DLI ನಿಂದ ಪುಸ್ತಕದ ಪುಟ ಇಳಿಸಿಕೊಳ್ಳಲು ನಾನು ಮಾಡಿಕೊಂಡ ವ್ಯವಸ್ಥೆ.

DLI ನಿಂದ ಪುಸ್ತಕದ ಪುಟ ಇಳಿಸಿಕೊಳ್ಳಲು ನಾನು ಮಾಡಿಕೊಂಡ ವ್ಯವಸ್ಥೆ.

ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ ಇಟ್ಟುಕೊಂಡಿದ್ದೆ , ಕಂಡ ಕೆಲವು ಒಳ್ಳೆಯ ಪುಸ್ತಕಗಳ ಕೊಂಡಿಯನ್ನೂ ನಿಮಗೆ ಈ ಬ್ಲಾಗ್ ಮೂಲಕ ಕೊಟ್ಟಿದ್ದೆ .
ಅಲ್ಲಿರೋ ಪುಸ್ತಕ ಓದಲು ಒಂದೊಂದೇ ಪುಟ ಕ್ಲಿಕ್ ಮಾಡುತ್ತಾ ಓದುತ್ತಾ ಹೋಗಬೆಕಾಗುತ್ತದೆ . ಆಮೇಲೆ ಓದಬೇಕೆಂದರೆ ಪ್ರತಿಯೊಂದನ್ನೂ ಉಳಿಸುತ್ತಾ ಹೋಗಬೇಕು . ಎಷ್ಟೊಂದು ಕೀಲಿ ಕುಟ್ಟೋದು ? ಒಂದೇ ಸಲಕ್ಕೆ ಅನೇಕ ಪುಟ ಇಳಿಸಿಕೊಳ್ಳಲು ನಾನು ಹಾಕ್ಕೊಂಡಿರೋ ಉಬುಂಟು ಲೈನಕ್ಸಿನಲ್ಲಿ ಒಂದು ವ್ಯವಸ್ಥೆ ಮಾಡಿಕೊಂಡಿದ್ದೀನಿ . ಇದು ಚೆನ್ನಾಗಿ ಕೆಲಸ ಮಾಡ್ತಾ ಇದೆ.

ಎರಡು ಕಡತ ಮಾಡ್ಕೊಂಡಿರುವೆ ,

ಒಂದು dli.pl . ಅದರೊಳಗೆ ಇರೋದು ಈ ಸಾಲುಗಳು .

$file=$ARGV[0];

$start=$ARGV[1];
$end=$ARGV[2] ;

$count=0 ; while ($count <13) { chop $file ; $count++; }

while ($start <= $end )
{
print "wget " , $file, "/";
printf "%8.8d.tif\n" , $start;
$start+=1;
}

ಇನ್ನೊಂದು dli.sh ಅದರಲ್ಲಿರೋದು ಈ ಕೆಳಗಿನ ಸಾಲುಗಳು

perl dli.pl $1 $2 $3 > s
sh s

ಅಷ್ಟೇ !

ಇದನ್ನ ನಾನು ಹೇಗೆ ಬಳಸ್ತೀನಿ ಅನ್ನೋದನ್ನ ನಾನು ತಿಳಸ್ತೀನಿ .

ಒಂದು ಟರ್ಮಿನಲ್ ತೆರೆದು ಈ ಕಡತಗಳು ಇರೋ ಡೈರೆಕ್ಟರಿಗೆ ನಾನು ಹೋಗ್ತೀನಿ .
ಕಂಪ್ಯೂಟರ್ ಗೆ ನಾನು ನಾನು ಕೊಡೋ ಕಮ್ಯಾಂಡು / ಆದೇಶ ಹೀಗಿರುತ್ತದೆ .

./dli.sh ಡಿಎಲ್ಐನಲ್ಲಿ-ಪುಸ್ತಕದ-ಯಾವುದಾದರೂ-ಪುಟದ-ಲಿಂಕ್ ಆರಂಭ-ಪುಟದ-ಸಂಖ್ಯೆ ಕೊನೆಯ-ಪುಟದ-ಸಂಖ್ಯೆ
ಉದಾಹರಣೆಗೆ

./dli.sh http://dli.iiit.ac.in//server25/data/mnt/disk_122/NORMALDATA/SVI/December_2007/kANADA/barakoo_padaa_barakoo/PTIFF/00000001.tif 5 10

