ಸಂಪದದಲ್ಲಿ ತಾಂತ್ರಿಕ ಅನುವಾದ (ಸರತಿಯ ಸಾಲು ಭರತಿ!)

ಸಂಪದದಲ್ಲಿ ತಾಂತ್ರಿಕ ಅನುವಾದ (ಸರತಿಯ ಸಾಲು ಭರತಿ!)

ಅನೇಕ ದಿನಗಳಿಂದ ಸಂಪದದಲ್ಲಿ ತಾಂತ್ರಿಕ ಅನುವಾದ ಮಾಡುತ್ತಿದ್ದೇನೆ.
ಅಲ್ಲಿ
ನಾನು ಬಳಸಿರುವ ಶಬ್ದಗಳು

ಲಾಗಿನ್ / ಲಾಗೌಟ್ ಗೆ - ಒಳಬನ್ನಿ /ಹೊರಹೋಗಿ ಬಳಸಿದ್ದೇನೆ
ಫೈಲ್ - ಕಡತವಾದರೆ ಡೈರೆಕ್ಟರಿ- ಕಡತಕೋಶವಾಗಿದೆ
ಫೀಲ್ಡ್ - ಗೆ ಮೊದಲು ಅಂಶ ಎಂದು ಬಳಸಿದೆ. ಈಗ ಮಾಹಿತಿಅಂಶ ಸರಿ ಎನಿಸಿದೆ
ಅಟ್ರಿಬ್ಯೂಟ್ - ಗುಣಲಕ್ಷಣ
ಡಾಟಾಬೇಸ್ - ದತ್ತಸಂಚಯ
configurAtion -ಸಂರಚನೆ
customisation- ಒಗ್ಗಿಸಿಕೊಳ್ಳುವಿಕೆ
settings - ನಿಶ್ಚಯಗಳು/ನಿರ್ಧಾರಗಳು
defaults - ಪೂರ್ವನಿಶ್ಚಯಗಳು/ಪೂರ್ವನಿರ್ಧಾರಗಳು
conference - ಸಮ್ಮೇಳನ
session- ಅಧಿವೇಶನ
flag-ಪತಾಕೆ

ಐಡಿ,ಟ್ಯಾಬ್ ಗಳನ್ನು ಹಾಗೆಯೇ ಬಿಟ್ಟಿದ್ದೇನೆ.
ರ್ಯಾಂಕ್ ಮತ್ತು ರೇಟಿಂಗ್ - ಕ್ರಮಾಂಕ ಬಳಸಿದ್ದೇನೆ.

ಬಡ್ಡಿ-ಪೌನ್ಸ್ ಗೆ ಗೆಳೆಯನ-ಮೇಲೆ-ಎರಗಪ್ಪ ಎಂದು ಅನುವಾದಿಸಿದ್ದೆ . ಅದನ್ನು ಮರೆಯದೆ ಮರ್ಯಾದೆಯುತವಾಗಿ ಗೆಳೆಯ-ಬಂದ್ರೆ-ಹೇಳಪ್ಪ ಎಂದು ಬದಲಿಸಬೇಕು.

ಕ್ಯೂ ಫುಲ್ - ಅನ್ನು ಸರತಿಯ ಸಾಲು ಭರತಿ ಎಂದು ಪ್ರಾಸಬದ್ಧವಾಗಿ ಅನುವಾದಿಸಿದ್ದೇನೆ!.

ಈಗ ಮೂರರಲ್ಲಿ ಎರಡು ಭಾಗ ಮುಗಿದಿದೆ. ಇನ್ನೂ ೫೨೦೦ ಶಬ್ದ/ವಾಕ್ಯಗಳಿವೆ . [:http://translate.sampada.net|ನೀವೂ ಸಹಕರಿಸುವಿರಾ?] ಕನ್ನಡದಲ್ಲಿ ಒಂದು ಕಂಪ್ಯೂಟರ್ ಅನ್ನು ಬೇಗೆ ನೋಡೋಣವೇ?

Rating
No votes yet

Comments