ನಾನೂ , ಸಂಪದವೂ , ಲೀನಕ್ಸೂ , ಸಮಸ್ಯೆಯೂ

ನಾನೂ , ಸಂಪದವೂ , ಲೀನಕ್ಸೂ , ಸಮಸ್ಯೆಯೂ

ನಾವು ಯೂನಿಕ್ಸಿನಲ್ಲಿ 1992 ರಿಂದಲೇ ಕೆಲಸ ಮಾಡುತ್ತಿರುವೆವದರೂ ಲೀನಕ್ಸ್ ಬಗ್ಗೆ ಗೊತ್ತಿದ್ದದ್ದು ಕಡಿಮೆ . ಲೀನಕ್ಸು ಅಂತ ಒಂದಿದೆ , ಕಾಪಿಲೆಫ್ಟ್ , GNU ಇತ್ಯಾದಿ ಕೇಳಿ/ಓದಿ ಗೊತ್ತಿತ್ತು ಅಷ್ಟೆ . ಸಂಪದಕ್ಕೆ ಬಂದ ಮೇಲೆ ಉಬುಂಟು ಬಗ್ಗೆ ಓದಿ , ಪುಕ್ಕಟೆಯಗಿ ಸೀಡೀ ತರಿಸಿಕೊಂಡು .. ಮೊದಲು ಕಚೇರಿಯಲ್ಲಿ ಖಾಲೀ ಬಿದ್ದ ಪೀಸೀಗಳಲ್ಲಿ ಲೋಡ್ ಮಾಡಿ ನಂತರ ನನ್ನದಕ್ಕೆ ಮಾಡಿಕೊಂಡೆ :) ಇತ್ತೀಚೆಗೆ ಮನೆಯಲ್ಲಿ ಪೀಸೀ ತಗೊಂಡು ಇಂಟರ್ನೆಟ್ಟು ಹಾಕಿಸಿಕೊಂಡ ಮೇಲೆ ಉಬುಂಟು ಲೀನಕ್ಸ್ ಹಾಕಿಕೊಂಡಿರುವೆ . ಕನ್ನಡ ಬರಲು ಹರಿಪ್ರಸಾದ ನಾಡಿಗರು ನೆರವು ನೀಡಿದರು . ಕನ್ನಡ ಆಡಿಯೋ ಕಾಂ ನಿಂದ ಹಾಡುಕೇಳಲು ರಿಯಲ್ ಪ್ಲೇಯರ್ ಹಾಕಿಕೊಂಡೆನು . ವಿಡಿಯೋ ನೋಡಲೂ ಅನುಕೂಲ ಮಾಡಿಕೊಂಡೆನು . ತಕ್ಕ ಮಟ್ಟಿಗೆ ನನ್ನ ಎಲ್ಲ ಅಗತ್ಯಗಳು ಈಡೇರಿದಂತಾಯಿತು . ( ಈಗ ಸುನೀಲ ಜಯಪ್ರಕಾಶರ ನೆರವಿನಿಂದ ಡಿಜಿಟಲ್ ಲೈಬ್ರರಿ ಯಿಂದ ಕನ್ನಡ ಪುಸ್ತಕ ಡೌನ್ಲೋಡ್ ಮಾಡಿಕೊಳ್ಳಲು ಒಂದು ಶೆಲ್ ಸ್ಕ್ರಿಪ್ಟ್ ಬರೆದುಕೊಳ್ಳುತ್ತಿರುವೆ. )
ಇನ್ನೇನು ಕನ್ನಡ ಹಾಡು ಕೇಳೋದು ಮತ್ತೆ ಕನ್ನಡ ಪುಸ್ತಕ ಓದೋದು ಅಷ್ಟೇ ಮಾಡಬೇಕೆಂದಿದ್ದೇನೆ !
ರಾಶಿ ಹಾಡಿವೆ , ರಾಶಿ ಪುಸ್ತಕ ಇವೆ .

ಇವತ್ತು ಮೊಜಿಲ್ಲ ಫೈರ್ ಫ್ಯಾಕ್ಸಿನಲ್ಲಿ ಮೂರೋ ನಾಲ್ಕು ಟ್ಯಾಬ್ ತೆರೆದಿಟ್ಕೊಂಡಿದ್ದೆ ... ಒಬ್ಬಿಬ್ಬರ ಜತೆ ಪಿಡ್ಗಿನ್ ಅಂತ ಟೂಲ್ ಬಳಸಿ ಚ್ಯಾಟ್ ಮಾಡ್ತಾ ಇದ್ದೆ . ಆ ಕಿಟಕಿ ಮಂಕಾಯಿತು .. ಬ್ಲಿಂಕ್ ಆಗತೊಡಗಿತು ... ನಂತರ this appln not responding ಅಂತ ಬಂತು .. ಲಾಗೌಟ್ ಮಾಡಿ ಮತ್ತೆ ಲಾಗಿನ್ ಮಾಡಿದೆ ಸ್ವಲ್ಪ ಹೊತ್ತಿನ ನಂತರ ಮತ್ತೆ ಅದೇ ತೊಂದರೆ ! ಅಲ್ಲಿ ಇಲ್ಲಿ ಕ್ಲಿಕ್ ಮಾಡಿ ನೋಡಿದೆ ...ರೆಸ್ಪೊಂಡ್ ಮಾಡುತ್ತಲೇ ಇಲ್ಲ ... ವಿಂಡೋಸ್ ನಲ್ಲಾದರೆ ಟಾಸ್ಕ್ ಮ್ಯಾನೇಜರ್ ಇರುತ್ತದೆ ..ಅಲ್ಲಿ ಹೋಗಿ ಸರಿಯಗಿ ಕೆಲ್ಸ ಮಾಡದ ಅಪ್ಲಿಕೇಶನ್ ಅನ್ನ ಕೊನೆಗೊಳಿಸಬಹುದು . ಶಟ್ ಡೌನ್ ಮಾಡಬಹುದು ... ಇಲ್ಲಿ ಅಂತದ್ದೇನಿದೆ ? ಗೊತ್ತಾಗಲಿಲ್ಲ ... ಕೊನೆಗೆ ಸ್ವಿಚ್ ಆಫ್ ಮಾಡಲೇ ಬೇಕಾಯಿತು.
ಈಗ ನನ್ನ ಪ್ರಶ್ನೆಗಳು ಹೀಗಿವೆ

೧) ಲೀನಕ್ಸಿನಲ್ಲಿ ಹೀಗೂ ಆಗುತ್ತದೋ ?
೨) ಇಂಥ ವೇಳೆ ಏನು ಮಾಡಬೇಕು?
೩) ಇಲ್ಲೂ ಟಾಸ್ಕ್ ಮ್ಯಾನೇಜರ್ ತರಹ ಏನಾದರು ಇದೆಯೇ ?

ಯಾರಾದರೂ ಬಲ್ಲವರು ತಿಳಿಸುವಿರಾ ?

Rating
No votes yet

Comments