ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....
ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಬಗ್ಗೆ...ನಾನು ಬರೆದು ಹಾಕಬೇಕಿದೆ ..
ಆಲೂರು ವೆಂಕಟರಾಯರು ಅವರು ಕುಲ ಪುರೋಹಿತ ಆದದ್ದು ಹೇಗೆ? ಏಕೆ ?
ಅವರ 'ನನ್ನ ಜೀವನ ಸ್ಮೃತಿಗಳು' ಕನ್ನಡಿಗರೆಲ್ಲರೂ ಓದಬೇಕಾದ ಪುಸ್ತಕ . ಆದರೆ ಅದು ಮಾರುಕಟ್ಟೆಯಲ್ಲಿ ಇಲ್ಲ . ಪ್ರಕಾಶಕರು - ಮನೋಹರ ಗ್ರಂಥಮಾಲೆ , ಧಾರವಾಡ .ಅವರ ಹತ್ತಿರವೂ ಪ್ರತಿಗಳು ಇಲ್ಲ .
ಅವರು ಏನು ಮಾಡಿದರು ? ಅನ್ನುವದು ಬೇರೆಡೇ ಸಿಕ್ಕೀತು . ಆದರೆ ಏಕೆ ಮಾಡಿದರು?
ನಿಮಗೆ ಗೊತ್ತೆ? ಕನ್ನಡ/ ಕರ್ನಾಟಕದ ಬಗ್ಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.
ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ. ನನ್ನ ಗುರಿ -
ಕನ್ನಡ / ಕರ್ನಾಟಕ ದ ಮೂಲಕವೇ ನನ್ನ ಸಮಾಜ ಸೇವೆ / ದೇಶಸೇವೆ/ ದೇವರ ಸೇವೆ.
ಅಂತ ಯೋಚಿಸಿ ಆ ಪ್ರಕಾರ ಕರ್ನಾಟಕ/ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು . ತಮ್ಮ ಉದ್ದೇಶ ಈಡೇರಿದ ಮೇಲೆ ನಂತರ ಸಮಾಜ್ಕ ಜೀವನದಿಂದ ಹಿಂದೆ ಸರಿದು ಆಧ್ಯಾತ್ಮಕ್ಕೆ ಹೋದರು. ಈ ಬದಲಾವಣೆ ಅವರ ಜೀವನದಲ್ಲಿ ಹೇಗೆ ಬಂತು ಎಂಬುದು ಕುತೂಹಲಕರ.
'ನಾನು ಜಾಣನಲ್ಲ ; ಜನಬಲ ಧನಬಲ ಬುದ್ಧಿಬಲ ಏನೂ ಇಲ್ಲ ...
ಜನರನ್ನು ಹುರಿದುಂಬಿಸುವ ಭಾಷಣ ಕಲೆಯೂ ನನ್ನಲ್ಲಿಲ್ಲ ....
ಆದರೆ ಈ ಕಣಸು (vision) - ಕನ್ನಡ ಎಂಬುದು ನನ್ನಂಥ ಸಾಮಾನ್ಯನಿಗೆ ಈ ಶಕ್ತಿ ಕೊಟ್ಟಿತು.' ಎಂದರು.
ಸ್ವಲ್ಪ ಸಮಯ ಸಿಗಬೇಕಿದೆ . ಬರೆಯುವೆ.
ನಿರೀಕ್ಷಿಸಿ.
Comments
Re: ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....