ಕೋದಂಡರಾಮಯ್ಯನವರಿಗೊಂದು ಉದ್ದಂಡ ನಮಸ್ಕಾರ
ಬರಹ
ಇತ್ತೀಚೆಗೆ ಪ್ರಜಾವಾಣಿಯಲ್ಲಿ ಓದಿದ ಒಂದು ಸುದ್ದಿಯಲ್ಲಿ ಮಾಜಿ ಪೊಲೀಸ್ ಅಧಿಕಾರಿಯಾದ ಶ್ರೀಯುತ ಕೋದಂಡರಾಮಯ್ಯನವರು ಸಾರ್ವಜನಿಕ ಹೇಳಿಕೆ ನೀಡುತ್ತಾ, ನಮ್ಮ ಪೊಲೀಸರು ಸ್ವಾಮಿಗಳಿಗೆ ಯೂನಿಫಾರಂ ಹಾಕಿಕೊಂಡು ತಲೆ ತಗ್ಗಿಸಿ ನಮಸ್ಕಾರ ಮಾಡಿದರೆ, ಅದು ಸರಕಾರಕ್ಕೆ, ಡಿಪಾರ್ಟ್ ಮೆಂಟಿಗೆ ಅವಮಾನವಾದಂತೆ, ಸರಕಾರಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದಿದ್ದಾರೆ. ಸರಿ ಸ್ವಾಮಿ, ತಾವು ಸ್ವಾಮಿಗಳಿಗೆ ತಲೆಬಾಗಿ ನಮಸ್ಕರಿಸಬೇಡಿ, ಆದರೆ ರಾಜಕಾರಣಿಗಳಿಗೆ ಧೀರ್ಘದಂಡ ನಮಸ್ಕಾರ ಮಾಡುತ್ತೀರಲ್ಲಾ ಇದು ಸರಿಯೇ? ನಮ್ಮ ಪಿಸಿಗಳನ್ನು ತಮ್ಮ ಮನೆ ಆಳುಗಳನ್ನಾಗಿ ದುಡಿಸಿಕೊಳ್ಳುವ ರಾಜಕಾರಣಿಗಳು, ಹಿರಿಯ ಸರಕಾರಿ ಅಧಿಕಾರಿಗಳು ಸರಕಾರಕ್ಕಿಂದಲೂ, ಡಿಪಾರ್ಟ್ ಮೆಂಟಿಗಿಂತಲೂ ಹೆಚ್ಚಿನವರೇ? ಉತ್ತಮ ಗುಣಮಟ್ಟವನ್ನು ಹೆಚ್ಚಿನಂಶ ಸ್ವಾಮಿಗಳು ಉಳಿಸಿಕೊಂಡಿದ್ದಾರೆ. ಆದರೆ ಉತ್ತಮ ಗುಣಮಟ್ಟ ಹೊಂದಿರುವ ರಾಜಕಾರಣಿಗಳು ಹಾಗು ಸರಕಾರಿ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟೇ ಅಲ್ಲವೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕೋದಂಡರಾಮಯ್ಯನವರಿಗೊಂದು ಉದ್ದಂಡ ನಮಸ್ಕಾರ
In reply to ಉ: ಕೋದಂಡರಾಮಯ್ಯನವರಿಗೊಂದು ಉದ್ದಂಡ ನಮಸ್ಕಾರ by prasca
ಉ: ಕೋದಂಡರಾಮಯ್ಯನವರಿಗೊಂದು ಉದ್ದಂಡ ನಮಸ್ಕಾರ
ಉ: ಕೋದಂಡರಾಮಯ್ಯನವರಿಗೊಂದು ಉದ್ದಂಡ ನಮಸ್ಕಾರ