ನನ್ನ ಕರ್ಮ ?!

ನನ್ನ ಕರ್ಮ ?!

ಮನುಷ್ಯರು ಯಾವ ವರ್ಣ, ಜಾತಿ, ಪಂಗಡದವರಾದರೂ, ಎಲ್ಲರಲ್ಲೂ ಕೆಂಪು ರಕ್ತವೇ ಹರಿವುದು. ಆದ್ದರಿಂದ, ಮನುಷ್ಯರೆಲ್ಲರೂ ಒಂದೆ. ಹೀಗೆ ಈ ನಡುವೆ ಮಾತುಕತೆ.

ಆದರೆ, ನಾನು* ಆಪ್ಗನಿಸ್ತಾನಿನ ಗುಡ್ಡಗಾಡಿನ ಪುಟ್ಟ ಗುಹೆಯೊಂದರಲ್ಲಿ ಅಡಗಿರುವ ತಾಲಿಬಾನಿ ಅಪ್ಪನಿಗೆ ಮಗನಾಗಿ ಹುಟ್ಟಲಿಲ್ಲ. ಆದ್ದರಿಂದ, ಬಹುಶಃ ಮನುಷ್ಯರನ್ನು ಬಿಡಿ, ಇರುವೆಯನ್ನು ಸಾಯಿಸಲು ಸಹ ಹಿಂದೆ ಮುಂದೆ ನೋಡುವೆ. ಮತ್ತು, ನಾನು* ಆಫ್ರಿಕಾದ ಹುತು ಬುಡಕಟ್ಟಿನ ಹಲವು ಹೆಣ್ಣುಮಕ್ಕಳನ್ನು ಚಿತ್ರಹಿಂಸೆ ಮಾಡಿ ಅತ್ಯಾಚಾರವೆಸಗಿದ ತಂದೆಗೆ ಮಗನಾಗಿ ಜನಿಸಲಿಲ್ಲ. ಆದ್ದರಿಂದ, ಬಹುಶಃ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವೆ. ಅಥವ ಅಷ್ಟೆ ಏಕೆ, ನಾನು* ಜಯಮಹಲ್ಲಿನ ನಾಲಕ್ಕನೆ ರಸ್ತೆಯ ಬದಿಯಲ್ಲಿರುವ "ಆನಂದ ವಿಲಾಸ" ಮನೆಯಲ್ಲಿ ಮುಸುರೆ ತಿಕ್ಕುವ ಮುನಿಯಮ್ಮನ ಕುಡುಕ ಗಂಡ ರಾಮಯ್ಯನಿಂದಲೂ ಬರಲಿಲ್ಲ. ಆದ್ದರಿಂದ, ಬಹುಶಃ ಹಾರ್ವರ್ಡ್ ನಲ್ಲಿ ಪಿ.ಎಚ್.ಡಿ. ಮಾಡುತ್ತಿದ್ದೀನಿ.

ಹಾಗಾದರೆ, ನಾನು ಏನಾಗಬಹುದೆಂಬುದು ಬಹಳಷ್ಟು ಮಟ್ಟಿಗೆ ನಾನು ಹುಟ್ಟಿದ ವಾತಾವರಣವನ್ನು ಅವಲಂಬಿಸಿರುತ್ತೆ. ಮತ್ತು, ನಾನು ಹುಟ್ಟಿದ ವಾತಾವರಣ, ನನ್ನ ವರ್ಣ, ದೇಶ, ಭಾಷೆ, ಜಾತಿ ಎಲ್ಲವನ್ನೂ ಅವಲಂಬಿಸಿರುತ್ತೆ. ಆದ್ದರಿಂದ, ಮನುಷ್ಯರೆಲ್ಲರಲ್ಲೂ ಹರಿಯುವ ರಕ್ತ ಕೆಂಪಾದರೂ ಎಲ್ಲರೂ ಒಂದೆ ಅಲ್ಲ, ಬೇರೆ ಬೇರೆ. ಹೀಗಂತ ವಾದಿಸಬಹುದು.

ಉಹುಂ! ಬೇರೆ ಅಲ್ಲ, ಒಂದೆ, ಏಕೆಂದರೆ ಈ ಜಾತಿ, ಮತ ಎಲ್ಲ ಮಾನವ ನಿರ್ಮಿತ ಭೇದ ಭಾವ, ಹೀಗಂತಾರೆ ಕೆಲವರು.

ಈ ಸಮಾಜ ವಿಂಗಡನೆ ಕೇವಲ ಮಾನವ ನಿರ್ಮಿತವಾಗಿದ್ದರೆ, ಹಿಟ್ಲರಿನ ಮನೆಯಲ್ಲಿ ಗಾಂಧಿ ಹುಟ್ಟುತ್ತಿದ್ದ, ಗಾಂಧಿಯ ಮನೆಯಲ್ಲಿ ಒಸಾಮಾ ಹುಟ್ಟುತ್ತಿದ್ದ. ಹಾಗೆಷ್ಟು ಬಾರಿ ಆಗಿದೆ?
ಹಾಗಾದರೆ, ಈ ಮನುಷ್ಯರಲ್ಲಿರುವ ಭೇದಕ್ಕೆ ಯಾವುದೋ ಒಂದು ಗೂಡಾರ್ಥವಿದೆಯೆ? ನಾನು ಹಿಂದುವಾಗಿ ಭಾರತಲ್ಲಿ ಹುಟ್ಟಿದ್ದಕ್ಕೆ ಅರ್ಥವಿದೆಯೆ?

ಅರ್ಥವಿದೆಯಾದರೆ, ಏನದು? ನನ್ನ ಹಿಂದಿನ ಜನ್ಮದ ಕರ್ಮದ ಫಲವೆ? ಚಿಕ್ಕಂದಿನಲ್ಲಿ ಓದಲು ಅಲ್ಕೈದ manual ಬದಲು ಭಗವದ್ಗೀತೆ ಸಿಕ್ಕಿದ್ದು ನನ್ನ ಒಳ್ಳೆಯ ಕರ್ಮವೋ, ಕೆಟ್ಟದ್ದೋ?

ಅರ್ಥವಿಲ್ಲವೆಂದಾದರೆ, ಏನದು? ಎಲ್ಲೋ random ಆಗಿ ಹುಟ್ಟಬೇಕಾದ್ದು ಹಿಂದುವಾಗಿ ಹುಟ್ಟಿದೆನೆ? ಪ್ರಪಂಚದ ಯಾವುದೇ ಮೂಲೆಯಲ್ಲಿ ಹುಟ್ಟಿದರೂ ಇದೇ ಮನುಷ್ಯತ್ವ ಉಳಿಸಿಕೊಂಡಿರುತ್ತಿದೆನೆ?

* = ಈ ನಾನು actual ನಾನಲ್ಲ, hypothetical ನಾನು :-)

Rating
No votes yet

Comments