒಮ್ಮೆ ಮಾಡಿ ಸರಿ ಯೋಚನೆ
ಈ ಭಯೋತ್ಪಾದನೆಯ ಇಂದಿಗೆ ನೀ ಮಾಡು ಕೊನೆ
ಧರೆಯನು ಆಗಲು ಬಿಡು ಶಾಂತಿ ತುಂಬಿದ ಮನೆ
ಓ ಭಯೋತ್ಪಾದಕನೇ..
ನೀ ಕೇಳದೆ ಹೋದರೆ ನನ್ನ ಮಾತು..
ನಾ ಆದ ಮೇಲೆ ಯುವಕ ತೊಟ್ಟು ಶಾಂತಿ ದ್ಯೋತಕ
ಆಗಲಿರುವೆನು ಮಾನವೀಯತೆಯ ಪೊರೆವ ಸೇವಕ
ಕಣ್ಣಾರೆ ಕಂಡು ನೀ ಮಾಡುತ್ತಿರುವ ಹೀನ ಕಾಯಕ
ಆಗಲಿರುವೆನು ನಿನಗೆ ನೀತಿಪಾಠವ ಕಲಿಸುವ ಸೈನಿಕ
ಭೂವಿಯಲಿ ಎಲ್ಲೆಡೆ ಮಾಡಿ ಅಹಿಂಸೆಯ ಸಂಗ್ರಾಮ..
ಭಯೋತ್ಪಾದನೆಗೆ ನಾ ಇರಿಸುವೆನು ಪೂರ್ಣವಿರಾಮ!
- ಸುನಿಲ್ ಮಲ್ಲೇನಹಳ್ಳಿ
Comments
ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)
In reply to ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ) by Rakesh Shetty
ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)
In reply to ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ) by anil.ramesh
ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)
In reply to ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ) by anil.ramesh
ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)
ಉ: ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)