ಎಸೆದ ಬೂಟು ಮೊದಲು ತಾಗುವುದು ಪತ್ರಿಕಾಧರ್ಮಕ್ಕೆ ..

ಎಸೆದ ಬೂಟು ಮೊದಲು ತಾಗುವುದು ಪತ್ರಿಕಾಧರ್ಮಕ್ಕೆ ..

Comments

ಬರಹ

ಮೊನ್ನೆ ಮೊನ್ನೆ ಬುಶ್ ಮಾತಾಡುವಾಗ ಇರಾಕಿ ಪತ್ರಕರ್ತ ಬೂಟು ಎಸೆದ ಸಂಗತಿ ಇನ್ನಿಲ್ಲದ ವಿಷಯದ ಚರ್ಚೆಗೆ ಗ್ರಾಹ್ಯವಾಗಿದೆ. ಬುಶ್ ಇಡೀ ತನ್ನ ಆಡಳಿತದ ಕಾಲಾವಧಿಯಲ್ಲಿ ಮಾಡಿದ ಹಲವಾರು ತಪ್ಪುಗಳಿಗೆ ಮುಖ್ಯವಾಗಿ ಇರಾಕಿನ ಮೇಲಿನ ಧಾಳಿಗೆ ಮನನೊಂದ ಆ ದೇಶದ ಪತ್ರಕರ್ತನೊಬ್ಬ ಮಾಡಿದ ಕೃತ್ಯವಿದು.

ಆದರೆ ಇಲ್ಲೊಂದು ಸೂಕ್ಷ್ಮವಿದೆ. ಆತ ಸಾಮಾನ್ಯ ನಾಗರಿಕನಲ್ಲ ಅಥವಾ ವೇಷಧಾರಿ ಪತ್ರಕರ್ತನೂ ಅಲ್ಲ. ಆತ ನೊಂದಾಯಿತ ಪ್ರತಿಷ್ಠಿತ ವಾಹಿನಿಯೊಂದರ ವರದಿಗಾರ. ಪತ್ರಕರ್ತ ಯಾವುದೇ ಸಂದರ್ಭದಲ್ಲಿ ಭಾವಾವೇಶಕ್ಕೆ ಒಳಗಾಗಬಾರದು. ಯಾವುದೇ ಪಟ್ಟಭದ್ರರ ಕೈಗೊಂಬೆಯು ಆಗಬಾರದು. ಆತ ಮೊದಲು ಪತ್ರಕರ್ತ ನಂತರ ಇರಾಕಿ ಪ್ರಜೆ. ಹಲವಾರು ಪತ್ರಕರ್ತರು ತಮ್ಮ ದೇಶದ ಪ್ರತಿಷ್ಠೆಯನ್ನು ಕುಗ್ಗಿಸಬಲ್ಲ ಸತ್ಯಗಳನ್ನು ನಿರ್ಭಿಡೆಯಿಂದ ಹೊರಹಾಕಿದ್ದಾರೆ. ಹೀಗಿರುವಾಗ ಒಂದು ದೇಶದ ಒಂದು ಗುಂಪಿನ ವಕ್ತಾರರಂತೆ ವರ್ತಿಸುವುದು ಪತ್ರಕರ್ತನಾದ ಆತನಿಗೆ ಎಷ್ಟು ಸರಿ?

ಹಾಗೆಂದು ಇಲ್ಲಿ ಬುಶ್ ನನ್ನು ಸಮರ್ಥಿಸುತ್ತಿಲ್ಲ. ಬದಲಾಗಿ ಮಾಧ್ಯಮವೆಂಬ ಆಯುಧವನ್ನೇ ಬಳಸಿ ಬುಶ್ ವಿರುದ್ಧ ಅಸ್ತ್ರವಾಗಿ ಬಳಸಬಹುದಿತ್ತು. ಇನ್ನು ಮುಂದೆ ಇದೇ ಇತರರಿಗೆ ಮಾದರಿಯಾಗಬಾರದು ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet