ಮಸ್ತ್ ಮಜಾ ಮಾಡಿ

ಮಸ್ತ್ ಮಜಾ ಮಾಡಿ

 ನಾನು ನಿನ್ನೆ(೨೦/೧೨/೨೦೦೮ ಶನಿವಾರ) ಅದರ ಹಿಂದಿನ ದಿನ, ದಿನಪತ್ರಿಕೆಗಳಲ್ಲಿ ಮಸ್ತ್ ಮಜಾ ಮಾಡಿ ಎಂಬ ಚಿತ್ರದ ವಿಮರ್ಶೆ ನೋಡಿ, ಅದ್ರಲ್ಲಿ ಈ ಚಿತ್ರದ ಬಗ್ಗೆ ಚೆನ್ನಾಗಿ ಬರೆದು ಹೊಗಳಿದ್ದು ನೋಡಿ, ಮಾರನೇ ದಿನ ೨೦.೧೨.೨೦೦೮ ರಂದು ಅದನ್ನು ನೋಡೇ ಬಿಡೋಣ ಅಂದುಕೊಂಡು ರಾಜಾಜಿ ನಗರದಲ್ಲಿರುವ ನವರಂಗ್ ಥೇಟರ್ ಗೆ ಹೋದೆ.

ಅಲ್ಲಿ ೫೦ ರುಪಾಯಿ ಕೊಟ್ಟು ಬಾಲಕನಿ ಟಿಕೆಟ್ ತೊಗೊಂಡು ಎಂಟರ್ ಆದೆ... ಆ ಬಾಲ್ಕನಿ ಸೀಟ್ ಗಳೋ ಇಲ್ಲ B.M.T.ಕ ಸೀಟೋ ಅನ್ನೋ ಹಾಗೆ ಇದ್ವು, ಆಗಿದ್ದಾಗಲಿ ನೀರಿಗೆ ದುಮಿಕಾಗಿದೆ ಅಂದುಕೊಂಡು ಚಿತ್ರ ನೋಡಲು ಅಣಿಯಾದೆ, ಶುರುವಾಯ್ತು ಚಿತ್ರ, ಅದರ ಹಿಂದೆಯೇ ಚಿತ್ರ-ವಿಚಿತ್ರ ಶಬ್ದ! ಇದೇನು ಅಂತ ಸುತ್ತ-ಮುತ್ತ ಕಣ್ಣು ಆಯಿಸಿದರೆ ಗೊತ್ತಾಗಿದ್ದು ಎಡ ಪಕ್ಕದ ಸ್ಪೀಕರ್ ವರ್ಕ್ ಆಗ್ತ ಇಲ್ಲ.... ಶಬ್ದ ಬರುತ್ತಿರುವುದು ಕೇವಲ ತೆರೆಯ ಹಿಂದಿನ(ಪರದೆ) ಸ್ಪೀಕರ್ ಇಂದ ಮಾತ್ರ....

ಇದರ ಮೊದಲ ಸ್ವಲ್ಪ ಭಾಗ ಹಿಂದಿ ಸೂಪರ್ ಹಿಟ್ ಚಿತ್ರ ಗೋಲ್ಮಾಲ್ ತರಹ, ನಂತರ ಇನ್ನೊದು ಸೂಪರ್ ಹಿಂದಿ ಚಿತ್ರ ಧಮಾಲ್ ತರಹ ಅನ್ನಿಸಿದರೆ ಅದು ನಮ್ಮ ತಪ್ಪಲ್ಲ... ಈ ನಿರ್ದೇಶಕ ಮಹಾಶಯ(ಆರ್ ಅನಂತರಾಜು ) ಯಾವುದನ್ನು ಕಾಪಿ ಮಾಡಬೇಕು, ಯಾವುದು ಬಿಡಬಾರದು ಅಂತ ಗೊಂದಲಕ್ಕೆ ಒಳಗಾಗಿ, ಎರಡು ಹಿಂದಿ ಚಿತ್ರ ಕಾಪಿ ಮಾಡಿ ಅವರ ಗೊಂದಲವನ್ನ ನಮಗೆ ವರ್ಗಾಯಿಸಿ ಅವರು ಆರಾಮವಾಗಿ ಈಗ ಬೇರೆ ಸೂಪರ್ ಹಿಂದಿ ಚಿತ್ರಗಳನ್ನು ಸಿ.ಡಿ ಹಾಕಿಕೊಂಡು ನೋಡುತ್ತಿದ್ದರಂತೆ(ಇನ್ನು ಮುಂದೆಯೂ ಇದೆ ತರಹ ಎರಡು ಸಿನಿಮಾ ಕಾಪಿ ಮಾಡಲು!), ಇನ್ನು ಆ ಕಾಪಿಯನ್ನಾದರೂ ಸರಿಯಾಗಿ ಮಾಡಿದ್ದರ?....

