ಗರ್ಲ್ ಫ್ರೆಂಡ್ ಹುಡ್ಕೋ ಸ್ಕೀಮು

ಗರ್ಲ್ ಫ್ರೆಂಡ್ ಹುಡ್ಕೋ ಸ್ಕೀಮು

ಸಾಧಾರಣವಾಗಿ ಈ ಸಮಸ್ಯೆ ಗೀಕ್ ಗಳನ್ನು ಕಾಡತ್ತೆ.

ಸೀನು: ಭಾನುವಾರ. ಸಂಜೆ ಗೆಳೆಯರ ಜೊತೆ ಸುತ್ತಾಡಿ ಕಾಫಿಗೆ ಅಂತ ಒಂಧೋಟ್ಲಲ್ಲಿ ಕೂತಿದೀವಿ.

ಸಿಸ್ಯ #1: ಲೋ ಮಗಾ ... ಈಗ ನಮ್ ____ಗೂ ಒಬ್ಬ ಗರ್ಲ್ ಫ್ರೆಂಡು. ಹೆಂಗೆ!

ಸಿಸ್ಯ #2: ಛೋ*

ಗೀಕ್ ಸಿಸ್ಯ #1.0:  ಲೋ, ಹಂಗಂದ್ರೆ ನಾನೊಬ್ನೆ ಈಗ ಒಂಟಿ ಗೂಬೆ J! ಹುಡುಕ್ಕಳೋ ಟೈಮ್ ಆಯ್ತು ಮಗಾ! 

ಇದ್ಕೆ ಸಿಸ್ಯ #1 && #2 ಬಿದ್ಬಿದ್ ನಗ್ತಾರೆ. ತಕ್ಕಳಪ್ಪ, ಇದೊಳ್ಳೆ ಜೋಕು!!

"ಇವ್ನಿಗೂ ಒಂದಾ .... ಈ ದ್ರಾಬೆಗ್ಯಾಕ್ ಇಂತಾ ಹುಚ್ಚು" ಅಂತ ಖಂಡಿತಾ ಅಲ್ಲ್ವೆ ಅಲ್ಲ!

ವಿಷ್ಯ ಅವೈಲಬಿಲಿಟಿ && ಕಂಪ್ಯಾಟಬಿಲಿಟಿ ಬಗ್ಗೆ.

*ಇದು ಥೋ ಮತ್ತು ಛೇ ಇವೆರ್ಡ್ರ ಕಾಂಬೋ. ಸ್ವಲ್ಪ ಅಡ್ಜಸ್ಟ್ ಮಾಡ್ಕಳಿ.

/**********************************************************************

ಹುಡ್ಕೋ ಕಥೆ ಹೀಗೆ.

ಗರ್ಲ್ ಫ್ರೆಂಡ್ ಬೇಕಾಗಿದ್ದಾಳೆ

ಎಲಿಜಿಬಿಲಿಟಿ ಕ್ರೈಟೀರಿಯಾ:

ü      C/C++/perl/python/php/ruby/UNIX shell scripting ಸ್ವಲ್ಪ ಒಳ್ಳೆ ಮಟ್ಟಿಗೆ ಗೊತ್ತಿದ್ದು ಪ್ರೊಗ್ರಾಮಿಂಗ್ನಲ್ಲಿ ಆಸಕ್ತಿ ಇರಬೇಕು.

ü      RMS/Torvalds/AST ಅಂದ್ರೆ 'ಅದ್ಯಾರು?' ಅಂತ (ಆಶ್ಚರ್ಯ ಪಟ್ಟು) ಕೇಳ್ಬಾರ್ದು. 

ü      GNU/Linux && FOSS, Open source, FSF ಬಗ್ಗೆ ಗೊತ್ತಿದ್ದು ಆಸಕ್ತಿ ಇರಬೇಕು.

ü      ತುಂಬಾ ತಲೆ ಕೆಡ್ಸಿಕೊಂಡು ಕೋಡ್ಗೀಚಿ 'ಹೆ, ಇದ್ನೋಡು, ಹೆಂಗನ್ಸತ್ತೆ?' ಅಂದ್ರೆ ... ಕಿರ್ಚಾಡಿ/ಕೂಗಾಡಿ/ಹಾರಾಡಿ ರಗಳೆ ಮಾಡಬಾರದು. ["ಏನ್ ಕೊಳ್ಕ್ ಪ್ರೊಗ್ರಾಮು/ಕೋಡ್ ಇದೂ, ಸರೀಗಿಲ್ಲ! ಈ-ಈ ಥರಾ ರಿಪೇರಿ ಮಾಡ್ಬೋದು" ಅಂತ ಬೇಕಿದ್ರೆ ಕಮೆಂಟ್ಲಿ ... ನಮ್ಗಿನ್ನೂ ಒಳ್ಳೇದೇ, ಕುಣ್ದ್ ಕುಪ್ಪ್ಳ್ಸದೇ!]

ಇಷ್ಟೆ ನನ್ ರಿಕ್ವೈರ್ಮೆಂಟು ... J

Ø      ಕನ್ನಡದ ಹೆಣ್ಮಣಿಗಳಿಗೆ ಮೊದಲ ಆದ್ಯತೆ.

*/ 

ಇದರ ಅರ್ಥ, ಮೇಲೆ ಗೀಚಿರೋ ಸ್ಪೆಸಿಫಿಕೇಶನ್ ಮ್ಯಾಚ್ ಆಗೋ ಹೆಣ್ಮಣಿ ಸಿಗುವ ಅಥ್ವಾ ನಂಗ್ ಗರ್ಲ್ ಫ್ರೆಂಡ್ ಸಿಗೋ ಪ್ರೊಬ್ಯಾಬಿಲಿಟಿ =

       

J

ತುಂಬಾ ಸಿಂಪಲ್ಲೆಕ್ಕಾಚಾರ, ಇನ್ನು ಜಾಸ್ತಿ ತಲೆ ಕೆಡ್ಸ್ಕೊಳೊ ಸ್ಕೀಮಿಲ್ಲ. ಮನೆಘೋಗಿ ಅರ್ಧಕ್ಕ್ಬಿಟ್ಟಿರೋ ಎನ್ನೆಫ್ಫೆಸ್-ಗಣೇಶ ಓದ್ಬೇಕು.

Rating
No votes yet

Comments