ಕಾಕಂಬಿ - ೧೦೧.೩

ಕಾಕಂಬಿ - ೧೦೧.೩

ಪ್ರತಿ ಬುಧವಾರ ಕನ್ನಡದ ಸರ್ಕಾರಿ ಒಡೆತನದ ಎಫ್. ಎಮ್ ವಾಹಿನಿ ೧೦೧.೩ ರಲ್ಲಿ ಬೆಳಿಗ್ಗೆ ೮ ರಿಂದ ೯ ಘಂಟೆಯವರೆಗೆ ಕಾಕಂಬಿ ಕಾರ್ಯಕ್ರಮ ಬಿತ್ತರವಾಗುತ್ತದೆ, ಇದು ಯಾವುದೋ ಸರ್ಕಾರಿ ಅಧಿಕಾರಿಗಳ ಸಂದರ್ಶನ ಅಥವಾ ಮೂರು ಬಿಟ್ಟ ರಾಜಕಾರಣಿಗಳ ಭಾಷಣ ಅಲ್ಲ, ಸಾಧಕರ ಬದುಕು.
ಇದರಲ್ಲಿ ಬರುವ ಪ್ರತಿ ವ್ಯಕ್ತಿಗಳು ಯಾವುದೋ ಚುನಾವಣೆ ಗೆದ್ದು ಸಾಧಿಸಿದ್ದೋ, ಅಥವಾ ಇನ್ನಾವುದೋ ಯೋಜನೆಗಳನ್ನು ಮುಗಿಸಿದ್ದೋ, ಮತ್ತಾವುದೋ ಕೆಲಸಕ್ಕೆ ಬಾರದ "ಹೀಗೂ ಉಂಟೇ", "ನಿಶಾಚರಿ", "ಕ್ರ್ಯೆಂ ಸ್ಟೋರಿ", "ಕ್ರ್ಯೆಂ ಡ್ಯೆರಿ", "ನ್ಯೆಟ್ ಬೀಟ್" ತರಹದ ಕಾರ್ಯಕ್ರಮಗಳಲ್ಲ,

ಸಂಪದಿಗರೆಲ್ಲರೂ ನನ್ನ ಮನವಿ ಇಷ್ಟೆ : ಈ ಕಾರ್ಯಕ್ರಮದಲ್ಲಿ ಬಂದು ಹೋದ ಶುಭಾ (CA), ಮಹದೇವ್(ಅನಾಥ ಹೆಣಗಳ ಸಂಸ್ಕಾರಿ), ನಾಗಮ್ಮ, ಐ.ಎಸ್. ಪಾಟೀಲರಂತಹ ನೂರಾರು ಸಾಧಕರು ಮತ್ತವರ ಬವಣೆ, ಮತ್ತಾವುದೋ ಮರೆಯಲಾಗದ ಸಾಧನೆ ಎಲ್ಲವೂ ವಾರದಲ್ಲಿ ಬಿಡುವು ಮಾಡಿಕೊಂಡು ಕೇಳಲು ಪ್ರಯತ್ನಿಸಿ, ಅವರೆಲ್ಲರ ಬವಣೆ, ಕಷ್ಟ, ಪರಿಪಾಟಲುಗಳ ಮುಂದೆ ನಮ್ಮದೆಲ್ಲವ ಗೌಣ್ಯ.
ಬರೀ ನೀವು ಕೇಳಲು ನಾ ಇಷ್ಟು ಉದ್ದುದ್ದದ ವಾಕ್ಯಗಳನ್ನು ಸೇರಿಸುವ ಅವಶ್ಯಕತೆ ಇರಲಿಲ್ಲ, ನಿಮ್ಮ ಕ್ಯೆಲಾದ ಅಳಿಲು ಸೇವೆ ಮಾಡಲಿಚ್ಚಿಸಿ.

ಮಹದೇವ್ ಬಗ್ಗೆ ಬರೆಯಲು ನಾನು ಇನ್ನೊಂದು ಹೊಸ ಬ್ಲಾಗ್ ಬರೆಯಬೇಕೆಂದು ಕೊಂಡಿದ್ದೇನೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದರಲ್ಲಿ ನಿರತನಾಗಿದ್ದೇನೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ, ಎಲ್ಲಾ ಪೋಲಿಸ್ ಸ್ಟೇಷನಗಳಲ್ಲಿ ಮಹದೇವ್ ಹೆಸರು ಚಿರಪರಿಚಿತ. ಬೆಂಗಳೂರಿನಲ್ಲಿ ಸಿಗುವ ಎಷ್ಟೋ ಅನಾಥ ಹೆಣಗಳಿಗೆ ಮುಕ್ತಿ ಕೊಡುವ ಕಾರ್ಯವನ್ನು ದಶಕಗಳಿಂದಲೇ ಮಾಡುತಾ ಬಂದಿರುವ ಮಹದೇವ್ ಈಗ ವಯಸ್ಸಾಗಿದೆ, ಈ ಕಾರ್ಯವನ್ನು ಅವರು ಅವರ ಮಗನಿಗೆ ವಹಿಸಿದ್ದಾರೆ, ಅವನೇನು ಅನಕ್ಷರಸ್ಥನಲ್ಲ ಪದವಿ ವ್ಯಾಸಾಂಗ ಮಾಡುತ್ತಿದ್ದಾನೆ ಇದುವರೆಗೂ ಅವನು ಮುಕ್ತಿ ನೀಡುರುವ ಹೆಣಗಳ ಸಂಖ್ಯೆ ೧೩೦೦೦೦ ದಷ್ಟು, ಬಹುಶಃ ಅವನ ಹೆಸರು ರಾಜವರ್ಧನ ಎಂದಿರಬಹುದು, ಮುಂದೆ ಅವರ ಬದುಕಿನ ಪೂರ ಚಿತ್ರಣ ನೀಡುತ್ತೇನೆ.

 

 

Rating
No votes yet

Comments