ಆಸೆ

ಆಸೆ

ಒಂದಾನೊಂದು ಕಾಲದಲ್ಲಿ ನನಗೆ ಎಂತಹ ಆಸೆ ಇತ್ತೂಂತಿರಿ, ಕಂಡ ಕಂಡ ವಸ್ತುಗಳೆಲ್ಲ ನನ್ನದಾಗಿದ್ದರೆ ಅಂತ ಮನಸ್ಸು ಆಸೆ ಪಡುತ್ತಿತ್ತು. ಆಗ ಕೈಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ. ಆ ಆಸೆಯೇ ನನ್ನನ್ನು ಕಷ್ಟಪಟ್ಟು ಓದಿ, ಸಂಪಾದಿಸಿ, ಒಂದು ನೆಲೆ ಕಂಡುಕೊಳ್ಳುವ ಹಾಗೆ ಪ್ರೇರೇಪಿಸಿತು.

ಈಗ ಹಲವಾರು ವರ್ಷಗಳ ನಂತರ ಒಂಥರ ತಟಸ್ಥ ಮನೋಭಾವ ಮನೆ ಮಾಡಿಕೊಂಡು ಬಿಟ್ಟಿದೆ. ನನ್ನ ಸುತ್ತಮುತ್ತಲ ಸ್ನೇಹಿತೆಯರೆಲ್ಲ ಸೀರೆ, ಬಟ್ಟೆ, ಒಡವೆ ಅಂತೆಲ್ಲ ಮಾತಾಡುತ್ತಿದ್ದರೆ ನನಗೆ ಅದರಲ್ಲಿ ಪಾಲ್ಗೊಳ್ಳಲು ಹಿಂದಿನ ಉತ್ಯಾಹವೆ ಇರುವುದಿಲ್ಲ. ಇವರೆಲ್ಲ ದೊಡ್ಡ ಮನೆ, ಹೊಸ ಕಾರು ಹೀಗೆ ವಸ್ತುಗಳ ಹಿಂದೆ ಬಿದ್ದಿರುವಂತೆ ಅನ್ನಿಸತೊಡಗಿದೆ. ಹಾಗಂತ ನಾನೇನು ಸನ್ಯಾಸಿನಿಯಲ್ಲ. ಆದ್ರೆ, ಹಿಂದೆ ಒಂದು ವಸ್ತು ಕೊಂಡಾಗ ಸಿಗುತ್ತಿದ್ದ ತೃಪ್ತಿ ಈಗ ಸಿಗುತ್ತಿಲ್ಲ, ಜೊತೆಗೆ ಅದು ಸಿಗದಲ್ಲ ಎಂಬ ಅರಿವು ನಾನು ಕೊಳ್ಳುವುದನ್ನು ಸಹ ಕಮ್ಮಿ ಮಾಡಿದೆ! ಇದಕ್ಕೆ ಉತ್ತರವೇನೆಂದು ಹುಡುಕುತ್ತಿದ್ದೇನೆ. ಬಹುಶಃ,
೧. ನನಗೆ ಹೊಟ್ಟೆ(ಮನಸ್ಸು) ತುಂಬಿದೆ
೨. ನನಗೆ ಮನೋರೋಗವಿದೆ
೩. ಈ ಪ್ರಪಂಚಲ್ಲಿನ್ನು ನನಗೆ ಆಸೆ ಬರಿಸುವ ವಸ್ತುಗಳೆಲ್ಲ ಖಾಲಿಯಾಗಿದೆ
೪. ನನಗೆ ಆಸೆ ಬರಿಸುವ(ಆದರೆ ಸಧ್ಯಕ್ಕೆ ಗೊತ್ತಿಲ್ಲದಿರುವ) ಏನೋ ವಸ್ತುವೊಂದಿದೆ

ನಿಮಗ್ಯಾರಿಗಾದರೂ ಉತ್ತರ ಗೊತ್ತ?

Rating
No votes yet

Comments