ಖಂಡಿತ ಇಲ್ಲ

 

ನೀವೇನಾದ್ರು ಹಿಂದಿ ಚಿತ್ರಗಳನ್ನು ನೋಡಿದ್ದರೆ . ಅಲ್ಲಿ ಅಜಯ್ ದೇವಗನ್=ವಿಜಯ್ ರಾಘವೇಂದ್ರ,ಶ್ರಮಾನ್ ಜೋಷಿ=ದಿಗಂತ್,ಅರ್ಷಾದ್ ವಾರ್ಸಿ=ಕೋಮಲ್,ತುಸ್ಸ್ಹಾರ್ ಕಪೂರ್=ನಾಗಕಿರಣ್, ಹಾಗಾದ್ರೆ ನಮ ಕಿಚ್ಚ ಸುದೀಪ್ ಮತ್ತು ಇತರರು ಎಲ್ಲಿಂದ ಬಂದ್ರು?.... ಅದು ಇನ್ನೊದು ಕಾಪಿ,ಹೆಸರು ಧಮಾಲ್... ಅಲ್ಲಿ ಸಂಜಯ್ದುತ್ತ್=ಸುದೀಪ್,ರಿತೇಶ್ ದೇಶ್ಮುಖ್, ಮುಂತಾದವರು(ಈ ಎಲ್ಲ ಹಿಂದಿ ನಟರು ಎಲ್ಲ ರೀತಿಯ ಪಾತ್ರ ಮಾಡಿ ಹೆಸರು ಮಾಡಿದ್ದಾರೆ) ಅವರ ಪಾತ್ರಗಳಿಗೆ ಇಲ್ಲಿ ನ್ಯಾಯ ಒದಗಿಸುವವರು ಕೇವಲ ಕೋಮಲ್ ಮತ್ತು ಸಾಧು ಕೋಕಿಲ ಮಾತ್ರ....

ಇನ್ನು ವಿಜಯ್ ರಾಘವೇಂದ್ರ, ಕಾಮಿಡಿಗೆ ಖಂಡಿತ ಒಗ್ಗೊಲ್ಲ,ನಾಗ ಕಿರಣ್ ಅಭಿನಯ ಅಂದರೆ ಅವರು ನಿಜವಾಗಲೂ ಮಾತು ಬರದವರಾಗಿದ್ದರೆ ಎಸ್ಟೋ ಒಳ್ಳೆದಾಗ್ತಾ ಇತ್ತು... ಇನು ದಿಗಂತ್ ಅಭಿನಯದಲ್ಲಿ ಪಳಗಬೇಕು, ಇನ್ನು ಅಲ್ಲಲ್ಲಿ ಬರುವ ಪಾತ್ರಗಳಿಗೆ ಏನು ಕೆಲಸವಿಲ್ಲ ಅವರು ನಮ್ಮನ್ನು ಹಿಂಸಿಸುವುದು ಮಾತ್ರ ಹಾಸ್ಯ ಅಂತ ಕರೆಯಬಹುದೇನೋ, ಒಟ್ಟಿನಲ್ಲಿ ಇದು ಹಿಂದಿ ಚಿತ್ರಗಳೆರಡರ ಕೆಟ್ಟ ಕಾಪಿ..

ನಾನು ಪ್ರತಿ ವಾರ ತಪ್ಪದೆ ಒಂದು ಚಿತ್ರ ನೋಡುತ್ತೇನೆ, ಮೊದಲ ಆದ್ಯತೆ ಕನ್ನಡ ಚಿತ್ರ, ನಂತರ ಹಿಂದಿ, ಇಂಗ್ಲಿಷ್, ತೆಲುಗು...

ಕೆಲ ಒಳ್ಳೆ ನಿರ್ದೇಶಕರು (ರಾಜೇಂದ್ರ ಸಿಂಗ್ ಬಾಬು, ಡಿ ರಾಜೇಂದ್ರ ಬಾಬು, ಪ್ರೇಂ,ರವಿಚಂದ್ರನ್,ಉಪೇಂದ್ರ,ಮುಂತಾದವರು ) ಒಳ್ಳೊಳ್ಳೆ ಚಿತ್ರ ಕೊಡುತ್ತಾ ನಮ್ಮನ್ನು ಕನ್ನಡ ಚಿತ್ರ

ಇದು ನನ್ನ ವಿಯುಕ್ತಿಕ ಅಭಿಪ್ರಾಯ, ನಿಮ್ಮಲ್ಲಿ ಕೆಲವರಿಗೆ ಆ ಚಿತ್ರ ಅದ್ರ ಹೆಸರಿನಂತೆ ಮಜಾ ಮಾಡಿಸಿರಬಹುದು ಆದರೆ ನನಗೆ ಸುಸ್ತು ಮಾಡಿಕೊಂಡು ಮನೆಗೆ ಹೋಗುವಂತೆ ಮಾಡ್ತು... ನೀವು ಆ ಚಿತ್ರ ನೋಡಿದ್ದರೆ ನಿಮಗೆ ಏನನ್ನಿಸಿತು? ನೀವು ಒರಿಜಿನಲ್ ಹಿಂದಿ ಚಿತ್ರಗಳನ್ನ ನೋಡಿದ್ದೀರ? ಯಾವುದು ಚೆನ್ನಾಗಿದೆ? ಅಭಿಪ್ರಾಯ ತಿಳಿಸ್ತೀರಲ್ಲ?.... v

Rating
No votes yet

Comments