ಕಾಪ್!!!
ಕಾಪ್ ಅಂತ ಕರೆಸಿಕೊಳ್ಳುವ ಈ ಅಮೇರಿಕಾದ ಪೋಲೀಸಪ್ಪನ ನೋಡಿದಾಗಲೆಲ್ಲಾ ಇವನ ಮೇಲೆ ಒಂದು ಕವಿತೆ ಬರೆಯಬೇಕೆನಿಸುತ್ತಿತ್ತು. ಸೂಟು-ಬೂಟು ಹಾಕ್ಕೊಂಡು, ಟಾಕು-ಟೀಕಾಗಿ ನಡ್ಕೊಂಡು, ಮೈಕ್ರೋ-ಫೋನಲ್ಲಿ ಕೂಗ್ಕೊಂಡು, ವಾಕಿ-ಟಾಕೀಲಿ ಮಾತಾಡ್ಕೊಂಡು ಇರೋ ಈ ಮಹಾನುಭಾವನಿಗೆ ಚಡ್ಡಿ ಯೂನಿಫಾರ್ಮ್ ಗೆ ಮಾತ್ರ ಇನ್ನೂ ಯಾಕೋ ಕ್ವಾಲಿಫೈ ಆಗಲಿಲ್ಲ? ಇವನನ್ನು ಹೀಗೆ ಗುಣಗಾನ ಮಾಡಬಹುದೇ?
ಕಾಪ್!!!
ಕಾಪ್ ಉ ಕಾಪ್ ಉ ಅಂತಾರಪ್ಪ
ಅವನು ಯಾರು ಗೊತ್ತೇನಪ್ಪ?
ಅಮೇರಿಕಾದ ಪೋಲೀಸಪ್ಪ
ಅಷಿಷ್ಟಲ್ಲ ಅವನ ಕಪ್ಪ
ಗರ್ವ-ಗತ್ತಿಗೆ ಕಡಿಮೆ ಇಲ್ರೀ
ಸೂಟು-ಬೂಟು ಫರ್ಸ್ಟ್ ಕ್ಲಾಸ್ ಕಂಡ್ರೀ
ಬಿಳಿ ತೊಗಲು ಇದ್ರೆ ಸಾಕ್ರೀ
ಕಳೇ ಮಾತ್ರ ಕೇಳ್ಲೇ ಬೇಡ್ರೀ
ಸೊಂಟದಲ್ಲಿತ್ತು ಭಾರವಾದ ಗನ್ನು
ಸೆಗೆಸ್ಕೊಂಡಿದ್ದ ಕೋಲ್ ಒಂದನ್ನು
ಕೈಯಲ್ಲಿತ್ತು ಬೇಡಿ ಚೈನು
ಕರೆದ್ ಹಾಕ್ದಾ ಗಂಟ್ ಎರಡನ್ನು
ರೇಡಾರ್ ಹಾಕಿ ನೋಡೇ ಬಿಟ್ಟ
ಸ್ಪೀಡು ಅಂತ ಹೇಳೇಬಿಟ್ಟ
ಪೆನ್ನಲಿ ಗೀಚಿ ಹರಿದೇ ಬಿಟ್ಟ
ಟಿಕೇಟ್ ಅಂತ ಕೊಟ್ಟೇ ಬಿಟ್ಟ
ಯಾಕ್ ಹೀಗ್ ಡ್ರೈವು ಮಾಡ್ತೀಯಮ್ಮ
ಬ್ರೆತ್ ಟೆಸ್ಟ್ ಈಗ್ಲೇ ಆಗ್ಬೇಕಮ್ಮ
ಆಕಡೆ ಈಕಡೆ ನೋಡ್ ಬೇಡಮ್ಮ
ನಿನ್ನ ಬಡಿ ಇಲ್ಲಿಲ್ಲಮ್ಮ
ರೈಡು ನಿನಗೆ ಸಿಕ್ಕುತ್ತಪ್ಪ
ಮನೆಗಲ್ಲ ಸ್ಟೇಶನ್ಗಪ್ಪ
ರೆಸ್ಟು ನಿನಗೆ ಬೇಕಪ್ಪ
ಬಾರ್ (ಕಂಬಿ) ಹಿಂದೆ ಒಳಿತಪ್ಪ.
Comments
ಉ: ಕಾಪ್!!!
In reply to ಉ: ಕಾಪ್!!! by shreekant.mishrikoti
ಉ: ಕಾಪ್!!!
ಉ: ಕಾಪ್!!!
In reply to ಉ: ಕಾಪ್!!! by hariharapurasridhar
ಉ: ಕಾಪ್!!!
In reply to ಉ: ಕಾಪ್!!! by rasikathe
ಉ: ಕಾಪ್!!!