ಬಾನಿನುಲಿ

ಬಾನಿನುಲಿ

ಬಾನಿನುಲಿ *

ಬಸವಳಿದುಳಿದಿದೆ ನಮ್ಮ ನುಡಿ
ಬಸವಳಿದುಳಿದಿದೆ ನಮ್ಮ ನುಡಿ

ಕಬ್ಬಿಗನು ಕನವರಿಸಿದ ಮುಲುಕಿನಲಿ
ಅಬ್ಬರದ ಓರಾಟದ ಅಮಲಿನಲಿ

ಪುಡಾರಿಯ ನಾಲಗೆ ಸೀಳಿನಲಿ
ಹೀರೋನ ರಂಗಿನ ನಕಲಿನಲಿ

ಹಸಿರಾಡುಂಬೋಲದ ಮೈಕಿನಲಿ
ನುಸುಳಿ ನವಿರೆಬ್ಬಿಸಿದ ಬಾನಿನುಲಿ

ಬಸವಳಿದುಳಿದಿದೆ ನಮ್ಮ ನುಡಿ | ಹೇಗೋ
ಬಸವಳಿದುಳಿವುದು ನಮ್ಮ ನುಡಿ

-ಪ್ರಭು ಮೂರ್ತಿ
೨೦೦೬೧೨೨೦

* ಹಿಂದೆ ಯಾವಗಲೋ ಹಿಂದಿ-ಇಂಗ್ಲಿಷ್ ಕಾಮೆಂಟರಿಯ ನಡುವೆ, ಫೀಲ್ಡಿಂಗ್ ಮಾಡುತ್ತಿದ್ದ ನಮ್ಮ ಹುಡುಗರು ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಿದ್ದನ್ನು ಕೇಳಿ ಮೈನವಿರೆದ್ದಿದ್ದ ನೆನಪು. ಈಚೆಗೆ ನನ್ನ ಬಾಲ್ಯದ ಸ್ನೇಹಿತ ಮಧು ಕೃಷ್ಣಮೂರ್ತಿ ಬೇ ಏರಿಯಾದ ಸ್ಟ್ಯಾನ್ ಫರ್ಡ್ ರೇಡಿಯೋದಲ್ಲಿ ನಮ್ಮ ನಾಡನ್ನು ಕುರಿತಾಗಿ "ಸುವರ್ಣಕರ್ನಾಟಕ ವೈಭವ" ಎಂಬ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನಡೆಸಿದರು. ಆ ದಿನಗಳಲ್ಲಿ ಶಿವಮೊಗ್ಗದ ಸಾಹಿತ್ಯ ಸಮ್ಮೇಳನ ಹಾಗೂ "ಚಂಪಾರಂಪ"ಗಳು ಸುದ್ದಿಮಾಡುತ್ತಿದ್ದವು. ಮಧು ತನ್ನ ರೇಡಿಯೋ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜರು, ಕವಿಗಳು, ನಟರು ಮತ್ತು ಹೋರಾಟಗಾರರನ್ನು ಕುರಿತು ಹೇಳುತ್ತಾ ಕ್ರಿಕೆಟ್ ಆಟಗಾರರನ್ನು ಮರೆಯಲಿಲ್ಲ. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಕಿರುಗವನ. (ಆ ರೇಡಿಯೋ ಕಾರ್ಯಕ್ರಮವನ್ನು ಇಲ್ಲಿ ಆರ್ಖೈವ್ ಮಾಡಲಾಗಿದೆ: 
http://itsdiff.com/Archives.html )

Rating
No votes yet

Comments