ಈ ಕಮ್ಯಾಂಡನ್ನು ಕೊಟ್ಟು ಎ೦ಟರ್ ಒತ್ತಿದ ಕೂಡಲೇ ದೀಪಾವಳಿ ಅನ್ನೋ ಕವನ ಸಂಕಲನದ ಪುಸ್ತಕದ ೫ ರಿಂದ ೧೦ ರವರೆಗಿನ ಆರು ಪುಟಗಳು ನನ್ನ ಕಂಪ್ಯೂಟರ್ ಗೆ ಇಳಿದುಬಿಡುತ್ತವೆ. ಮೌಸ್ ಒತ್ತೀ ಒತ್ತೀ ನನ್ನ ಕೈ ನೋವಾಗೋದೂ , ಮುಂದೆ ಯಾವತ್ತೋ ನನ್ನ ಕೈಗೆ ಏನೋ ತೊಂದರೆ ಆಗೋ ಸಾಧ್ಯತೆನೂ ಕಡಿಮೆ ಆಗುತ್ತದೆ !

ಎಲ್ಲ ಸರಿ. ಡಿಎಲ್ಐನಲ್ಲಿ-ಪುಸ್ತಕದ-ಪುಟಗಳಿರೋ-ಸ್ಥಳ ಹೇಗೆ ಗೊತ್ತಾಗುತ್ತದೆ ಅಂತೀರಾ ? ಡಿಜಿಟಲ್ ಲೈಬ್ರರಿಗೆ ಹೋಗಿ ನಮಗೆ ಬೇಕಾದ ಪುಸ್ತಕದ ಹೆಸರಿನ ಮೇಲೆ ಕ್ಲಿಕ್ಕಿಸಿದಾಗ ತೆರೆಯುವ ಪುಟದಲ್ಲಿ High Bandwidth Reader ಮುಂದಿನ Click here ಮೇಲೆ ಕ್ಲಿಕ್ಕಿಸಿದಾಗ ಅದರ ಮೊದಲ ಪುಟ ಡೌನ್ಲೋಡ್ ಆಗುತ್ತೆ ತಾನೆ ? ಡೌನ್ಲೋಡ್ ಆದ ಪುಟದ ಬಗ್ಗೆ ಮಾಹಿತಿ ಮೊಝಿಲ್ಲ ಫೈರ್ಫಾಕ್ಸ್ ನ ಡೌನ್ಲೋಡ್ಸ್ ಕಿಟಕಿ( ಇದನ್ನ ಟೂಲ್ಸ್-ಡೌನ್ಲೋಡ್ಸ್ ಆಯ್ಕೆ ಮಾಡಿ ತೆರೆಯಬಹುದು) ಯಲ್ಲಿ ಇರುತ್ತದೆ ಅಲ್ಲಿ ಬಲ-ಕ್ಲಿಕ್ ಮಾಡಿದಾಗ copy download link ಅಂತ ಇರೋದನ್ನ ಕ್ಲಿಕ್ಕಿಸಿ ನಿಮಗೆ ಸಿಗುತ್ತದೆ . ಅದನ್ನ ಈ ಕಮ್ಯಾಂಡಿನಲ್ಲಿ ಪೇಸ್ಟ್ ಮಾಡಿ . ಅಷ್ಟೇ ...

ಹೀಗೆ ಇಳಿದ ಪುಟಗಳನ್ನು ಒಂದು ಡಿರೆಕ್ಟರಿ ಮಾಡಿಕೊಂಡು ಅಲ್ಲಿ ಇಟ್ಟುಕೊಳ್ಳಿ. ಇವುಗಳನ್ನ ಒಂದೇ PDF ಕಡತವಾಗಿ ಮಾಡಿಟ್ಟುಕೊಳ್ಳುವ ಅವಶ್ಯಕತೆ ಲೀನಕ್ಸಿನಲ್ಲಿ ನನಗೆ ಬೇಕಾಗುವದಿಲ್ಲ . ಮೊದಲ ಪುಟದ ಮೇಲೆ ಒಂದು ಬರಿ ಕ್ಲಿಕ್ಕಿಸಿ ಅದು ತೆರೆದ ಮೇಲೆ , next ಅಥವಾ previous ಐಕಾನ್ ಮೇಲೆ ಕ್ಲಿಕ್ಕಿಸುತ್ತಾ ಇದ್ದರಾಯಿತು.

Rating
No votes yet

Comments